ಸೋಮವಾರದಿಂದ ಭಾನುವಾರದವರೆಗೆ ಅದೃಷ್ಟ ನಿಮ್ಮ ಜೊತೆಯಲ್ಲಿರಬೇಕೇ, ಈ ಸರಳ ಜ್ಯೋತಿಷ್ಯ ಉಪಾಯ ತಿಳಿಯಿರಿ

ವಾರದ ಏಳು ದಿನಗಳು ಸಹ ವಿಭಿನ್ನ ಗ್ರಹಗಳು ಮತ್ತು ದೇವತೆಗಳ ಅಧಿಪತ್ಯವಿದೆ. ಆ ದಿನಕ್ಕೆ ಅನುಗುಣವಾಗಿ ಪೂಜೆ, ದಾನ, ಆಹಾರ ಹಾಗೂ ಬಣ್ಣಗಳ ಪಾಲನೆ ಮಾಡಿದರೆ ಶುಭ ಫಲ, ಸಕಾರಾತ್ಮಕ ಶಕ್ತಿ ಮತ್ತು ಜೀವನದಲ್ಲಿ ಯಶಸ್ಸು ದೊರೆಯುತ್ತದೆ ಎನ್ನುವುದು ಜ್ಯೋತಿಷ್ಯ ನಂಬಿಕೆ. ಸೋಮವಾರದಿಂದ ಭಾನುವಾರದವರೆಗೆ ಅದೃಷ್ಟ ಕಾಪಾಡಿಕೊಳ್ಳುವ ವಿವರ ಇಲ್ಲಿದೆ.

ಸೋಮವಾರ

ಸೋಮವಾರದ ಅಧಿಪತಿ ಗ್ರಹ ಚಂದ್ರ. ಅಧಿದೇವತೆಗಳು ಭಗವಾನ್ ಶಿವ ಮತ್ತು ಪಾರ್ವತಿ ದೇವಿ. ಸೋಮವಾರ ಶಿವಲಿಂಗಕ್ಕೆ ನೀರನ್ನು ಅರ್ಪಿಸಿ ಭಗವಾನ್ ಶಿವನ ಆಶೀರ್ವಾದ ಪಡೆಯಿರಿ. ವಿಶೇಷವಾಗಿ ಪಂಚಾಮೃತ ಅಭಿಷೇಕ ಮಾಡಿದರೆ ಜ್ಯೋತಿಷ್ಯ ನಂಬಿಕೆಯ ಪ್ರಕಾರ ಶುಭ ಫಲಗಳು ದೊರೆಯುತ್ತವೆ. ಈ ದಿನ ಕಪ್ಪು ಬಣ್ಣದ ಬಟ್ಟೆ ಧರಿಸುವುದನ್ನು ತಪ್ಪಿಸುವುದು ಒಳ್ಳೆಯದು. ಸಾಧ್ಯವಾದಷ್ಟು ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಿ. ಅಕ್ಕಿ, ಹಾಲು, ಸಕ್ಕರೆ, ಮುತ್ತು, ಬಿಳಿ ಹೂವುಗಳು ಮತ್ತು ಮೊಸರಿನಂತಹ ಬಿಳಿ ವಸ್ತುಗಳನ್ನು ದಾನ ಮಾಡುವುದು ಶುಭವೆಂದು ಪರಿಗಣಿಸಲಾಗುತ್ತದೆ. ಕಪ್ಪು ಬಣ್ಣದ ಶೂಗಳನ್ನು ಧರಿಸುವುದನ್ನು ತಪ್ಪಿಸಿ. ಮನೆಯಿಂದ ಹೊರಡುವ ಮೊದಲು ಒಂದು ಲೋಟ ಹಾಲು ಕುಡಿಯಿರಿ. ಜೇನುತುಪ್ಪ ಮತ್ತು ಸೌತೆಕಾಯಿಯನ್ನು ಆಹಾರದಲ್ಲಿ ಸೇರಿಸಿಕೊಳ್ಳಿ. ಸಕಾರಾತ್ಮಕ ದೃಢವಾಕ್ಯಗಳನ್ನು ಮನಸ್ಸಿನಲ್ಲಿ ಹೇಳಿಕೊಳ್ಳಿ ಮತ್ತು ನೀವು ಮಾಡುವ ಪ್ರತಿಯೊಂದು ಕೆಲಸದ ಹಿಂದಿನ ಉದ್ದೇಶವು ಒಳ್ಳೆಯದಾಗಿರಲಿ.

