IRCTC ಹೊಸ ವೆಬ್‌ಸೈಟ್ ಇಂದಿನಿಂದ ಆರಂಭ: ಪ್ರತಿ ನಿಮಿಷ 1.5 ಲಕ್ಷ ಟಿಕೆಟ್ ಬುಕ್ಕಿಂಗ್ ಸಾಮರ್ಥ್ಯ

ಭಾರತೀಯ ರೈಲು ಟಿಕೆಟ್ ಬುಕ್ಕಿಂಗ್ ಮಾಡುವವರಿಗೆ ಗುಡ್‌ನ್ಯೊಸ್. ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ ತನ್ನ ನೂತನ ವೆಬ್ಸೈಟ್ ಜುಲ್ಯ 15 ರಿಂದ ಪ್ರಾರಂಭ ಮಾಡಲು ಸಿದ್ಧ ಮಾಡಿಕೊಂಡಿದೆ. ಹೊಸ ವೆಬ್‌ಸೈಟ್್ಲ್ಲಿ ಬೇಗನೆ ಟಿಕೆಟ್ ಬುಕ್ಕಿಂಗ್, ಸರಳ ವಿನ್ಯಾಸ ಹಾಗೂ ಪ್ರಯಾಣಿಕರಿಗೆ ಅನುಕೂಲಕರವಾಗುವ ಹಲವು ಹೊಸ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ರಾಜಸ್ಥಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಕುರಿತು ಮಾಹಿತಿಯನ್ನು ನೀಡಿದ್ದರು. ಹಳೆಯ ವೆಬ್‌ಸೈಟ್‌ನಲ್ಲಿ ಟಿಕೆಟ್ ಬುಕ್ಕಿಂಗ್ ವೇಳೆ ಪದೇ ಪದೇ ಕ್ಯಾಪ್ಚಾ ಪರಿಶೀಲನೆ, ನಿಧಾನಗತಿಯ ಕಾರ್ಯಕ್ಷಮತೆ ಹಾಗೂ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಮಾಡುವಾಗ ಆಗುವ ತೊಂದರೆಗಳ ಬಗ್ಗೆ ವಿದ್ಯಾರ್ಥಿಗಳು ಸಚಿವವರ ಗಮನಕ್ಕೆ ತಂದಿದ್ದರು. ಇದಕ್ಕೆ ಸ್ಪಂದಿಸಿದ ಸಚಿವ ಅಶ್ವಿನಿ ವೈಷ್ಣವ್ ಬಳಕೆದಾರರಿಗೆ ಸುಲಭವಾಗುವಂತೆ ಮತ್ತು ಪ್ರಯಾಣಿಕರ ಸ್ನೇಹಿ ಆಗುವಂತೆ ಮಾಡಿ ಹೊಸ ವೆಬ್‌ಸೈಟ್ ಜುಲ್ಯ 15 ಲಭ್ಯವಾಗಲಿದೆ ಎಂದು ತಿಳಿಸಿದ್ದರು.

IRCTC New Website Launche

ಪ್ರತಿ ನಿಮಿಷಕ್ಕೆ 1.5 ಲಕ್ಷಕ್ಕೂ ಹೆಚ್ಚು ಟಿಕೆಟ್ ಬುಕ್ಕಿಂಗ್ ಸಾಮರ್ಥ್ಯ

ಸದ್ಯ IRCTC ವೆಬ್‌ಸೈಟ್ ಒಂದು ನಿಮಿಷಕ್ಕೆ ಸುಮಾರು 32,000 ಟಿಕೆಟ್ ಬುಕ್ಕಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಹೊಸ ವೆಬ್‌ಸೈಟ್ ಒಂದು ನಿಮಿಷಕ್ಕೆ 1.5 ಲಕ್ಷಕ್ಕೂ ಹೆಚ್ಚು ಟಿಕೆಟ್ ಬುಕ್ಕಿಂಗ್್ಗಳನ್ನು ಮಾಡುವ ಸಾಮರ್ಥ್ಯ ಹೊಂದಿರಲಿದೆ. ಇದರಿಂದ ಪ್ರಯಾಣಿಕರು ತತ್ಕಾಲ್ ಬುಕ್ಕಿಂಗ್ ಸಮಯದಲ್ಲಿ ಉಂಟಾಗುವ ಸರ್ವರ್ ಸಮಸ್ಯೆಯ ತೊಂದರೆಯು ಕಡಿಮೆ ಆಗುತ್ತದೆ ಎನ್ನುವ ನೀರಿಕ್ಷೆಯಿದೆ.

