ಮಕರ ರಾಶಿ: ಸಂಪಾದನೆಯಲ್ಲಿ ಹೆಚ್ಚಳ, ಪ್ರವಾಸ
ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡುತ್ತೀರಿ. ಇದು ತುಂಬ ಉತ್ತಮ ಸಮಯ. ಕುಟುಂಬದ ಜತೆಗೆ ದೂರ ಪ್ರಯಾಣದ ಸಾಧ್ಯತೆಗಳಿವೆ. ಜತೆಗೆ ತೀರ್ಥ ಕ್ಷೇತ್ರಗಳ ದರ್ಶನವೂ ಇದೆ. ಒಟ್ಟಾರೆ ಇಡೀ ತಿಂಗಳು ಚಟುವಟಿಕೆ, ಲವಲವಿಕೆಯಿಂದ ಇರುತ್ತೀರಿ.
ನಿಮ್ಮ ಸಂಪಾದನೆಯಲ್ಲಿ ಹೆಚ್ಚಳವಾಗುವ ಸಾಧ್ಯತೆಗಳು ಗೋಚರಿಸುತ್ತಿವೆ. ಅಂಥ ಅವಕಾಶ ಬಂದಾಗ ನಿರ್ಲಕ್ಷಿಸುವುದು ಖಂಡಿತಾ ಜಾಣತನವಲ್ಲ. ಗ್ರಹಸ್ಥಿತಿಗಳಂತೂ ಕೆಲಸ ವಿಚಾರದಲ್ಲಿ ಶ್ರಮಪಟ್ಟಷ್ಟೂ ಉತ್ತಮ ಫಲ ನೀಡುವಂತಿವೆ. ಕೆಲಸದ ವಿಚಾರದಲ್ಲಿ ಹಾಕಿಕೊಂಡ ಎಲ್ಲ ಗುರಿ ಸುಲಭಕ್ಕೆ ಈಡೇರುತ್ತವೆ.[ಮಕರ ರಾಶಿಗೆ ಶನಿಬಲ, ಗುರುಬಲ ಎರಡೂ ಕೂಡಿಬಂದಿವೆ]

ವೃತ್ತಿ: ಗುರಿ ಇರಿಸಿಕೊಂಡಂತೆ ಕೆಲಸ ಆಗುವುದರಿಂದ ಮೆಚ್ಚುಗೆ, ಅವಾರ್ಡ್ ಗಳು ಅರಸಿ ಬರುವ ಸಾಧ್ಯತೆಗಳಿವೆ. ನೀವು ಯಶಸ್ಸು ಸಾಧಿಸುವುದಕ್ಕೆ ಅದೃಷ್ಟವೂ ಸಾಥ್ ನೀಡುತ್ತದೆ. ಸಹೋದ್ಯೋಗಿಗಳು ನಿಮ್ಮ ನೆರವಿಗೆ ಇರುತ್ತಾರೆ. ಅದರಲ್ಲೂ ಮಹಿಳಾ ಉದ್ಯೋಗಿಗಳಿಂದ ಹೆಚ್ಚಿನ ಸಹಾಯ ದೊರೆಯುತ್ತದೆ. ನಿಮ್ಮ ಬಾಸ್ ಕೂಡ ನಿಮ್ಮಿಂದ ಅತಿಯಾದುದ್ದೇನೂ ನಿರೀಕ್ಷೆ ಮಾಡುತ್ತಿಲ್ಲ. ಸಂಯಮದಿಂದ, ವಿನಯವಂತಿಕೆಯಿಂದ ವರ್ತಿಸಿದರೆ ಅವರ ಜತೆಗೆ ವಾಗ್ವಾದಗಳನ್ನು ತಡೆಯಬಹುದು. ಅದು ನಿಮಗೂ ಒಳ್ಳೆಯದು.
ಪ್ರೀತಿ-ಪ್ರೇಮ, ವಿವಾಹ: ಪ್ರೇಮ ವಿಚಾರಗಳಲ್ಲಿ ಅಂಥ ಅದೃಷ್ಟ ಕಂಡುಬರುತ್ತಿಲ್ಲ. ಹೊಸ ಸಂಬಂಧಗಳಿಗೆ ಕಮಿಟ್ ಆಗುವುದಕ್ಕೆ ಇದು ಸೂಕ್ತ ಸಮಯವಲ್ಲ. ಭಿನ್ನಾಭಿಪ್ರಾಯ, ಜೋರಾದ ಮಾತುಕತೆಯ ಕಾರಣಕ್ಕೆ ಸದ್ಯದ ಸಂಬಂಧದಲ್ಲೂ ಬಿರುಕು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇದರಿಂದ ಜಗಳಗಳಾಗುವ ಸಾಧ್ಯತೆ ಕೂಡ ಇದೆ. ಆದ್ದರಿಂದ ಗೆಳತಿ ಅಥವಾ ಗೆಳೆಯನ ಜತೆಗೆ ವಾಗ್ವಾದ ಬೇಡ. ಇನ್ನು ವೈವಾಹಿಕ ಬದುಕು ಸಂತಸವಾಗಿರುತ್ತದೆ. ಆದರೆ ಅತ್ತೆ-ಮಾವನ ಜತೆಗೆ ವೈಮನಸ್ಸಾಗಬಹುದು, ಎಚ್ಚರ ಇರಲಿ.[ಮಕರ ರಾಶಿ ಯುಗಾದಿ ವರ್ಷ ಭವಿಷ್ಯ ಮತ್ತು ಫಲಾಫಲ]
ಮಕ್ಕಳು-ವಿದ್ಯಾರ್ಥಿಗಳು: ಮಕ್ಕಳು ಹೇಳಿದ ಮಾತು ಕೇಳುವುದಿಲ್ಲ. ಕೀಟಲೆ ಹೆಚ್ಚಾಗುತ್ತದೆ. ಅವರಿಗೆ ಬುದ್ಧಿ ಹೇಳುವುದರಲ್ಲೇ ಹೆಚ್ಚಿನ ಸಮಯ ಕಳೆಯುತ್ತದೆ. ಹೇಳಿದ ಮಾತು ಕೇಳದೆ ಆರೋಗ್ಯ ಸಮಸ್ಯೆ ತಂದುಕೊಳ್ತಾರೆ. ಓದಿನಲ್ಲಿ ಅಷ್ಟಾಗಿ ಆಸಕ್ತಿ ಇರುವುದಿಲ್ಲ. ಈ ಕಾರಣಕ್ಕೆ ಶಾಲೆಯಿಂದ ದೂರು ಬರಬಹುದು. ಪರೀಕ್ಷೆ ಫಲಿತಾಂಶವೂ ನಿರೀಕ್ಷೆಯಂತೆ ಇರುವುದಿಲ್ಲ.
-
ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನಾದ್ಯಂತ ಹೋಟೆಲ್ಗಳು ಬಂದ್ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ












Click it and Unblock the Notifications