Astrology

ಮಂಗಳವಾರ

ಮಂಗಳವಾರದ ಅಧಿಪತಿ ಗ್ರಹ ಮಂಗಳ. ಅಧಿದೇವತೆಗಳು ಶ್ರೀ ಹನುಮಾನ್ ಮತ್ತು ಶ್ರೀ ಕಾರ್ತಿಕೇಯ. ಮಂಗಳವಾರ ಕೆಂಪು ಬಣ್ಣದ ಬಟ್ಟೆ ಧರಿಸಿ ಅಥವಾ ಕೆಂಪು ಹೂವನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ. ಕೆಂಪು ಹೂವು, ಮಸೂರ ಬೇಳೆ, ಬೆಲ್ಲ, ತಾಮ್ರ ಮತ್ತು ಶ್ರೀಗಂಧದಂತಹ ವಸ್ತುಗಳನ್ನು ದಾನ ಮಾಡುವುದು ಶುಭವೆಂದು ಹೇಳಲಾಗುತ್ತದೆ. ಹನುಮಾನ್ ಚಾಲೀಸಾ ಪಠಿಸಿ ಮತ್ತು ಹನುಮಾನ್ ದೇವಾಲಯಕ್ಕೆ ಭೇಟಿ ನೀಡಿ. ಮನೆಯಿಂದ ಹೊರಡುವ ಮೊದಲು ಯಾವುದಾದರೂ ರೂಪದಲ್ಲಿ ಕೊತ್ತಂಬರಿ ಸೇವಿಸಿ. ಸುಟ್ಟ ಬದನೆಕಾಯಿಯನ್ನು ಸೇವಿಸುವುದು ಈ ದಿನದ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗುತ್ತದೆ. ಈ ದಿನ ಹಣವನ್ನು ಸಾಲವಾಗಿ ಕೊಡುವುದು ಅಥವಾ ಪಡೆಯುವುದನ್ನು ಸಾಧ್ಯವಾದಷ್ಟು ತಪ್ಪಿಸಿ.

ಬುಧವಾರ

ಬುಧವಾರದ ಅಧಿಪತಿ ಗ್ರಹ ಬುಧ. ಅಧಿದೇವತೆ ಶ್ರೀ ಗಣೇಶ. ಸ್ನಾನದ ನಂತರ ಶ್ರೀ ಗಣೇಶನ ಪೂಜೆ ಮಾಡಿ ಮತ್ತು ಸಾಧ್ಯವಾದರೆ ದೇವಾಲಯಕ್ಕೆ ಭೇಟಿ ನೀಡಿ. ಗಣೇಶನನ್ನು ಪ್ರಸನ್ನಗೊಳಿಸಲು ಸರಳ ಮಂತ್ರಗಳನ್ನು ಜಪಿಸಿ. ಹಸಿರು ಬಣ್ಣದ ಬಟ್ಟೆ ಧರಿಸಿ ಅಥವಾ ಹಸಿರು ಬಣ್ಣದ ಕರವಸ್ತ್ರವನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ. ಹೆಸರುಕಾಳು, ಹಸಿರು ಹಣ್ಣುಗಳು ಮತ್ತು ತರಕಾರಿಗಳು, ಸಕ್ಕರೆ, ಕರ್ಪೂರ, ಟರ್ಪೆಂಟೈನ್ ಎಣ್ಣೆ ಹಾಗೂ ತುಪ್ಪವನ್ನು ದಾನ ಮಾಡುವುದು ಶುಭವೆಂದು ಪರಿಗಣಿಸಲಾಗುತ್ತದೆ. ಹಸು ಅಥವಾ ಮೇಕೆಗೆ ಹಸಿರು ಹುಲ್ಲು ಅಥವಾ ಪಾಲಕ್ ಸೊಪ್ಪನ್ನು ತಿನ್ನಿಸಿ. ಮನೆಯಿಂದ ಹೊರಡುವ ಮೊದಲು ಸಿಹಿ ಪದಾರ್ಥವನ್ನು ಸೇವಿಸಿ. ಸಾಧ್ಯವಾದರೆ ನಾಲ್ಕು ಚಕ್ರದ ವಾಹನ ಬಳಕೆಯನ್ನು ತಪ್ಪಿಸಿ.

