Shravana Month 2026: ಶ್ರಾವಣದಲ್ಲಿ ಈ 5 ರಾಶಿಗಳ ಮೇಲೆ ಶಿವನ ವಿಶೇಷ ಕೃಪೆ; ಹಣ, ಯಶಸ್ಸು, ಸಾಲದಿಂದ ಮುಕ್ತಿ ಯೋಗ!

Shravana Month 2026: ಇನ್ನೇನು ಶ್ರಾವಣ ಮಾಸ ಆರಂಭವಾಗಲಿದೆ. ಆಗಸ್ಟ್‌ ೧೩ ರಿಂದ ಶ್ರಾವಣ ಮಾಸ. ಈ ತಿಂಗಳಲ್ಲಿ, ಶಿವನು ತನ್ನ ಎಲ್ಲಾ ಭಕ್ತರ ಮೇಲೆ ಆಶೀರ್ವಾದದ ಕೃಪಾ ದೃಷ್ಟಿ ಹರಿಸುತ್ತಾನೆ. ಎಲ್ಲಾ 12 ರಾಶಿಯವರು ತಮ್ಮ ಜೀವನದಲ್ಲಿ ಕೆಲವು ಸಕಾರಾತ್ಮಕ ಬದಲಾವಣೆಗಳನ್ನು ಅನುಭವಿಸುವಂತಾಗುತ್ತದೆ. ಆದರೂ, ಮೇಷ, ಕರ್ಕ ಮತ್ತು ಸಿಂಹ ಸೇರಿದಂತೆ ಐದು ರಾಶಿಯರು ಈ ಮಾಸದಲ್ಲಿ ಶಿವನಿಂದ ವಿಶೇಷ ಆಶೀರ್ವಾದವನ್ನು ಪಡೆಯುತ್ತಾರೆ. ಇವರು ತಮ್ಮ ವೃತ್ತಿ, ಪ್ರೀತಿ, ಆದಾಯ ಮತ್ತು ಆರೋಗ್ಯದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಅನುಭವಿಸುತ್ತಾರೆ.

ಶ್ರಾವಣ ಮಾಸದ ಅದೃಷ್ಟ ರಾಶಿಗಳು

ಮೇಷ ರಾಶಿ (Aries)

ಶ್ರಾವಣ ಮಾಸ ಈ ರಾಶಿಯವರಿಗೆ ಸ್ವಲ್ಪ ಹೆಚ್ಚೇ ವಿಶೇಷವಾಗಿರಲಿದೆ. ನಿಮ್ಮ ವೃತ್ತಿಜೀವನದಲ್ಲಿ ಸಾಧಿಸಬೇಕು ಅಂದುಕೊಂಡಿರುವ ಕೆಲಸವನ್ನು ಸಮರ್ಪಣೆ ಮತ್ತು ಕಠಿಣ ಪರಿಶ್ರಮದಿಂದ ಮುಂದುವರಿಸಿ. ಯಶಸ್ಸು ನಿಮ್ಮದಾಗುವುದು. ಹೊಸ ಯೋಜನೆಗಳನ್ನು ಆರಂಭಿಸಲು ಶ್ರಾವಣ ಸೂಕ್ತ ತಿಂಗಳು.ಹೊಸ ಕೆಲಸಗಳಿಗೆ ಸಮಯ ಅನುಕೂಲಕರವಾಗಿರುತ್ತದೆ.

Shravana Month 2026

ಕೌಟುಂಬಿಕ ಜೀವನದಲ್ಲಿ ಸಂತೋಷ ಹೆಚ್ಚುತ್ತದೆ. ಈ ತಿಂಗಳು ಹಣಕಾಸಿನ ದೃಷ್ಟಿಯಿಂದಲೂ ಉತ್ತಮವಾಗಿರುತ್ತದೆ. ನಿಮ್ಮ ಆದಾಯ ಮತ್ತು ಸಂಪತ್ತಿನಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ. ಉತ್ತಮ ಹೂಡಿಕೆಗೆ ಅವಕಾಶಗಳು ಲಭ್ಯವಿರುತ್ತವೆ. ಇದು ಹಣ ಗಳಿಸುವ ಸಮಯ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಆರೋಗ್ಯವೂ ಉತ್ತಮವಾಗಿರುತ್ತದೆ. ಆದರೆ ನಿಮ್ಮ ಆಹಾರದ ಬಗ್ಗೆ ಸ್ವಲ್ಪ ಜಾಗರೂಕರಾಗಿರಿ.

