ಧನುಸ್ಸು ರಾಶಿ: ಸಂತಸದಲ್ಲಿ ಮೈ ಮರೆಯಬೇಡಿ
ಈ ತಿಂಗಳಲ್ಲಿ ಹಲವು ವಿಚಾರಗಳ ಬಗ್ಗೆ ಗಮನ ಕೊಡಬೇಕಾಗುತ್ತದೆ. ಸಕಾರಾತ್ಮಕ ಧೋರಣೆ ಹಾಗೂ ಸಂತಸದ ಮಧ್ಯೆ ಮೈ ಮರೆಯದೆ ಎಲ್ಲದರ ಬಗ್ಗೆಯೂ ಎಚ್ಚರ ಇರಲಿ. ವೃತ್ತಿ ಹಾಗೂ ಕೌಟುಂಬಿಕ ಬದುಕಿನಲ್ಲಿ ಶ್ರೀಮಂತಿಕೆ- ಸಂತೋಷವನ್ನು ಕಾಣುತ್ತೀರಿ. ಆದರೆ ನಿಮ್ಮ ನಿದ್ದೆ ಕೆಡಿಸುವಂಥ ಗ್ರಹಸ್ಥಿತಿ ಇದೆ ಎಂಬುದು ನಿಮ್ಮ ಗಮನಕ್ಕೆ ಇರಲಿ. ಒಂದಲ್ಲಾ ಒಂದು ವಿಷಯದ ಬಗ್ಗೆ ನೀವೇ ಯೋಚನೆ ಹಚ್ಚಿಕೊಳ್ತೀರಿ. ಸೆ.18ರ ನಂತರ ಪರಿಸ್ಥಿತಿ ಸುಧಾರಿಸುತ್ತದೆ. ಚೆನ್ನಾಗಿ ನಿದ್ದೆಯೂ ಬರುತ್ತದೆ.
ಸೆ.18ರ ನಂತರ ವಿದೇಶ ಮೂಲದಿಂದ ಲಾಭವಾಗುವ ಸಾಧ್ಯತೆ ಇದೆ. ಅಂಥ ಅವಕಾಶಗಳ ಬಗ್ಗೆ ಗಮನ ಇರಲಿ. ವಿಶ್ರಾಂತಿ ಪಡೆಯುವುದಕ್ಕಾಗಿಯೇ ಪ್ರವಾಸ ಕೈಗೊಳ್ಳುತ್ತೀರಿ. 22ರ ನಂತರ ಮತ್ತಷ್ಟು ಅನುಕೂಲಗಳು ನಿಮ್ಮ ಪಾಲಿಗಿವೆ.[ಸಾಡೇಸಾತಿ ಶನಿಕಾಟದೊಂದಿಗೆ ಇನ್ನು ಗುರುಕಾಟ ಧನುಸ್ಸು ರಾಶಿಗೆ]

ವೃತ್ತಿ: ವೃತ್ತಿ ಬದುಕು ಸಲೀಸಾಗಿ ಸಾಗುತ್ತದೆ. ನಿಮ್ಮ ಕೆಲಸದ ವೈಖರಿಗೆ ಮೆಚ್ಚುಗೆ ಪಡೆಯುತ್ತೀರಿ. ಪ್ರಮೋಶನ್ ಸಾಧ್ಯತೆಗಳೂ ಇವೆ. ಮೇಲಧಿಕಾರಿಗಳು ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ. ನಿಮ್ಮ ನಿರ್ಧಾರಗಳಿಂದ ಇನ್ನು ಹೆಚ್ಚಿನ ಅನುಕೂಲವಿದೆ. ನಿಮ್ಮ ಅಭಿವೃದ್ಧಿ ಕಂಡು ಕೆಲ ಸಹೋದ್ಯೋಗಿಗಳು ಹೊಟ್ಟೆಕಿಚ್ಚಿನಿಂದ ಕರುಬಬಹುದು. ನಿಮ್ಮ ರಹಸ್ಯಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದು ಒಳ್ಳೆಯದಲ್ಲ.
ಪ್ರೀತಿ-ಪ್ರೇಮ, ಮದುವೆ: ಪ್ರೇಮ ವಿಚಾರಗಳಲ್ಲಿ ಆಗಾಗ ಜಗಳಗಳಾಗುತ್ತವೆ. ನಿಮ್ಮ ನಂಬಿಕೆ, ಅರ್ಥ ಮಾಡಿಕೊಳ್ಳುವ ಸಾಮರ್ಥ್ಯಕ್ಕೆ ತಕ್ಕಂತೆ ಪರಿಸ್ಥಿತಿ ಇರುತ್ತದೆ. ಸ್ವಲ್ಪ ಸಮಾಧಾನವಾಗಿರಿ. ಸೆ.19ರ ನಂತರ ಸನ್ನಿವೇಶ ಸಕಾರಾತ್ಮಕವಾಗಿ ಬದಲಾಗುತ್ತದೆ. ವಿವಾಹಿತರಿಗೆ ತುಂಬ ಒಳ್ಳೆ ಸಮಯ. ಪ್ರೀತಿ-ಪ್ರೇಮ-ಪ್ರಣಯದ ವಿಚಾರಗಳು ಇಡೀ ತಿಂಗಳು ಸಂತಸದಿಂದ ಇರುವಂತೆ ಮಾಡುತ್ತವೆ.[ಧನಸ್ಸು ರಾಶಿ ಯುಗಾದಿ ವರ್ಷ ಭವಿಷ್ಯ ಮತ್ತು ಫಲಾಫಲ]
ಮಕ್ಕಳು-ವಿದ್ಯಾರ್ಥಿಗಳು: ಮಕ್ಕಳಿಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ನಿಂತ ಕಡೆ ನಿಲ್ಲದಂತೆ ಅನವಶ್ಯಕ ಸುತ್ತಾಟ ಇರುತ್ತದೆ. ಆಸಕ್ತಿ, ಏಕಾಗ್ರತೆ ಕಳೆದುಕೊಂಡು ಓದಿನಲ್ಲಿ ಹಿನ್ನಡೆಯಾಗುತ್ತದೆ. ಪರೀಕ್ಷೆ ಫಲಿತಾಂಶವೂ ಸಾಧಾರಣವಾಗಿರುತ್ತದೆ. ಸೆ.18ರ ನಂತರ ಪರಿಸ್ಥಿತಿ ಸುಧಾರಿಸುತ್ತದೆ.
-
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ












Click it and Unblock the Notifications