ಕುಂಭ ರಾಶಿ: ತಾಳ್ಮೆ ಇರಲಿ, ಸವಾಲುಗಳ ದಾಟಿ ಸಾಗಿ
ಎಷ್ಟು ತಾಳ್ಮೆಯಿಂದ ಇರುತ್ತೀರೋ ಅಷ್ಟು ಒಳ್ಳೆಯದು. ನೀವು ಸಾಗುವ ದಾರಿಯಲ್ಲಿ ಸವಾಲುಗಳಿವೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಇವೆಲ್ಲವನ್ನೂ ದಾಟದ ಹೊರತು ಯಶಸ್ಸು ಸಾಧ್ಯವಿಲ್ಲ. ಏಕಾಗ್ರತೆಯಿಂದ ಮಾಡುವ ಕೆಲಸವೊಂದೇ ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಆದ್ಯತೆಗಳನ್ನು ಸರಿಯಾಗಿ ನಿರ್ಧರಿಸಿ. ವೃತ್ತಿ ಹಾಗೂ ಕೌಟುಂಬಿಕ ಜೀವನವನ್ನು ಸರಿಯಾಗಿ ನಿರ್ವಹಿಸುವ ಕಡೆಗೆ ಗಮನ ಇರಲಿ.
ದಿಢೀರನೇ ನಿಮಗೆ ವಿಜ್ಞಾನ, ಕೌತುಕದ ವಿಚಾರಗಳ ಕಡೆಗೆ ಆಸಕ್ತಿ ಕೆರಳುತ್ತದೆ. ಲೈಂಗಿಕ ಜೀವನದಲ್ಲಿ ಹೊಸ ಉತ್ಸಾಹ ಕಾಣಿಸಿಕೊಳ್ಳುತ್ತದೆ. ವಿಪರೀತವಾಗಿ ಯೋಚನೆ ಮಾಡುವುದರಿಂದ ಸ್ವಲ್ಪ ಮಟ್ಟಿಗೆ ಒತ್ತಡ ಕಾಣಿಸಿಕೊಳ್ಳುತ್ತದೆ. ಇದರಿಂದ ನೆಮ್ಮದಿಯೂ ಹಾಳಾಗುತ್ತದೆ. ಇದರಿಂದ ನಿಮ್ಮ ನಿರ್ಧಾರಗಳಲ್ಲಿ ತಪ್ಪುಗಳಾಗುತ್ತವೆ. ಸೆ.18ರ ನಂತರ ಪಾಸಿಟಿವ್ ಬದಲಾವಣೆಗಳನ್ನು ಕಾಣಬಹುದು.[ಗುರುಬಲ ಕಳೆದುಕೊಂಡು ಹುಂಬರಂತಾದ ಕುಂಭ ರಾಶಿಯವರು]

ವೃತ್ತಿ: ಕೆಲಸದ ವಿಚಾರಕ್ಕೆ ಬಂದರೆ ಪ್ರಾಮಾಣಿಕವಾಗಿ, ಶ್ರಮಪಟ್ಟು ಕೆಲಸ ಮಾಡಿ ಯಶಸ್ಸು ಪಡೆಯುತ್ತೀರಿ. ಜತೆಗೆ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ, ಆದರೆ ತಾಳ್ಮೆಯಿಂದ ಇರಬೇಕು. ಈ ತಿಂಗಳು ಮೇಲಧಿಕಾರಿಗಳ ಜತೆಗೆ ಉತ್ತಮ ಸಂಬಂಧ ಇರಲಿ. ಇಲ್ಲದಿದ್ದರೆ ವಿವಾದಗಳಲ್ಲಿ ಸಿಕ್ಕಿಬೀಳ್ತೀರಿ. ಸಹೋದ್ಯೋಗಿಗಳನ್ನೂ ಎದುರು ಹಾಕಿಕೊಳ್ಳಬೇಡಿ. 18ರ ನಂತರ ಪರಿಸ್ಥಿತಿ ಬದಲಾಗುತ್ತದೆ. ಆದರೆ ನೀವು ಅಂದುಕೊಳ್ಳದ ಕೆಲ ಅಹಿತಕರ ಘಟನೆಗಳು ನಡೆಯುತ್ತವೆ.
ಪ್ರೀತಿ-ಪ್ರೇಮ, ಮದುವೆ: ಲೈಂಗಿಕ ಆಸಕ್ತಿಗಳ ಕಾರಣಕ್ಕೆ ಗೆಳೆಯ ಅಥವಾ ಗೆಳತಿಯೊಂದಿಗಿನ ಪ್ರಣಯದ ಕ್ಷಣಗಳು ನಿರೀಕ್ಷಿಸಬಹುದು. ಪ್ರೇಮಿಗಳು ಒಟ್ಟಿಗೆ ಸಮಯ ಕಳೆಯುತ್ತೀರಿ. ಆದರೆ ವಿವಾಹಿತರಿಗೆ ಸಮಾಧಾನದ ಸುದ್ದಿ ಇಲ್ಲ. ಗಂಡ ಅಥವಾ ಹೆಂಡತಿಗೆ ಮಾನಸಿಕ-ದೈಹಿಕ ಅಸ್ವಾಸ್ಥ್ಯ ಕಾಡಬಹುದು. ಇಡೀ ತಿಂಗಳು ಇದೇ ವಿಚಾರ ನಿಮ್ಮನ್ನು ಕಾಡುತ್ತದೆ.[ಕುಂಭ ರಾಶಿ ಯುಗಾದಿ ವರ್ಷ ಭವಿಷ್ಯ ಮತ್ತು ಫಲಾಫಲ]
ಮಕ್ಕಳು-ವಿದ್ಯಾರ್ಥಿಗಳು: ಮಕ್ಕಳು ಗೊಂದಲಕ್ಕೆ ಬಿದ್ದಂತೆ ಕಾಣುತ್ತಾರೆ. ಓದುವ ವಯಸ್ಸಿನ ಮಕ್ಕಳು ಎಷ್ಟೇ ಶ್ರಮ ಪಟ್ಟರೂ ನಿರೀಕ್ಷೆಯಂತೆ ಫಲಿತಾಂಶ ಇರುವುದಿಲ್ಲ. ಫಲಿತಾಂಶದ ನಿರೀಕ್ಷೆಯಲ್ಲಿದ್ದರೆ ಅದು ಸಾಧಾರಣವಾಗಿರುತ್ತದೆ.











Click it and Unblock the Notifications