ಗುರುವಾರ

ಗುರುವಾರದ ಅಧಿಪತಿ ಗ್ರಹ ಗುರು. ಅಧಿದೇವತೆ ಶ್ರೀ ವಿಷ್ಣು. ಸ್ನಾನದ ನೀರಿಗೆ ಒಂದು ಚಿಟಿಕೆ ಅರಿಶಿನ ಸೇರಿಸಿ ಸ್ನಾನ ಮಾಡಿ. ಬಾಳೆ ಗಿಡಕ್ಕೆ ಪೂಜೆ ಮಾಡಿ ಅದರ ಬುಡಕ್ಕೆ ನೀರು ಮತ್ತು ಹಾಲನ್ನು ಅರ್ಪಿಸಿ ತುಪ್ಪದ ದೀಪ ಹಚ್ಚಿ. ಬಾಳೆಹಣ್ಣು, ಕೇಸರಿ, ಕಡಲೆಬೇಳೆ, ಜೇನುತುಪ್ಪ ಮತ್ತು ಹಳದಿ ಹೂವುಗಳನ್ನು ದಾನ ಮಾಡಿ. ಶಿಕ್ಷಣ ಮತ್ತು ಧಾರ್ಮಿಕ ಸಂಸ್ಥೆಗಳಿಗೆ ದಾನ ಮಾಡುವುದು ಶುಭಕರವೆಂದು ಪರಿಗಣಿಸಲಾಗುತ್ತದೆ. ಶ್ರೀ ವಿಷ್ಣುವಿನ ಪೂಜೆ ಮಾಡಿ ಮತ್ತು ಸಾಧ್ಯವಾದರೆ ವಿಷ್ಣು ದೇವಾಲಯಕ್ಕೆ ಭೇಟಿ ನೀಡಿ. ವಿಷ್ಣು ಸಹಸ್ರನಾಮವನ್ನು ಪಠಿಸಿ. ಬೆಳಿಗ್ಗೆ ಹಾಗೂ ಮನೆಯಿಂದ ಹೊರಡುವ ಮೊದಲು ಒಂದು ಚಮಚ ಜೇನುತುಪ್ಪ ಸೇವಿಸಿ. ಮನೆಯಿಂದ ಹೊರಡುವ ಮೊದಲು ಸ್ವಲ್ಪ ಹಳದಿ ಸಾಸಿವೆ ಕಾಳುಗಳನ್ನು ಸೇವಿಸುವುದು ಕೂಡ ಶುಭವೆಂದು ಹೇಳಲಾಗುತ್ತದೆ.