ಕರ್ಕಾಟಕ ರಾಶಿ (Cancer)

ಶ್ರಾವಣ ಮಾಸದಲ್ಲಿ ಕರ್ಕಾಟಕ ರಾಶಿಯವರಿಗೆ ಶಿವನ ಆಶೀರ್ವಾದ ದೊರೆಯುತ್ತದೆ. ನಿಮ್ಮ ಜೀವನದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ವೈವಾಹಿಕ ಮತ್ತು ಕುಟುಂಬ ಜೀವನವು ಸಂತೋಷದಿಂದ ಕೂಡಿರುತ್ತದೆ. ಮನೆಯಲ್ಲಿ ಶಾಂತಿ ನೆಲೆಸಿರುತ್ತದೆ. ಉದ್ಯೋಗ ಬದಲಾವಣೆ ಮಾಡುವ ಬಗ್ಗೆ ಯೋಚನೆ ಇದ್ದರೆ ಇದು ಸರಿಯಾದ ಸಮಯ. ಪ್ರಮುಖ ಕಂಪನಿಯಿಂದ ಕೆಲಸದ ಆಫರ್‌ ಬರಬಹುದು. ನಿಮ್ಮ ಪ್ರಸ್ತುತ ವೃತ್ತಿಜೀವನದಲ್ಲಿ ಉತ್ತಮ ಯೋಜನೆ ದೊರೆಯುವ ನಿರೀಕ್ಷೆಯಿದೆ. ಶಿವ ಜೊತೆಗೆ ಲಕ್ಷ್ಮಿ ದೇವಿಯ ಆಶೀರ್ವಾದವೂ ನಿಮ್ಮ ಮೇಲಿರುವುದು. ನಿಮ್ಮ ಆದಾಯ ಉತ್ತಮವಾಗಿರುತ್ತದೆ. ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ. ಹಣಕಾಸಿನ ಸಮಸ್ಯೆಯಿಂದ ಮುಕ್ತಿ ಸಿಗುವುದು. ಗೊಂದಲದ ಸಮಯದಲ್ಲಿ, ನಿಮ್ಮ ಮನಸ್ಸಿನ ಮಾತನ್ನು ಕೇಳಿ, ಅದಕ್ಕೆ ಅನುಗುಣವಾಗಿ ವರ್ತಿಸಿ. ಕೆಲಸ ಕಾರ್ಯಗಳಲ್ಲಿ ಯಶಸ್ವಿಯಾಗುವಿರಿ.

ಸಿಂಹ ರಾಶಿ (Leo)

ಮಹಾದೇವನ ಆಶೀರ್ವಾದದಿಂದ, ಸಿಂಹ ರಾಶಿಯವರು ಶ್ರಾವಣ ಮಾಸದಲ್ಲಿ ಹೊಸ ಸಾಧನೆ ಮಾಡಬಹುದು. ವೃತ್ತಿಜೀವನದಲ್ಲಿ ನಿಮ್ಮ ಪ್ರಭಾವ ಮತ್ತು ವ್ಯಕ್ತಿತ್ವ ಬೆಳೆಯುತ್ತದೆ. ನಿಮ್ಮ ಆತ್ಮವಿಶ್ವಾಸ ಬಲವಾಗಿರುತ್ತದೆ. ಯಾವುದೇ ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಸಂಬಂಧಗಳು ಸೌಹಾರ್ದಯುತವಾಗಿರುತ್ತವೆ. ಆರ್ಥಿಕ ಮತ್ತು ಆದಾಯದ ವಿಷಯಗಳಿಗೆ ಸಮಯ ಅನುಕೂಲಕರವಾಗಿರುತ್ತದೆ. ಆದಾಯ ಹೆಚ್ಚಾಗುತ್ತದೆ ಹೊಸ ಆದಾಯದ ಮೂಲಗಳನ್ನು ಕಂಡುಕೊಳ್ಳಬಹುದು. ಭೂಮಿ ಅಥವಾ ಆಸ್ತಿಯನ್ನು ಖರೀದಿಸಲು ಅವಕಾಶವಿರಬಹುದು. ಆದರೆ ದಾಖಲೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ಹೂಡಿಕೆಯಲ್ಲಿ ನಿರ್ಲಕ್ಷ್ಯವು ನಷ್ಟಕ್ಕೆ ಕಾರಣವಾಗಬಹುದು. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಮಾನಸಿಕ ಒತ್ತಡದಿಂದ ದೂರವಿರಿ.

ತುಲಾ ರಾಶಿ (Libra)

