ತುಲಾ ರಾಶಿ: ಮೈ ತುಂಬ ಕೆಲಸ, ಹಣಕಾಸಿನ ಚಿಂತೆ
ಈ ತಿಂಗಳು ತುಂಬ ಬಿಜಿಯಾಗಿರುತ್ತೀರಿ. ನಿಮಗೆ ಸಮಯ ಮೀಸಲಿಟ್ಟುಕೊಳ್ಳುವುದು ಕಷ್ಟವಾಗುತ್ತದೆ. ಕೆಲಸದ ಒತ್ತಡ ಹಾಗೂ ಆಯಾಸದ ಕಾರಣಕ್ಕೆ ಹೈರಾಣಾಗ್ತೀರಿ. ಸುಮ್ಮನೆ ಕೂತು ಕಾಲ ಕಳೆಯುವಂಥ ಸಮಯ ಇಲ್ಲವೇ ಇಲ್ಲ. ಏನಾದರೂ ಒಂದು ಕೆಲಸ ಇದ್ದೇ ಇರುತ್ತದೆ.
ಹಣಕಾಸು ವಿಚಾರಗಳು ಚಿಂತೆಗೆ ಕಾರಣವಾಗುತ್ತದೆ. ಖರ್ಚು-ವೆಚ್ಚ ಹೆಚ್ಚಾಗುತ್ತದೆ. ಜತೆಗೆ ಆದಾಯದಲ್ಲೂ ಹೆಚ್ಚಳ ಇರುವುದರಿಂದ ಪರಿಸ್ಥಿತಿ ಕೈ ಮೀರಿ ಹೋಗುವುದಿಲ್ಲ. ಹಣಕಾಸು ವ್ಯವಹಾರದ ಏರಿಳಿತ, ಮಾನಸಿಕ ಅಶಾಂತಿ ಇರುತ್ತದೆ.[ತುಲಾ : ಗುರುವಿನ ಹೊಡೆತಕ್ಕೆ ಜೀವನವೇ ಅಲ್ಲೋಲಕಲ್ಲೋಲ]

ವೃತ್ತಿ: ಕೆಲಸದ ವಿಚಾರದಲ್ಲಿ ಹೆಚ್ಚಿನ ಶ್ರದ್ಧೆ ಇರಲಿ. ಮೈಗಳ್ಳತನ ಬೇಡ. ಬಾಸ್ ನಿಮ್ಮನ್ನು ಗಮನಿಸುತ್ತಿದ್ದಾರೆ ಎಂಬುದು ನಿಮ್ಮ ಗಮನದಲ್ಲಿರಲಿ. ಸಹೋದ್ಯೋಗಿಗಳ ಮೇಲೆ ಎಲ್ಲದಕ್ಕೂ ಅವಲಂಬಿಸುವ ನಿಮ್ಮ ಗುಣದ ಬಗ್ಗೆ ಎಚ್ಚರವಾಗಿರಿ. ನಿಮ್ಮ ನಿರ್ಧಾರಗಳನ್ನು ನೀವೇ ತೆಗೆದುಕೊಳ್ಳಬೇಕು. ಬೇರೆಯವರಿಂದ ನಿಮಗೆ ಸಿಗುವ ಬೆಂಬಲ ಎಂಥದ್ದು ಎಂದು ಸರಿಯಾಗಿ ನಿರ್ಧರಿಸಿ. ಸೆ.16ರ ವರೆಗೆ ಸೀನಿಯರ್ಸ್ ಗಳ ಬೆಂಬಲ ನೆಚ್ಚುವ ಹಾಗಿಲ್ಲ. ಆ ನಂತರ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣುತ್ತದೆ.
ಪ್ರೀತಿ-ಪ್ರೇಮ, ವಿವಾಹ: ಪ್ರೇಮಿಗಳಿಗೆ ಇದು ಸವಾಲಿನ ಸಮಯ. ತಪ್ಪು ಎಲ್ಲಿ ಆಗುತ್ತಿದೆ, ಯಾಕೆ ಎಂಬುದು ಗೊತ್ತಿದ್ದರೂ ಭಿನ್ನಾಭಿಪ್ರಾಯಗಳು ಕಾಣಿಸಿಕೊಳ್ಳುತ್ತವೆ. ಉಗುರು ಬೆಳೆದರೆ, ಬೆರಳನ್ನು ಕತ್ತರಿಸುವ ನಿರ್ಧಾರ ತಪ್ಪು. ಭಿನ್ನಾಭಿಪ್ರಾಯ ಇದೆ ಎಂದು ಗೊತ್ತಾದಾಗ ಕೂತು ಮಾತನಾಡಿ, ಸಮಸ್ಯೆ ಬಗೆಹರಿಸಿಕೊಳ್ಳುವ ಬಗ್ಗೆ ಯೋಚಿಸಿ. ಸಂಬಂಧದಲ್ಲಿ ಅಹಂಕಾರ ಬೇಡ. ಮನಸ್ಸು ಅಲ್ಲಿಲ್ಲಿ ಹರಿಬಿಡುವುದು ಬೇಡ, ಎಚ್ಚರ. ಇನ್ನು ವಿವಾಹಿತರಿಗೆ ಇದು ಸಾಧಾರಣವಾದ ತಿಂಗಳು. ಅದರೆ ಪತ್ನಿ ಅಥವಾ ಪತಿಯ ಆರೋಗ್ಯ ವಿಚಾರ ಚಿಂತೆಗೆ ಕಾರಣವಾಗುತ್ತದೆ. ಆಗಾಗ ಜಗಳದ ಸಾಧ್ಯತೆಯಿದೆ. ಸೆ.18ರ ನಂತರ ಸ್ಥಿತಿ ಸುಧಾರಿಸುತ್ತದೆ.[ತುಲಾ ರಾಶಿಗೆ ದುರ್ಮುಖನಾಮ ಸಂವತ್ಸರದ ಫಲಾಫಲ]
ಮಕ್ಕಳು-ವಿದ್ಯಾರ್ಥಿಗಳು: ಏಕಾಗ್ರತೆ ಸಾಧ್ಯವಾಗುತ್ತಿಲ್ಲ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ನೆಮ್ಮದಿಯಾಗಿಲ್ಲ, ಒಂದಲ್ಲ ಒಂದು ಮಾನಸಿಕ ಚಿಂತೆಗಳು ಎದುರಾಗುತ್ತಿದೆಯಲ್ಲಾ ಎನಿಸುತ್ತದೆ. ಇದರಿಮ್ದ ಕೋಪ-ತಾಪ, ಹಠ ಹೆಚ್ಚಾಗುತ್ತದೆ. ಓದುತ್ತಿರುವ ಮಕ್ಕಳು ಸರಿಯಾಗಿ ಗಮನ ಕೊಡುತ್ತಿಲ್ಲ ಎನಿಸುತ್ತದೆ. ಪರೀಕ್ಷೆ ಫಲಿತಾಂಶ ನಿರೀಕ್ಷೆ ಮಾಡುತ್ತಿದ್ದರೆ, ರಿಸಲ್ಟ್ ಸಾಧಾರಣವಾಗಿರುತ್ತದೆ.












Click it and Unblock the Notifications