ಮೇಷ ರಾಶಿಗೆ ಗುರುಬಲದ ನಿರೀಕ್ಷೆ ಅಷ್ಟೇನೂ ಬೇಡ
ಈ ರಾಶಿಯವರಿಗೆ ಗುರುವು 6ನೇ ಸ್ಥಾನದಲ್ಲಿ ಇಂದಿನಿಂದ ಸಂಚರಿಸಲಾರಂಭಿಸುತ್ತಾನೆ. ಗುರುವು 6ನೇ ಸ್ಥಾನದಲ್ಲಿ ಅಂತ ಏನೂ ಶುಭಫಲ ನೀಡುವುದಿಲ್ಲ. ಶುಭಫಲದ ನಿರೀಕ್ಷೆಯನ್ನೂ ಕೂಡ ಮಾಡಬಾರದು. ಏಕೆಂದರೆ ಈ ಸಮಯದಲ್ಲಿ ಮೊದಲೇ ಅಷ್ಟಮಶನಿ ಕಾಟದಲ್ಲಿರುವುದರಿಂದ ಆರೋಗ್ಯಕ್ಕೆ ದೈವವೇ "ಚೆಕ್" ಕೊಟ್ಟಂತೆ ಆಗಿರುತ್ತದೆ.
ಹೀಗಾಗಿ ಇದ್ದಬದ್ದ ಹಣವನ್ನು ಉಳಿಸಿಕೊಂಡು ಹೋಗುವ ಪ್ರಯತ್ನ ಮಾಡಬೇಕು. ಏಕೆಂದರೆ 6ನೇ ಸ್ಥಾನವು ಶತ್ರುವಿನ ಸ್ಥಾನವೆಂದೇ ಕರೆಯಲಾಗುತ್ತದೆ. ಹೀಗಾಗಿ ಶತ್ರುಗಳನ್ನು ಹೆಚ್ಚಿಸಿಕೊಳ್ಳದಿರುವುದೇ ಲೇಸು ಈ ರಾಶಿಯವರು ವರ್ಷಪೂರ್ತಿ.
ನೀವು ನೋಡಿರಬಹುದು 200 ರು. ಪೇಂಟ್ ಮನೆಗೆ ಹಚ್ಚಲು ಪೇಂಟರ್ ಗಳು 500 ರು. ತಗೊಳ್ಳುತ್ತಾರೆ. ಹೀಗಾಗಿ ಪೇಂಟ್ ಹಚ್ಚಬೇಕೇ ಬೇಡವೇ ಎಂಬ ಯೋಚನೆ ಬರುತ್ತದೆ. ಇದೇ ರೀತಿ ಈ ರಾಶಿಯವರ ಜೀವನದಲ್ಲಿ ಮುಖ್ಯವಾಗಿಲ್ಲದ ಕೆಲವು ಖರ್ಚು ವೆಚ್ಚಗಳು ಬರಬಹುದು. ಆದ್ದರಿಂದ ಎಲ್ಲ ರೀತಿಯಿಂದಲೂ ಹಣವನ್ನು ಸಿದ್ಧ ಮಾಡಿಕೊಂಡಿಟ್ಟಿರಬೇಕು. ಅನವಶ್ಯಕ ಸಾಲ ಮಾಡದಿರುವುದು ತುಂಬಾ ಮುಖ್ಯ. ಆಮೇಲೆ ಇದ್ದಬದ್ದ ಆಸ್ತಿ ಮಾರಿಯಾದರೂ ಸಾಲ ತೀರಿಸಲು ಹೆಣಗಾಡಬೇಕಾಗುತ್ತದೆ. [ಗುರುಫಲ : ವೃಷಭ, ಸಿಂಹ, ಮೀನ, ವೃಶ್ಚಿಕ ರಾಶಿಗೆ ಸೂಪರ್]

ಮುಂದಿನ ಸೆಪ್ಟೆಂಬರ್ ವರೆಗೂ ಖರ್ಚುಗಳನ್ನು ಎಷ್ಟು ಆಗುತ್ತದೆಯೋ ಅಷ್ಟು ಕಮ್ಮಿ ಮಾಡಿಕೊಳ್ಳಬೇಕು. ತಿಂಗಳಿಗಿಂತ ನಿತ್ಯ ಎಷ್ಟು ಹಣ ಉಳಿಸಬಹುದೋ ಅಷ್ಟು ಉಳಿಸಲು ಪ್ರಾರಂಭಿಸಬೇಕು. ದೇಹಾರೋಗ್ಯಕ್ಕೆ ಸಂಬಂಧಪಟ್ಟಂತೆ ವೈದ್ಯಕೀಯ ಸೌಲಭ್ಯವಿರುವ ಆರೋಗ್ಯ ವಿಮೆ ಮಾಡಿಸಿಕೊಳ್ಳಬೇಕು ಬೇಗ ಬೇಗ. [ಭರಣಿ ನಕ್ಷತ್ರ ವಿಶೇಷ : ಬೆಂಕಿಯೊಂದಿಗೆ ಸರಸ!]
ಮಾನಸಿಕವಾಗಿ ಸ್ವಲ್ಪ ಗೊಂದಲಗಳು ಬರುವುದರಿಂದ ನಿತ್ಯ 8 ಗಂಟೆ ನಿದ್ದೆ, 1 ಗಂಟೆ ಧ್ಯಾನ ಮತ್ತು ಯೋಗ ಮಾಡಲೇಬೇಕು. ಧ್ಯಾನದಿಂದ ಮನಸ್ಸಿನ ಮೇಲೆ ಹಿಡಿತ ಸಾಧಿಸಿಕೊಳ್ಳಬಹುದು. ಬಂದ ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸಬಹುದು. ಒಟ್ಟಿನಲ್ಲಿ ಮೇಷ ರಾಶಿಯವರು ಗುರುಫಲವನ್ನು ಅಷ್ಟೇನೂ ನಿರೀಕ್ಷೆ ಮಾಡುವುದೇನು ಬೇಡ. ಆದರೆ ಗುರುರಾಯರ ದರ್ಶನಾಶೀರ್ವಾದ ಪಡೆಯುತ್ತ ಬಂದರೆ ಕೊಂಚ ಶುಭಫಲ ನಿರೀಕ್ಷಿಸಬಹುದು. [ಮೇಷ ರಾಶಿಗೆ ದುರ್ಮುಖನಾಮ ಸಂವತ್ಸರದ ಫಲಾಫಲ]
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications