Surya Gochar: ಕುಂಭ ರಾಶಿಯಲ್ಲಿ ಸೂರ್ಯನ ಸಂಚಾರದಿಂದ ಯಾವ ರಾಶಿಗಳಿಗೆ ಅದೃಷ್ಟ?
ರಾಶಿಯಲ್ಲಿ ಸೂರ್ಯನ ಸಂಚಾರವು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಈ ಸಂಚಾರವು ಹಲವಾರು ರಾಶಿಗಳ ಜನರ ಜೀವನದಲ್ಲಿ ಬದಲಾವಣೆಯನ್ನು ತರುತ್ತದೆ. ಫೆಬ್ರವರಿ 13, 2022 ರಂದು ಕುಂಭ ರಾಶಿಯಲ್ಲಿ ಸೂರ್ಯನ ಸಂಚಾರವು ಎಲ್ಲಾ ರಾಶಿಚಕ್ರ ಚಿಹ್ನೆಗಳಿಗೆ ಪ್ರಮುಖ ಬದಲಾವಣೆಯನ್ನು ತರುತ್ತದೆ.
ಫೆಬ್ರವರಿ 13 ರಂದು, ಸೂರ್ಯ ದೇವರು ಕುಂಭ ರಾಶಿಯಲ್ಲಿ ಶನಿಯ ರಾಶಿಯನ್ನು ಪ್ರವೇಶಿಸಲಿದ್ದಾನೆ. ಶನಿಯು ಈ ರಾಶಿಯಲ್ಲಿ ಸಂಚಾರ ಆರಂಭಿಸಿದ ಕೂಡಲೇ 4 ರಾಶಿಯವರಿಗೆ ಅದೃಷ್ಟ ಒಲಿದು ಬರುತ್ತದೆ. ಹಣವನ್ನು ಪಡೆಯುವ ಸಾಧ್ಯತೆಗಳು ಅಧಿಕವಾಗಿರುತ್ತದೆ. ಹಣಕಾಸಿನ ಸ್ಥಿತಿಯು ತುಂಬಾ ಉತ್ತಮವಾಗಿರುತ್ತದೆ.
ಆತ್ಮ ಮತ್ತು ಶಕ್ತಿಯ ಅಧಿಪತಿಯಾದ ಸೂರ್ಯನು 13 ಫೆಬ್ರವರಿ 2022 ರಂದು ಬೆಳಗಿನ ಜಾವ 3.12 ಕ್ಕೆ ಕುಂಭ ರಾಶಿಯಲ್ಲಿ ಸಾಗಲಿದ್ದಾನೆ. ಸೂರ್ಯನು ಯಾವುದೇ ರಾಶಿಚಕ್ರದಲ್ಲಿ 1 ತಿಂಗಳು ಇರುತ್ತಾನೆ. ಸಾಮಾನ್ಯವಾಗಿ ಸೂರ್ಯನು ಯಾವುದೇ ರಾಶಿಯಲ್ಲಿ ಸಂಚಾರ ಮಾಡುವ ಸಂದರ್ಭದಲ್ಲಿ ಅದರ ಪರಿಣಾಮವು ಇತರೆ ರಾಶಿಗಳ ಮೇಲೆಯೂ ಬೀಳುತ್ತದೆ. ಕೆಲವು ರಾಶಿಗಳಿಗೆ ಉತ್ತಮ ಸಮಯ ಇದಾದರೆ, ಇನ್ನು ಕೆಲವು ರಾಶಿಯವರಿಗೆ ಇದು ಕೆಟ್ಟ ಸಮಯವಾಗಿರುತ್ತದೆ. ನಾವಿಲ್ಲಿ ಕುಂಭ ರಾಶಿಯಲ್ಲಿ ಸೂರ್ಯನ ಸಂಚಾರದಿಂದ ಯಾವ ರಾಶಿಗಳಿಗೆ ಅದೃಷ್ಟ ಖುಲಾಯಿಸುತ್ತದೆ ಎಂದು ವಿವರಿಸಿದ್ದೇವೆ. ಮುಂದೆ ಓದಿ...

ಮೇಷ ರಾಶಿ: ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ
ಕುಂಭ ರಾಶಿಯಲ್ಲಿ ಸೂರ್ಯನ ಸಂಚಾರವು ಮೇಷ ರಾಶಿಯವರಿಗೆ ಶುಭಕರವಾಗಿದೆ. ಮೇಷ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ ಲಭಿಸುವ ಸಾಧ್ಯತೆ ಇದೆ. ವೇತನ ಹೆಚ್ಚಳವಾಗುವ ಸಾಧ್ಯತೆಗಳು ಕೂಡಾ ಇದೆ. ನಿಮ್ಮ ಪ್ರತಿಷ್ಠೆ ಹೆಚ್ಚಾಗುವ ಸಾಧ್ಯತೆಯೂ ಕಾಣುತ್ತಿದೆ. ಪ್ರತಿಯೊಂದು ಕೆಲಸದಲ್ಲೂ ನಿಮಗೆ ಅದೃಷ್ಟವು ಸಂಪೂರ್ಣ ಬೆಂಬಲವನ್ನು ನೀಡುತ್ತದೆ. ಹೂಡಿಕೆಯಲ್ಲಿಯೂ ನೀವು ಯಶಸ್ವಿಯಾಗುತ್ತೀರಿ. ನೀವು ಯಾವುದೇ ಹಳೆಯ ಸಾಲದಿಂದ ಮುಕ್ತರಾಗಬಹುದು. ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವವರಿಗೆ ಈ ಸಮಯವು ತುಂಬಾ ಅನುಕೂಲಕರವಾಗಿರುತ್ತದೆ.

