ವೃಷಭ ರಾಶಿಯವರಿಗೆ ಈಗ ಸುಗ್ಗಿ ಮತ್ತು ಹಿಗ್ಗುವ ಕಾಲ
ವೃಷಭ ರಾಶಿಯಿಂದ ಗುರು ಐದನೇ ಸ್ಥಾನದಲ್ಲಿ ಸಂಚರಿಸುತ್ತಾನೆ. ತುಂಬಾ ಶುಭಕರ ಸ್ಥಾನವೆಂದೇ ಐದನೇ ಸ್ಥಾನ ಕರೆಯಿಸಿಕೊಳ್ಳುತ್ತದೆ. ಈ ಸ್ಥಾನವು ಸಂಸಾರ ಮತ್ತು ಕುಟುಂಬಕ್ಕೆ ಸಂಬಂಧಪಟ್ಟದ್ದಾಗಿದೆ. ಹೀಗಾಗಿ ಗುರು ಬಂದ ಕೂಡಲೇ ಈ ರಾಶಿಯ ಅವಿವಾಹಿತರು ಈಗ ವಿವಾಹದ ಭಾಗ್ಯವನ್ನು ನೋಡಬಹುದು.
ಯುವಕ-ಯುವತಿಯರಿಗೆ ಗುರುವು ಶುಭಫಲ ನೀಡಿ ಹೊಸ ಜೀವನಕ್ಕೆ ಅಡಿಯಿಡುವಂಗೆ ಮಾಡುತ್ತಾನೆ. ಆದರೆ ಸೂಕ್ತವಾದ ವ್ಯಕ್ತಿಯ ಆಯ್ಕೆ ಮಾತ್ರ ತಪ್ಪಿಸದೇ ಪರೀಕ್ಷಿಸಿಯೇ ಮಾಡಿಕೊಳ್ಳಬೇಕು. ಆಮೇಲೆ ಏನಾದರೂ ಜೀವನ ಸರಿಯಾಗಲ್ಲ.
ಯಾರೊಂದಿಗೆ ಮದುವೆ ಮಾಡಿಕೊಳ್ಳಲು ಒಪ್ಪಿಗೆ ಸೂಚಿಸಿದ್ದಿರೋ ಅವರ ಜನ್ಮಜಾತಕ ಪರಿಶೀಲಿಸಿಕೊಂಡೇ ಮುಂದುವರೆಯಬೇಕು. ಗುರುಬಲದಿಂದಲೇ ಮದುವೆ ಆಗುತ್ತದೆ ಎಂದುಕೊಂಡು ಬಂದಿದ್ದೇ ಪಂಚಾಮೃತವೆಂದುಕೊಂಡು ಒಪ್ಪಿಕೊಳ್ಳುವುದು ಒಳ್ಳೆಯದಲ್ಲ. ಹೀಗಾಗಿ ಹತ್ತತ್ತು ಬಾರಿ ಯೋಚಿಸಿ ಒಪ್ಪಿಗೆ ನೀಡಿ ಬೀಗರೂಟ ಹಾಕಬೇಕು ನೆನಪಿರಲಿ. [ವೃಷಭ ರಾಶಿಗೆ ದುರ್ಮುಖನಾಮ ಸಂವತ್ಸರದ ಫಲಾಫಲ]

ಇನ್ನೊಂದು ಮಾತು ನೆನಪಿರಲಿ, ನಮ್ಮೊಂದಿಗೆ ಯಾರು ಚೆನ್ನಾಗಿ ನಡೆದುಕೊಳ್ಳುತ್ತಾರೆಯೋ ಅವರನ್ನೇ ನಮ್ಮ ಆಪ್ತ ಸಂಬಂಧಿಕರೆಂದುಕೊಳ್ಳಿ. ಏಕೆಂದರೆ ಕೆಲ ಸಂಬಂಧಿಕರು ಆಪ್ತರೂ ಇರುವುದಿಲ್ಲ, ಚೆನ್ನಾಗಿ ನಡೆದುಕೊಂಡೂ ಇರುವುದಿಲ್ಲ. ಪುಣ್ಯಕಾರ್ಯಗಳ ಸಮಯದಲ್ಲಿ ನಾಮುಂದು ತಾಮುಂದು ಎಂದು ಬಂದು ಜೀವನ ಹಾಳಾಗಲು ಕೆಲವೊಮ್ಮೆ ಕಾರಣವಾಗಿರುವ ನಿದರ್ಶನಗಳು ಸಾಕಷ್ಟಿವೆ.
ಮನೆ ಕಟ್ಟಿಸಬೇಕೆನ್ನುವವರು, ಆಸ್ತಿ ಖರೀದಿಸಬೇಕೆನ್ನುವವರಿಗೆ ಹೇಗೋ ಹಣದ ವ್ಯವಸ್ಥೆ ಆಗುತ್ತದೆ. ಒಟ್ಟಿನಲ್ಲಿ ಹೆಚ್ಚಿನ ಪ್ರಮಾಣದ ಸಂತಸದ ಸುದ್ದಿಗಳನ್ನೇ ಕೇಳುವ ವೃಷಭ ರಾಶಿಯವರು ಈ ಒಂದು ವರ್ಷದಲ್ಲಿ ಆಸ್ತಿಪಾಸ್ತಿ ಮಾಡಿಕೊಂಡು ಮುಂದಿನ ಜೀವನ ಪಾವನ ಮಾಡಿಕೊಳ್ಳಬೇಕು. [ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]
ಗಂಡು ಸಂತಾನಕ್ಕೆ ಹರಕೆ ಹೊತ್ತವರಿಗೆ ಈಗ ದೇವರು ಕಣ್ಣು ಬಿಡುವ ಸಮಯ. ಹೀಗಾಗಿ ವೃಷಭ ರಾಶಿಯವರು ಗಂಡು ಹುಟ್ಟುವುದರಿಂದ ಒಳ್ಳೆಯ ಹೆಸರನ್ನು ಈಗಲೇ ನೋಟ್ ಮಾಡಿಟ್ಟುಕೊಳ್ಳಬೇಕು. ಹೊಸದಾಗಿ ಮದುವೆಯಾದವರೂ ಸಹ ಗಂಡು ಪಾಪುವಿನ ನಿರೀಕ್ಷೆ ಮಾಡಬಹುದು.
ನೀವು ನೋಡಿರಬಹುದು ತಿರುಮಲದ ತಿಮ್ಮಪ್ಪ ಯಾವಾಗಲೂ ನಗುಮುಖದಲ್ಲೇ ಇರುತ್ತಾನೆ. ಹಾಗೆ ಇಡೀ ಜೀವನ ನಗುಮುಖದಲ್ಲೇ ಜೀವನ ಸಾಗಿಸಿಕೊಂಡು ಹೋಗುವಂತಹ ಸೌಕರ್ಯಗಳನ್ನು ಗುರುವು ಈಗ ಕೊಡುತ್ತಾನೆ. ಚೆನ್ನಾಗಿ ಜೀವನ ಸಾಗಿಸಿ ಖುಷಿಯಾಗಿರಿ ಮತ್ತೊಬ್ಬರನ್ನೂ ಖುಷಿಯಾಗಿಡಲು ಪ್ರಯತ್ನಿಸಿ. [ವೃಷಭ ರಾಶಿಯ 2016 ವರ್ಷದ ಫಲಾಫಲ ಹೀಗಿದೆ]
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications