ಇನ್ಮುಂದೆ Instamartನಲ್ಲಿ ಸಿಗಲಿದೆ ಎಲ್‌ಪಿಜಿ Gas Cylinder: ಆರ್ಡರ್ ಮಾಡುವುದು ಹೇಗೆ

LPG Gas Cylinder: ಬೆಂಗಳೂರು ಸೇರಿದಂತೆ ದೇಶದಾದ್ಯಂತ ಈಚೆಗೆ ಎಲ್‌ಪಿಜಿ ಸಿಲಿಂಡರ್ ವಿಷಯದಲ್ಲಿ ಭಾರೀ ಸಮಸ್ಯೆ ಎದುರಾಗಿತ್ತು. ಇರಾನ್ Vs ಅಮೆರಿಕ, ಇಸ್ರೇಲ್ ನಡುವಿನ ಯುದ್ಧದ ಸಮಯದಲ್ಲಿ ಎಲ್‌ಪಿಜಿ ಸಿಲಿಂಡರ್ ವಿಚಾರದಲ್ಲಿ ಭಾರೀ ಸಮಸ್ಯೆ ಆಗಿತ್ತು. ಈಗಲೂ ಸಹ ಕೆಲವೊಂದು ಪ್ರದೇಶಗಳಲ್ಲಿ ಎಲ್‌ಪಿಜಿ ಸಿಲಿಂಡರ್ ಸಮಸ್ಯೆ ಇದೆ. ಇದೀಗ ಈ ವಿಷಯದಲ್ಲಿ ಭಾರತೀಯರಿಗೆ ಅದರಲ್ಲೂ ಬೆಂಗಳೂರಿನಲ್ಲಿ ಇರುವವರು ಹಾಗೂ ಬ್ಯಾಚುಲರ್‌ಗಳಿಗೆ ಭರ್ಜರಿ ಗುಡ್‌ನ್ಯೂಸ್ ಸಿಕ್ಕಿದೆ. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL)ನೊಂದಿಗೆ ಪಾಲುದಾರಿಕೆಯ ನಂತರ, ಇನ್‌ಸ್ಟಾಮಾರ್ಟ್‌ ಮೂಲಕ ಎಲ್‌ಪಿಜಿ ಸಿಲಿಂಡರ್‌ಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಬಹುದಾಗಿದೆ. ಅಲ್ಲದೆ ಈ ವಿನೂತನ ಯೋಜನೆಯನ್ನು ಇದೇ ಮೊದಲ ಬಾರಿ ಬೆಂಗಳೂರಿನಲ್ಲಿ ಪರಿಚಯಿಸಲಾಗಿದೆ.

ಜುಲೈ 15ರ ಬುಧವಾರ ಈ ಸೇವೆಗೆ ಚಾಲನೆ ನೀಡಲಾಗಿದೆ. ಇದರಡಿ HPCL ಹೊಸದಾಗಿ ಬಿಡುಗಡೆ ಮಾಡಿರುವ 10 ಕೆಜಿ 'HP ನವ್ಯ' ಎಲ್‌ಪಿಜಿ ಸಿಲಿಂಡರ್‌ ಹಾಗೂ 5 ಕೆಜಿಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ಗ್ರಾಹಕರು ಖರೀದಿ ಮಾಡಬಹುದಾಗಿದೆ. ಮುಖ್ಯವಾಗಿ ಹಾಗೂ ಮೊದಲ ಹಂತದಲ್ಲಿ ಪ್ರಯೋಗಿಕವಾಗಿ ಕಂಪನಿಯು ಜುಲೈ 15 ರಿಂದ ಬೆಂಗಳೂರಿನ ಸುಬ್ರಹ್ಮಣ್ಯಪುರದಲ್ಲಿ ಈ ಸೇವೆಯನ್ನು ಪ್ರಾರಂಭಿಸಿದೆ. ಸಿಲಿಂಡರ್‌ಗಳನ್ನು ಖರೀದಿಸಲು ಗ್ರಾಹಕರಿಗೆ ಅಸ್ತಿತ್ವದಲ್ಲಿರುವ ದೇಶೀಯ LPG ಸಂಪರ್ಕದ ಅಗತ್ಯವಿಲ್ಲ ಎಂದು ಹೇಳಲಾಗಿದೆ.

LPG Gas Cylinder

ಅಲ್ಲದೆ ಇದನ್ನು ಮುಖ್ಯವಾಗಿ ವಿದ್ಯಾರ್ಥಿಗಳು, ಕೆಲಸ ಮಾಡುವುದಕ್ಕೆ ಬೇರೆ ಊರುಗಳಲ್ಲಿ ನೆಲೆಸಿರುವವರು ಮತ್ತು ಬ್ಯಾಚುಲರ್‌ಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಪರಿಚಯಿಸಲಾಗಿದೆ ಎಂದು ಹೇಳಲಾಗಿದೆ. ವಿತರಣೆಯ ಸಮಯದಲ್ಲಿ ಖಾಲಿ HPCL ಸಿಲಿಂಡರ್ ಅನ್ನು ಹಿಂತಿರುಗಿಸುವ ಮೂಲಕ ಮರುಪೂರಣಗಳನ್ನು ಆರ್ಡರ್ ಮಾಡಬಹುದು ಎಂದು ಸಂಸ್ಥೆ ಹೇಳಿದೆ.