ವೃಷಭ ರಾಶಿ: ವ್ಯಾಪಾರಿಗಳಿಗೆ ಅತ್ಯುತ್ತಮ ಸಮಯ
ಕುಂಭ ರಾಶಿಯಲ್ಲಿ ಸೂರ್ಯನ ಸಂಚಾರವು ವೃಷಭ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ವೃತ್ತಿಯಲ್ಲಿ ಪ್ರಗತಿ ಕಾಣುವಿರಿ. ಈ ಅವಧಿಯಲ್ಲಿ ನೀವು ನಿಮ್ಮ ಸ್ವಂತ ಗುರುತನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ. ಯಾವುದಕ್ಕೂ ನೀವು ಆತ್ಮವಿಶ್ವಾಸದಿಂದ ಕಾರ್ಯ ನಿರ್ವಹಣೆ ಮಾಡಿ. ಒಂದಕ್ಕಿಂತ ಹೆಚ್ಚು ಕಡೆಯಿಂದ ಹಣ ಲಭ್ಯವಾಗುವ ಸಾಧ್ಯತೆ ಇದೆ. ಈ ಅವಧಿಯು ವ್ಯಾಪಾರಿಗಳಿಗೆ ಅತ್ಯುತ್ತಮವಾಗಿರುವ ಸಾಧ್ಯತೆ ಇದೆ. ಸರ್ಕಾರಿ ಕೆಲಸ ಮಾಡುವವರು ಉತ್ತಮ ಪ್ರತಿಫಲವನ್ನು ಪಡೆಯಬಹುದು.

ಧನು ರಾಶಿ: ಹೂಡಿಕೆಯಿಂದ ಲಾಭ ಸಾಧ್ಯತೆ
ಕುಂಭ ರಾಶಿಯಲ್ಲಿ ಸೂರ್ಯನ ಸಂಚಾರವು ಧನು ರಾಶಿಯವರಿಗೆ ಆರ್ಥಿಕ ಸುಧಾರಣೆಗೆ ಕಾರಣ ಆಗಲಿದೆ. ಅದೃಷ್ಟವು ನಿಮ್ಮ ಬೆಂಬಲದಲ್ಲಿ ಇರಲಿದೆ. ನೀವು ಸರಿಯಾದ ರೀತಿ ಯೋಚಿಸಿ ಹಣವನ್ನು ಖರ್ಚು ಮಾಡುವ ಕಾರಣದಿಂದಾಗಿ ಈ ಅವಧಿಯಲ್ಲಿ ಆದಾಯ ಹೆಚ್ಚಳ ಆಗುವ ಸಾಧ್ಯತೆ ಇದೆ. ಹೊಸ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿರುವವರಿಗೆ ಶುಭ ಸುದ್ದಿ ದೊರೆಯಬಹುದು. ನೀವು ಬಹಳ ದಿನಗಳಿಂದ ಬಡ್ತಿಗಾಗಿ ಕಾಯುತ್ತಿದ್ದರೆ, ನಿಮ್ಮ ಈ ಆಸೆ ಈಡೇರಬಹುದು. ನೀವು ಹೊಸ ಕೆಲಸವನ್ನು ಪ್ರಾರಂಭಿಸಬಹುದು. ಹಾಗೆಯೇ ಹೂಡಿಕೆಯಿಂದ ಲಾಭ ಪಡೆಯಬಹುದು. ಆದರೆ ಅಪಾಯಕಾರಿ ಹೂಡಿಕೆಯನ್ನು ಮಾಡದಿರಿ.

ಮಕರ ರಾಶಿ: ಪ್ರಯಾಣದಲ್ಲಿ ಸಂತಸ
ಕುಂಭ ರಾಶಿಯಲ್ಲಿ ಸೂರ್ಯನ ಸಂಚಾರವು ಮಕರ ರಾಶಿಯವರಿಗೆ ಮಂಗಳಕರವಾಗಿದೆ. ಹಣದ ಮೂಲ ಹೆಚ್ಚಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಲಾಭವನ್ನು ಪಡೆಯಲು ಅನೇಕ ಅವಕಾಶಗಳಿವೆ. ನೀವು ಪ್ರಯಾಣವನ್ನು ಮಾಡಬಹುದು. ಸಂತಸದ ಪ್ರಯಾಣ ನಿಮ್ಮದಾಗಲಿದೆ. ಪ್ರತಿ ಕೆಲಸದಲ್ಲಿ ಸಂಗಾತಿಯ ಬೆಂಬಲ ಸಿಗುತ್ತದೆ. ನಿಮ್ಮ ಉದ್ಯೋಗದ ಸ್ಥಳದಲ್ಲಿ ನೀವು ನಿಷ್ಠೆಯಿಂದ ಮಾಡುವ ಕಾರ್ಯದಿಂದಾಗಿ ನಿಮ್ಮ ಮುಖ್ಯಸ್ಥರು ಮೆಚ್ಚುಗೆ ವ್ಯಕ್ತಪಡಿಸಲಿದ್ದಾರೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications