ಕನ್ಯಾ ರಾಶಿ: ಎಲ್ಲ ದಿಕ್ಕಿನಿಂದಲೂ ಅನುಕೂಲ ಬಾಗಿಲು ಬಡಿಯುತ್ತಿದೆ
ಈ ತಿಂಗಳು ಸಕಾರಾತ್ಮಕವಾಗಿರುತ್ತದೆ. ಅಲ್ಲಲ್ಲಿ ಕೆಲವು ಸವಾಲುಗಳನ್ನ ಎದುರಿಸಬೇಕಾಗುತ್ತದೆ. ಮಹಿಳೆಯೊಬ್ಬರಿಂದ ನಿಮಗೆ ಬೆಂಬಲ ದೊರೆಯುತ್ತದೆ. ಅದು ನಿಮ್ಮ ಹೆಂಡತಿ ಇರಬಹುದು, ತಂಗಿ ಅಥವಾ ಮಹಿಳಾ ಸಹೋದ್ಯೋಗಿ ಇರಬಹುದು. ಒಟ್ಟಿನಲ್ಲಿ ಎಲ್ಲ ದಿಕ್ಕುಗಳಿಂದಲೂ ಅನುಕೂಲಕರವಾದ ವಾತಾವರಣ ಇದೆ. ಹಣಕಾಸು, ವೃತ್ತಿ-ಕೌಟುಂಬಿಕ ಬದುಕು ಎಲ್ಲದರಲ್ಲೂ ಅನುಕೂಲಕರ ಸನ್ನಿವೇಶ ಕಾಣಿಸುತ್ತದೆ.
ಸಣ್ಣದೊಂದು ಪ್ರವಾಸ ಮಾಡುತ್ತೀರಿ. ನೀವು ತಯಾರಿ ನಡೆಸುತ್ತಿರುವ ಹಲವು ವಿಷಯಗಳಿಗೆ ಇದರಿಂದ ಅನುಕೂಲವಾಗುತ್ತದೆ. ಒಂದಿಷ್ಟು ಶ್ರಮ ಹಾಕಿದರೆ ವಿದೇಶಿ ಮೂಲದಿಂದಲೂ ಅದೃಷ್ಟ ಹುಡುಕಿಕೊಂಡು ಬರುತ್ತದೆ. ಆದರೆ ಅದಕ್ಕಾಗಿ ನೀವು ಹೆಚ್ಚಿನ ಶ್ರಮ ಹಾಕಲೇಬೇಕು. ನಿಮ್ಮ ಪ್ರಾಮಾಣಿಕತೆ ಕಾರಣಕ್ಕೆ ನಾನಾ ವಲಯದಿಂದ ಶಹಭಾಷ್ ಗಿರಿ ಗಿಟ್ಟಿಸುತ್ತೀರಿ.[ಕನ್ಯಾ : ಒಂದಿಷ್ಟು ಕೂಡಿಡಿ, ಆಪತ್ಕಾಲದಲ್ಲಿ ನೆರವಿಗೆ ಬಂದೀತು!]

ವೃತ್ತಿ: ಸೆ.22ರ ನಂತರ ಬುಧನು ನಿಮಗೆ ಅನುಕೂಲಕರವಾದ ವಾತಾವರಣ ಸೃಷ್ಟಿಸುತ್ತಾನೆ. ನಿಮ್ಮ ಮಾತು ತುಂಬ ಪರಿಣಾಮಕಾರಿಯಾಗಿರುತ್ತದೆ. ಅದರಿಂದ ಸಕಾರಾತ್ಮಕ ಫಲಿತಾಂಶವನ್ನೂ ನಿರೀಕ್ಷೆ ಮಾಡಬಹುದು. ಮಹಿಳಾ ಸಹೋದ್ಯೋಗಿಗಳು, ಬಾಸ್ ಇದ್ದರೆ ಅವರಿಂದ ನಿಮಗೆ ಬೆಂಬಲ ದೊರೆಯುತ್ತದೆ. ಸೀನಿಯರ್ಸ್ ಗಳಿಂದ ಕೂಡ ಪೂರ್ಣ ಬೆಂಬಲ ದೊರೆಯುತ್ತದೆ. ಅದರೆ ನಿಮ್ಮ ಬೆನ್ನ ಹಿಂದೆ ನಡೆಯುತ್ತಿರುವ ಕೆಲಸಗಳ ಬಗ್ಗೆಯೂ ಸ್ವಲ್ಪ ಗಮನ ಹರಿಸಿ.
ಪ್ರೀತಿ, ಪ್ರೇಮ-ಮದುವೆ: ಪ್ರೀತಿ ಪ್ರೇಮದ ವಿಷಯಗಳು ಸರಳರೇಖೆಯಂತಿರುತ್ತಿದೆ. ಸೆ.18ರ ನಂತರ ಒಂದಿಷ್ಟು ಭರವಸೆ ಕಾಣಿಸಿಕೊಳ್ಳುತ್ತದೆ. ಪ್ರೀತಿ ಎಂಬ ಸಸಿಗೆ ನೀರೆರೆದು ಪೋಷಿಸುವ ಕಾಲ ಇದು. ಸಮಾನ ಆಸಕ್ತಿಗಳನ್ನು ಗುರುತಿಸಿ, ರಾಜಿ ಮಾಡಿಕೊಳ್ಳುವುದರಲ್ಲಿ ಸಂತೋಷ ಇದೆ ಎಂಬುದನ್ನು ತಿಳಿಯಿರಿ. ತುಂಬ ನಿರೀಕ್ಷೆ ಬೇಡ. ಅದರೆ ವಿವಾಹಿತರ ಸ್ಥಿತಿ ಉತ್ತಮವಾಗಿರುತ್ತದೆ. ಪರಸ್ಪರರಲ್ಲಿ ಪ್ರೀತಿ ತೋರ್ಪಡಿಸುತ್ತೀರಿ. ಸಂತಸ ಹಾಗೂ ಸಂಭ್ರಮದ ಕ್ಷಣಗಳು ನಿಮ್ಮ ಪಾಲಿಗಿವೆ.[ಕನ್ಯಾ ರಾಶಿಗೆ ದುರ್ಮುಖನಾಮ ಸಂವತ್ಸರದ ಫಲಾಫಲ]
ಮಕ್ಕಳು-ವಿದ್ಯಾರ್ಥಿಗಳು: ಮಕ್ಕಳಿಗೆ ಇದು ತುಂಬ ಉತ್ತಮವಾದ ಸಮಯ. ಹಿಂದೆಂದಿಗಿಂತ ಚುರುಕು, ಚಟುವಟಿಕೆಯಿಮ್ದ ಇರುವ ಕಾಲವಿದು. ವ್ಯಾಸಂಗದಲ್ಲಿ ಪ್ರಗತಿ ಕಾಣಬೇಕು ಅಂದರೆ ಒಂದಿಷ್ಟು ಶ್ರಮ ಹಾಕಬೇಕು. ಪರೀಕ್ಷೆಯ ಫಲಿತಾಂಶ ನಿರೀಕ್ಷೆ ಮಾಡುತ್ತಿದ್ದರೆ ನಿಮಗೆ ಖುಷಿ ತರುವ ಫಲಿತಾಂಶವೇ ಬರುತ್ತದೆ.
-
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್












Click it and Unblock the Notifications