ಶ್ರಾವಣ ಮಾಸವು ತುಲಾ ರಾಶಿಯವರಿಗೆ ಶುಭ ಮತ್ತು ಫಲಪ್ರದವಾಗಿರುತ್ತದೆ. ಶಿವನ ಆಶೀರ್ವಾದದಿಂದ ನೀವು ಕೈ ಹಾಕುವ ಕೆಲಸಗಳಲ್ಲಿ ಯಶಸ್ಸು ಸಿಗುವುದು. ಉದ್ಯೋಗ ಮತ್ತು ವ್ಯವಹಾರದಲ್ಲಿರುವವರಿಗೆ ಪ್ರಗತಿಗೆ ಹೊಸ ಅವಕಾಶಗಳು ಸಿಗುತ್ತವೆ. ಹೊಸ ಉದ್ಯೋಗಾವಕಾಶಗಳು ಹುಟ್ಟಿಕೊಳ್ಳುವುದು. ವ್ಯವಹಾರದಲ್ಲಿರುವವರಿಗೆ ಲಾಭ ಗಳಿಸಲು ಮತ್ತು ತಮ್ಮ ವ್ಯವಹಾರವನ್ನು ವಿಸ್ತರಿಸಲು ಅವಕಾಶಗಳು ಸಿಗಬಹುದು. ಜನರಿಂದ ಬೆಂಬಲ ಸಿಗುವುದು. ಕುಟುಂಬ ಜೀವನವು ಸಂತೋಷಮಯವಾಗಿರುತ್ತದೆ. ಈ ಸಮಯದಲ್ಲಿ ನೀವು ಸಾಮಾಜಿಕ ಕಾರ್ಯಗಳಲ್ಲಿಯೂ ಸಕ್ರಿಯರಾಗಿರಬಹುದು. ಹಣದ ಕೊರತೆ ಇರುವುದಿಲ್ಲ. ಆರ್ಥಿಕ ಪರಿಸ್ಥಿತಿ ಸ್ಥಿರವಾಗಿರಬಹುದು. ನಿಮ್ಮಲ್ಲಿ ನೀವು ಸಕಾರಾತ್ಮಕ ಬದಲಾವಣೆಗಳನ್ನು ಕಂಡುಕೊಳ್ಳಬಹುದು.

ಕುಂಭ ರಾಶಿ (Aquarius)

ಶ್ರಾವಣ ಮಾಸವು ಕುಂಭ ರಾಶಿಯವರಿಗೆ ಹೊಸ ಅವಕಾಶಗಳನ್ನು ತರುತ್ತದೆ. ಶಿವನ ಆಶೀರ್ವಾದದಿಂದ ಏಳಿಗೆ ಹೊಂದುತ್ತೀರಿ. ವೃತ್ತಿಜೀವನದಲ್ಲಿ ಅಭೂತಪೂರ್ವ ಯಶಸ್ಸು ಕಾಣುವಿರಿ. ಹೊಸ ಯೋಜನೆಯಲ್ಲಿ ಕೆಲಸ ಮಾಡಲು ನಿಮಗೆ ಅವಕಾಶ ಸಿಗಬಹುದು. ಈ ಅವಕಾಶವು ನಿಮ್ಮ ಮುಂದಿನ ಹಾದಿಯನ್ನು ಸುಲಭಗೊಳಿಸುತ್ತದೆ.

ಮಾನಸಿಕವಾಗಿ ಬಲಶಾಲಿಯಾಗಿ ಮತ್ತು ಸಕ್ರಿಯರಾಗಿರುವಿರಿ. ಜನರನ್ನು ಭೇಟಿ ಮಾಡುವ ಮೂಲಕ ಹೊಸ ಅನುಭವಗಳನ್ನು ಪಡೆಯುವಿರಿ. ನಿಮ್ಮ ಪ್ರಭಾವ ಬೆಳೆಯುತ್ತದೆ. ಜನ ನಿಮ್ಮತ್ತ ಆಕರ್ಷಿತರಾಗುತ್ತಾರೆ. ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುವಿರಿ. ಈ ತಿಂಗಳು, ನಿಮ್ಮ ಮೇಲೆ ನಂಬಿಕೆ ಇರಿಸಿ ಮತ್ತು ಮುಂದುವರಿಯಿರಿ.

ಶ್ರಾವಣದಲ್ಲಿ ಮಾಡಬೇಕಾದ ಪರಿಹಾರ ಕಾರ್ಯ

ಶ್ರಾವಣ ಮಾಸದಲ್ಲಿ, ಪ್ರತಿದಿನ ಶಿವನಿಗೆ ನೀರನ್ನು ಅರ್ಪಿಸಬೇಕು. ಒಂದು ವೇಳೆ ಪ್ರತಿದಿನ ಹೀಗೆ ಮಾಡಲು ಸಾಧ್ಯವಾಗದಿದ್ದರೆ, ಕನಿಷ್ಠ ಶ್ರಾವಣ ಸೋಮವಾರದಂದು ಶಿವನಿಗೆ ಜಲ ಅರ್ಪಿಸಿ. ಶ್ರಾವಣ ಮಾಸದಲ್ಲಿ ಮಹಾದೇವನಿಗೆ ಅರ್ಪಿಸುವ ನೀರು ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಶ್ರಾವಣ ಮಾಸದಲ್ಲಿ ಶಿವನಿಗೆ ಜಲಶುದ್ಧಿ ಮಾಡುವುದರಿಂದ ಎಲ್ಲಾ ತೊಂದರೆಗಳು ದೂರವಾಗುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+