Indian Railways: ರೈಲ್ ಒನ್ ಆ್ಯಪ್ ಬಳಕೆದಾರರಿಗೆ ರೈಲ್ವೆ ಹೊಸ ನಿಯಮ ಜಾರಿ
Indian Railways: ರೈಲ್ ಒನ್ ಆ್ಯಪ್ ಬಳಕೆದಾರರಿಗೆ ರೈಲ್ವೆ ಹೊಸ ನಿಯಮ ಜಾರಿ

ಹೊಸ ರಿಸರ್ವೇಶನ್ ವ್ಯವಸ್ಠೆ

ಹೊಸ ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಮ್ (PRS) ಒಂದು ನಿಮಿಷಕ್ಕೆ 40 ಲಕ್ಷಕ್ಕೂ ಹೆಚ್ಚು ವಿಚಾರಣೆಗಳನ್ನು ನಿರ್ವವಹಿಸಲು ಸಾದ್ಯವಿದೆ. ಈಗಿನ ವ್ಯವಸ್ಥೆಯಲ್ಲಿ ಇದು ಸುಮಾರು 4 ಲಕ್ಷ ಮಾತ್ರವಾಗಿದೆ. ಇದರಿಂದ ರೈಲು ಮಾಹಿತಿ ಮತ್ತು ಸೀಟ್ ಕುರಿತಾದ ಲಭ್ಯತೆಯ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ.

ವೆಬ್‌ಸೈಟ್ ಹೊಸ ಸೌಲಭ್ಯಗಳು

IRCTC ಹೊಸ ವೆಬ್‌ಸೈಟ್್ನಲ್ಲಿ ಪ್ರಯಾಣಿಕರು ಟಿಕೆಟ್ ಬುಕ್ಕಿಂಗ್ ವೇಳೆ ತಮ್ಮ ಇಷ್ಟದ ಸೀಟ್್ಗೆ ಆದ್ಯತೆ ನೀಡುವ ಆಯ್ಕೆಯನ್ನು ಪಡೆಯಲ್ಲಿದ್ದಾರೆ. ಜೊತೆಗೆ ಹೊಸ ಶುಲ್ಕ ಕ್ಯಾಲೆಂಡರನ್ನು(Fare Calendar) ಮೂಲಕ ವಿವಿದ ದಿನಾಂಕಗಳ ಪ್ರಯಾಣದ ದರವನ್ನು ಒಂದೇ ಸ್ಥಳದಲ್ಲಿ ಹೋಲಿಕೆ ಮಾಡಿ ಪ್ರಯಾಣಿಕರಿಗೆ ಬೇಕಾದ ಸೂಕ್ತ ದಿನ ಆಯ್ಕೆ ಮಾಡಿಕೊಳ್ಳಬಹುದು.

ಇಷ್ಟೆ ಅಲ್ಲದೆ ಈ ವೆಬ್‌ಸೈಟ್‌ ನಮ್ಮ ಭಾರತೀಯ ಹಲವು ಭಾಷೆಗಳಲ್ಲಿ ಲಭ್ಯವಿದೆ ಎನ್ನಲಾಗುತ್ತಿದೆ. ದಿವ್ಯಾಂಗರು, ರೋಗಿಗಳು ಮತ್ತು ವಿದ್ಯಾರ್ಥಿಗಳಿಗೆ ನೀಡಲಾಗುವ ವಿಶೇಷ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ.