ಇನ್‌ಸ್ಟಾಮಾರ್ಟ್ ದಿನಸಿ ಪಾದರ್ಥಗಳೊಂದಿಗೆ ಇದೀಗ ಗ್ಯಾಸ್ ಸಿಲಿಂಡರ್ ಅನ್ನು ಸಹ ಪರಿಚಯಿಸಿದೆ. HPCL ನೊಂದಿಗೆ ನಾವು ಹೊಸ ಸೇವೆಯನ್ನು ವಿಸ್ತರಿಸಿದ್ದೇವೆ. ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯ ಮಾನದಂಡಗಳನ್ನು ಕಾಯ್ದುಕೊಳ್ಳುವಾಗ LPG ಅನ್ನು ಇನ್‌ಸ್ಟಾಮಾರ್ಟ್‌ಗೆ ತರುತ್ತಿದ್ದೇವೆ ಎಂದು ಇನ್‌ಸ್ಟಾಮಾರ್ಟ್‌ನ ಸಿಇಒ ಅಮಿತೇಶ್ ಝಾ ಅವರು ಹೇಳಿದ್ದಾರೆ.

LPG Gas Cylinder: ಬ್ಯಾಚುಲರ್‌ಗಳಿಗೆ ಸಹಕಾರಿ

ಇನ್ನು ಬೆಂಗಳೂರಿನಲ್ಲಿ ಬ್ಯಾಚುಲರ್‌ಗಳು ಹಾಗೂ ಪಿಜಿಗಳಲ್ಲಿ ಇರುವವರಿಗೆ ಅನುಕೂಲವಾಗಲಿದೆ ಎಂದು ಹೇಳಲಾಗಿದೆ. ಪಿಜಿಗಳಲ್ಲಿ ಇರುವವರು ಮತ್ತು ಬ್ಯಾಚುಲರ್‌ಗಳು ಗ್ಯಾಸ್ ಸಿಲಿಂಡರ್ ಖರೀದಿ ಮಾಡುವುದು ತುಂಬಾ ಕಷ್ಟವಾಗಿದೆ. ದಾಖಲೆಗಳ ಸಲ್ಲಿಕೆ ಹಾಗೂ ಖರೀದಿ ಸವಾಲಾಗಿತ್ತು. ಆರ್ಡರ್‌ಗಳನ್ನು HPCL ನ ಅಧಿಕೃತ ವಿತರಕ ಜಾಲದ ಮೂಲಕ ಪೂರೈಸಲಾಗುತ್ತದೆ. ಸುರಕ್ಷತೆ ಮತ್ತು ನಿಯಂತ್ರಕ ಅವಶ್ಯಕತೆಗಳನ್ನು ಅನುಸರಿಸಿ ತರಬೇತಿ ಪಡೆದ ಸಿಬ್ಬಂದಿಯಿಂದ ತಲುಪಿಸಲಾಗುತ್ತದೆ. ಮೊದಲ ಬಾರಿಗೆ ಗ್ರಾಹಕರು ಆರ್ಡರ್ ಪ್ರಕ್ರಿಯೆಯ ಭಾಗವಾಗಿ ಗುರುತಿನ ಪರಿಶೀಲನೆಯನ್ನು ಸಹ ಪೂರ್ಣಗೊಳಿಸಬೇಕಾಗುತ್ತದೆ ಎಂದು ಹೇಳಲಾಗಿದೆ. ಆದರೆ ಪ್ರಕ್ರಿಯೆಯು ತುಂಬಾ ಸರಳವಾಗಿ ಇರಲಿದೆ ಎಂದು ಹೇಳಲಾಗಿದೆ.

Gas Cylinder Booking: ಗ್ಯಾಸ್ ಸಿಲಿಂಡರ್ ಬುಕ್ಕಿಂಗ್‌ನಲ್ಲಿ ಮಹತ್ವದ ಬದಲಾವಣೆ, ಮೇ 1ರಿಂದ ಜಾರಿ - ಎಲ್‌ಪಿಜಿ ಗುಡ್‌ನ್ಯೂಸ್
Gas Cylinder Booking: ಗ್ಯಾಸ್ ಸಿಲಿಂಡರ್ ಬುಕ್ಕಿಂಗ್‌ನಲ್ಲಿ ಮಹತ್ವದ ಬದಲಾವಣೆ, ಮೇ 1ರಿಂದ ಜಾರಿ - ಎಲ್‌ಪಿಜಿ ಗುಡ್‌ನ್ಯೂಸ್

ಬುಕ್ ಮಾಡುವುದು ಹೇಗೆ

ಇನ್ನು ಇನ್‌ಸ್ಟಾಮಾರ್ಟ್‌ನಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬುಕ್ ಮಾಡುವುದು ತುಂಬಾ ಸುಲಭವಾಗಿದೆ. ಗ್ರಾಹಕರು ಇನ್‌ಸ್ಟಾಮಾರ್ಟ್‌ಗೆ ಲಾಗಿನ್ ಆಗಿ, 10 ಕೆಜಿಯ LPG ಸಿಲಿಂಡರ್ ಅಥವಾ 5 ಕೆಜಿ LPG ಸಿಲಿಂಡರ್ ಅನ್ನು ಆಯ್ಕೆ ಮಾಡಬೇಕು. ನಂತರ ತಮ್ಮ ಕಾರ್ಟ್‌ಗೆ ಸೇರಿಸಿ, ಆರ್ಡರ್ ಮಾಡಬಹುದು. ಹೀಗಾಗಿ, ಈ ವಿಧಾನವು ಅತ್ಯಂತ ಸರಳವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+