ವೃಶ್ಚಿಕ ರಾಶಿ: ಕೆಲಸದ ಮಧ್ಯೆ ಕಳೆದುಹೋಗಿ ನೆಮ್ಮದಿ ಮರೀಬೇಡಿ
ಈ ತಿಂಗಳು ಚುರುಕಾಗಿ ಇರುತ್ತೀರಿ. ಬಾಕಿಯಿರುವ ಕೆಲಸಗಳನ್ನು ಪುರ್ತಿ ಮಾಡುವುದರಲ್ಲಿ ಕಳೆದುಹೋಗ್ತೀರಿ. ಕೆಲಸಗಳೇ ಜಾಸ್ತಿಯಾಗಿ ಮಾನಸಿಕ ನೆಮ್ಮದಿ ಹೋಯ್ತಲ್ಲ ಎಂದು ಚಿಂತಿಸುವಂತಾಗುತ್ತದೆ. ಈಗ ನೀವು ಪಡುವ ಶ್ರಮಕ್ಕೆ ತಕ್ಷಣವೇ ಫಲಿತಾಂಶ ಸಿಕ್ಕಿಬಿಡುವುದಿಲ್ಲ. ಆದರೆ ಭವಿಷ್ಯದಲ್ಲಿ ಅನುಕೂಲವಾಗುತ್ತದೆ ಎಂಬುದನ್ನು ಮಾತ್ರ ಮರೆಯಬೇಡಿ.
ಆರ್ಥಿಕ ಸ್ಥಿತಿ ಗತಿ ಆರಕ್ಕೇರದೆ ಮೂರಕ್ಕಿಳಿಯದಂತೆ ಇರುತ್ತದೆ. ಆದರೆ ನಿಮ್ಮ ಇಮೇಜ್ ಬಗ್ಗೆ ಸ್ವಲ್ಪ ಎಚ್ಚರವಿರಲಿ. ತಿಂಗಳ ಮೊದಲ ಹದಿನೈದು ದಿನ ಎಷ್ಟು ಎಚ್ಚರದಿಂದ ಇದ್ದರೂ ಸಾಲದು. ನಿಮ್ಮ ಮೇಲೆ ಕೆಲವು ಅಪವಾದಗಳು ಬರಬಹುದು. ಸೆ.16ರ ನಂತರ ಒಂದಿಷ್ಟು ಸಕಾರಾತ್ಮಕ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ.[ವೃಶ್ಚಿಕ ರಾಶಿಗೆ ಗೋಲ್ಡನ್ ಟೈಮ್, ಕಡೆಗೂ ಬಂದ ಗುರುಬಲ]

ವೃತ್ತಿ: ಮೊದಲೇ ತಿಳಿಸಿದ ಹಾಗೆ ವಿಪರೀತ ಕೆಲಸ ಇರುತ್ತದೆ. ವ್ಯವಹಾರಕ್ಕೆ ಸಂಬಂಧಿಸಿದ ಹಾಗೆ ಪ್ರವಾಸ ಮಾಡಬೇಕಾಗುತ್ತದೆ. ಸೀನಿಯರ್ಸ್, ಬಾಸ್ ಜತೆಗೆ ಈ ಹಿಂದೆ ಸಂಬಂಧ ಹಳಸಿದ್ದರೆ, ಅದಕ್ಕೆ ಮುಲಾಮು ಹಚ್ಚುವ ಕೆಲಸವಾಗುತ್ತದೆ. ನಿಮಗೆ ತುಂಬ ಅಗತ್ಯ ಬಿದ್ದ ಸಂದರ್ಭದಲ್ಲಿ ಸಹೋದ್ಯೋಗಿಗಳು ನಿಮ್ಮ ಬೆನ್ನಿಗೆ ನಿಲ್ಲುತ್ತಾರೆ. ಈ ತಿಂಗಳು ನಿಮಗೆ ಪ್ರೋತ್ಸಾಹದ ಅಗತ್ಯ ಕಂಡುಬರುತ್ತದೆ.
ಪ್ರೀತಿ-ಪ್ರೇಮ, ವಿವಾಹ: ಪ್ರೇಮ ವಿಚಾರಗಳು ಸಮಾಧಾನಕರವಾಗಿ ಸಾಗುತ್ತವೆ. ಕಿತ್ತಾಡಿಕೊಂಡಿದ್ದ ಪ್ರೇಮಿಗಳ ಮಧ್ಯೆ ಮತ್ತೆ ಪ್ರೀತಿ ಚಿಗುರೊಡೆಯುತ್ತದೆ. ಪ್ರೇಮಿಗಳು ಒಟ್ಟಿಗೆ ಸಮಯ ಕಳೆಯುತ್ತೀರಿ, ಸಣ್ಣದೊಂದು ಪ್ರವಾಸ ಮಾಡಿಬರುತ್ತೀರಿ. ಅವಿವಾಹಿತರಿಗೆ ಸಂಬಂಧ ಕೂಡಿಬರುವ ಕಾಲವಿದು. ಅದರೆ ವಿವಾಹಿತರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸೆ.18ರ ನಂತರ ಪತಿ ಅಥವಾ ಪತ್ನಿಯ ಆರೋಗ್ಯ ಕ್ಷೀಣಿಸಿ, ಚಿಂತೆಗೆ ಕಾರಣವಾಗುತ್ತದೆ.[ವೃಶ್ಚಿಕ ರಾಶಿ ಯುಗಾದಿ ವರ್ಷ ಭವಿಷ್ಯ ಮತ್ತು ಫಲಾಫಲ]
ಮಕ್ಕಳು-ವಿದ್ಯಾರ್ಥಿಗಳು: ಮಕ್ಕಳಿಗೆ ಇದು ಉತ್ತಮ ಕಾಲ. ಉತ್ಸಾಹ, ಸಂಭ್ರಮದಿಂದ ಪುಟಿಯುವುದನ್ನು ನೋಡಬಹುದು. ದೈಹಿಕ, ಮಾನಸಿಕ ಚಟುವಟಿಕೆಯಲ್ಲಿ ಚುರುಕು ಕಾಣಿಸುತ್ತದೆ. ಏಕಾಗ್ರತೆ, ಕಲಿಕೆಯ ಆಸಕ್ತಿ ಹೆಚ್ಚುತ್ತದೆ. ಹೊಸ ವಿಷಯಗಳನ್ನು ಕಲಿಯುವುದರಲ್ಲಿ ಉತ್ಸಾಹ ತೋರುತ್ತಾರೆ. ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು.
-
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ












Click it and Unblock the Notifications