IRCTC ಹೊಸ ವೆಬ್‌ಸೈಟ್ ಜುಲೈ 15ಕ್ಕೆ ಲಾಂಚ್: ತತ್ಕಾಲ್ ಬುಕ್ಕಿಂಗ್ ಇನ್ನು ಮತ್ತಷ್ಟು ಸುಲಭ!
IRCTC ಹೊಸ ವೆಬ್‌ಸೈಟ್ ಜುಲೈ 15ಕ್ಕೆ ಲಾಂಚ್: ತತ್ಕಾಲ್ ಬುಕ್ಕಿಂಗ್ ಇನ್ನು ಮತ್ತಷ್ಟು ಸುಲಭ!

ತತ್ಕಾಲ್ ಟಿಕೆಟ್ ಬುಕ್ಕಿಂಗ್ ಸುಲಭ

ಹೊಸ ವೆಬ್‌ಸೈಟ್್ನಲ್ಲಿ ಗಮನ ಸೆಳೆಯುವ ಗ್ರಾಫಿಕ್ಸ್, ಅನಗತ್ಯ ಪಾಪ್‌ಅಪ್‌ಗಳು ಮತ್ತು ಪದೇ ಪದೇ ಕಾಣಿಸಿಕೊಳ್ಳುವ ಭದ್ರತಾ ವ್ಯವಸ್ಥೆ ಕ್ಯಾಪ್ಚಾ ಪರಿಶೀಲನೆಗಳು ಕಡಿಮೆ ಮಾಡಲಾಗಿದೆ. ಇದರಿಂದ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಮಾಡುವ ಪ್ರಕ್ರಿಯೆ ಇನ್ನಷ್ಟು ಸುಲಭವಾಗಿದೆ.

ವೆಬ್ ಸ್ಕ್ರೀನ್್ಲ್ಲಿ ಎಲ್ಲಾ ವರ್ಗಗಳ ಸೀಟ್ ಲಭ್ಯ

ಈವರೆಗೆ ಸ್ಲೀಪರ್, 3AC, 2AC ಸೇರಿದಂತೆ ಪ್ರತಿ ವರ್ಗದ ಸೀಟ್ ಲಭ್ಯತೆಯಲ್ಲಿ ಪ್ರತ್ಯೇಕವಾಗಿ ಪರಿಶಿಲಿಸಬೇಕಾಗುತ್ತಿತ್ತು. ಹೊಸ ವೆಬ್‌ಸೈಟ್್ಲ್ಲಿ ಎಲ್ಲ ವರ್ಗಗಳ ಸೀಟ್ ಲಭ್ಯತೆಯು ಒಂದೇ ಸ್ಕ್ರೀನ್್ಲ್ಲಿ ಕಾಣಿಸಿಕೊಳ್ಳಲಿದೆ, ಪ್ರಯಾಣಿಕರು ಇಲ್ಲಿ ಸುಲಭವಾಗಿ ಹೋಲೊಕೆ ಮಾಡಿ ಟಿಕೆಟ್ ಆಯ್ಕೆ ಮಾಡಿಕೊಳ್ಳಬಹುದು.

ಹೊಸದಾದ ವಿನ್ಯಾಸ, ಹೆಚ್ಚಿನ ಸಾಮರ್ಥ್ಯವುಳ್ಳ ಮತ್ತು ಪ್ರಯಾಣಿಕ ಸ್ನೇಹಿಯುಳ್ಳ ಸೌಲಭ್ಯ ಇರುವ IRCTCಯ ನೂತನ ವೆಬ್‌ಸೈಟ್ ದೇಶದ ಕೋಟ್ಯಾಂತರ ರೈಲು ಪ್ರಯಾಣಿಕರ ಟಿಕೆಟ್ ಬುಕ್ಕಿಂಗ್ ಸೇವೆಯನ್ನು ಇನ್ನಷ್ಟು ಸುಲಭ ಮತ್ತು ಸರಳ ಮಾಡುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+