ಶುಕ್ರವಾರ

ಶುಕ್ರವಾರದ ಅಧಿಪತಿ ಗ್ರಹ ಶುಕ್ರ. ಅಧಿದೇವತೆಗಳು ಮಹಾಲಕ್ಷ್ಮಿ, ದುರ್ಗಾದೇವಿ ಮತ್ತು ಸಂತೋಷಿ ಮಾತೆ. ಸ್ನಾನದ ನಂತರ ಮಹಾಲಕ್ಷ್ಮಿ ದೇವಾಲಯಕ್ಕೆ ಭೇಟಿ ನೀಡಿ. ಮನೆಯಲ್ಲಿ ಮಹಾಲಕ್ಷ್ಮಿಯ ಚಿತ್ರ ಅಥವಾ ಮೂರ್ತಿಯನ್ನು ಇಟ್ಟು ಗುಲಾಬಿ ಬಣ್ಣದ ಹೂವುಗಳನ್ನು ಅರ್ಪಿಸಬಹುದು. ಮನೆಯಿಂದ ಹೊರಡುವ ಮೊದಲು ಒಂದು ಚಮಚ ಮೊಸರು ಸೇವಿಸಿ. ಗುಲಾಬಿ, ತಿಳಿ ನೀಲಿ ಅಥವಾ ಬಿಳಿ ಬಣ್ಣದ ಬಟ್ಟೆ ಧರಿಸಿ ಮತ್ತು ಕಪ್ಪು ಬಣ್ಣದ ಬಟ್ಟೆಗಳನ್ನು ಸಾಧ್ಯವಾದಷ್ಟು ತಪ್ಪಿಸಿ. ಚಿಕ್ಕ ಹುಡುಗಿಯರು ಮತ್ತು ಮಹಿಳೆಯರಿಗೆ ಸಿಹಿ ಹಂಚುವುದು ಶುಭಕರವೆಂದು ನಂಬಲಾಗುತ್ತದೆ. ಈ ದಿನ ಹಸಿರು ಸೊಪ್ಪು ಮತ್ತು ಅನ್ನವನ್ನು ಸೇವಿಸದಿರುವುದು ಒಳ್ಳೆಯದು ಎಂದು ಹೇಳಲಾಗುತ್ತದೆ.

ಶನಿವಾರ

ಶನಿವಾರದ ಅಧಿಪತಿ ಗ್ರಹ ಶನಿ. ಅಧಿದೇವತೆ ಶನಿದೇವ. ಉದ್ದಿನ ಬೇಳೆಯಂತಹ ಕಪ್ಪು ವಸ್ತುಗಳನ್ನು ಬಡವರಿಗೆ ಅಥವಾ ಬ್ರಾಹ್ಮಣರಿಗೆ ದಾನ ಮಾಡಿ. ಕಪ್ಪು ಬದನೆಕಾಯಿ ಮತ್ತು ಕಪ್ಪು ಉದ್ದಿನ ಬೇಳೆಯನ್ನು ಅಗತ್ಯವಿರುವವರಿಗೆ ದಾನ ಮಾಡಬಹುದು. ಸುಟ್ಟ ಕಪ್ಪು ಬದನೆಕಾಯಿಯನ್ನು ಸೇವಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ. ಮನೆಯಿಂದ ಹೊರಡುವ ಮೊದಲು ತುಪ್ಪವನ್ನು ಸೇವಿಸಿ. ಕಪ್ಪು ಬಣ್ಣದ ಬಟ್ಟೆ ಧರಿಸಬಹುದು. ಮಾಂಸಾಹಾರ ಮತ್ತು ಮದ್ಯಪಾನವನ್ನು ಸಾಧ್ಯವಾದಷ್ಟು ತಪ್ಪಿಸಿ.

ಭಾನುವಾರ

ಭಾನುವಾರದ ಅಧಿಪತಿ ಗ್ರಹ ಸೂರ್ಯ. ಅಧಿದೇವತೆ ಸೂರ್ಯದೇವ. ತಾಮ್ರದ ಪಾತ್ರೆಯಲ್ಲಿರುವ ನೀರಿಗೆ ಒಂದು ಚಿಟಿಕೆ ಅರಿಶಿನ, ಬೆಲ್ಲ, ಅಕ್ಷತೆ ಮತ್ತು ಹಳದಿ ಹೂವುಗಳನ್ನು ಸೇರಿಸಿ ಬೆಳಿಗ್ಗೆ ಉದಯಿಸುತ್ತಿರುವ ಸೂರ್ಯನಿಗೆ ಅರ್ಘ್ಯ ನೀಡಿ. ಮನೆಯಿಂದ ಹೊರಡುವ ಮೊದಲು ವೀಳ್ಯದೆಲೆ ಸೇವಿಸಬಹುದು. ಗುಲಾಬಿ, ಹಳದಿ ಅಥವಾ ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ. ಬೆಳಿಗ್ಗೆ ಬೇಗ ಎದ್ದು ಸೂರ್ಯ ನಮಸ್ಕಾರ ಮಾಡುವುದೂ ಉತ್ತಮ ಎಂದು ಹೇಳಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+