ಗುರುಫಲ : ವೃಷಭ, ಸಿಂಹ, ಮೀನ, ವೃಶ್ಚಿಕ ರಾಶಿಗೆ ಸೂಪರ್

By: ನಾಗನೂರಮಠ ಎಸ್ಎಸ್
Subscribe to Oneindia Kannada

ಕಳೆದ ವರ್ಷದ ಗುರು ಸಂಚಾರದ ಫಲವನ್ನೊದಿದವರಿಗೆ ಈ ವರ್ಷವೂ ಗುರು ಸಂಚಾರದ ಫಲಾಫಲ ಓದುವ ನಿರೀಕ್ಷೆ ಇದ್ದೇ ಇರುತ್ತದೆ. ಹೀಗಾಗಿ 2016ರ ಆಗಸ್ಟ್ 11ರಂದು ಗುರುವು ಸಿಂಹ ರಾಶಿಯಿಂದ ಕನ್ಯಾ ರಾಶಿಗೆ ಕಾಲಿಟ್ಟಿದ್ದಾರೆ. ಗುರು ಸಂಚಾರವು ಒಂದು ರಾಶಿಯಲ್ಲಿ 1 ವರ್ಷ ಕಾಲ ಸಂಚಾರ ಮಾಡುತ್ತಾನೆ. ಗುರು ಸಂಚಾರದ ಫಲಾಫಲ ಪ್ರತಿಯೊಂದು ರಾಶಿಗೆ ಹೇಗಿರಲಿದೆ ಎಂಬುದನ್ನು ಪ್ರತಿ ರಾಶಿಗನುಗುಣವಾಗಿ ವಿವರವಾಗಿ ಇಲ್ಲಿ ನೀಡಲಾಗಿದೆ.

ಗುರುವು ಕನ್ಯಾ ರಾಶಿಯಲ್ಲಿ ಮುಂದಿನ ವರ್ಷದ ಸೆಪ್ಟೆಂಬರ್ 11ರವರೆಗೂ ಕನ್ಯಾ ರಾಶಿಯಲ್ಲಿಯೇ ಇರುತ್ತಾನೆ. ಆ ನಂತರ ಮುಂದಿನ ರಾಶಿ ತುಲಾಗೆ ಪ್ರವೇಶ ಮಾಡುತ್ತಾನೆ. ಮತ್ತೆ ಒಂದು ವರ್ಷದ ಬಳಿಕ ವೃಶ್ಚಿಕ ರಾಶಿಗೆ. ಹೀಗೆ ಪ್ರತಿ ವರ್ಷವೂ ಒಂದೊಂದು ರಾಶಿಯಲ್ಲಿರುವುದರಿಂದ ಗುರುಫಲ ಬೇರೆ ಬೇರೆಯಾಗಿಯೇ ಇರುತ್ತದೆ.

ತುಂಬಾ ಒಳ್ಳೆಯದನ್ನು ಮಾಡುವವನೆಂದೇ ಗುರು ಗ್ರಹದ ಫಲಾಫಲ ಪ್ರಸಿದ್ಧಿ ಹೊಂದಿದೆ. ಹೆಚ್ಚಾಗಿ ಗಂಡು ಸಂತಾನ ಬಯಸುವವರಿಗೆ ಮತ್ತು ಹಣಕಾಸಿನ ವ್ಯವಹಾರ ಮಾಡುವವರು ಅಥವಾ ಸಾಲ ಸೋಲ ಮಾಡಿ ಸೋತವರು ಗುರುಬಲ ಬರುವುದನ್ನೇ ಕಾಯಬೇಕಾಗುತ್ತದೆ. ಗುರುಬಲವಿಲ್ಲದಿದ್ದರೆ ಸಂತಸದ ಜೀವನ ಮರೀಚಿಕೆಯಾಗುತ್ತದೆ. [ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]

Gurubala for zodiac signs as Jupiter enters Virgo

ಗುರುವಿನ ಸ್ವಕ್ಷೇತ್ರವೆಂದೇ ಕರ್ಕ ರಾಶಿಯಲ್ಲಿ ಗುರುವು ಉಚ್ಚ ಸ್ಥಾನದವನಾಗಿರುತ್ತಾನೆ. ಅಲ್ಲಿ ಬಂದಾಗ ಅಂದರೆ ಹನ್ನೆರಡು ವರ್ಷಕ್ಕೊಮ್ಮೆ ಬರುವುದರಿಂದ ತುಂಬಾ ಉತ್ತಮ ಫಲಗಳನ್ನು ನೀಡುತ್ತಾನೆ. ಆದರೆ ಮಕರ ರಾಶಿಯು ಗುರುವಿಗೆ ನೀಚ ರಾಶಿಯಾಗಿರುತ್ತದೆ. ಈ ರಾಶಿಯಲ್ಲಿ ಗುರು ಸಂಚರಿಸುವಾಗ ಶುಭಫಲದ ಬದಲು ಅಶುಭ ಫಲಗಳನ್ನೇ ನೀಡುತ್ತಾನೆ. ಕೆಲವರಿಗೆ ಮಧುಮೇಹ ಮತ್ತು ಇತರೆ ಹೊಟ್ಟೆಗೆ ಸಂಬಂಧಪಟ್ಟ ರೋಗಗಳು ಬರುವುದು ಗುರುಬಲವಿಲ್ಲದಾಗ ಮಾತ್ರ ಎಂಬುದು ಮಾತ್ರ ಸತ್ಯ.

ಗುರುವು ರಾಶಿಯಿಂದ 2, 5, 7, 9, 11ನೇ ಸ್ಥಾನದಲ್ಲಿ ಸಂಚರಿಸುವಾಗ ಶುಭಫಲವನ್ನು ನೀಡುತ್ತಾನೆ. ಹೀಗಾಗಿ ಗುರುಬಲ ಬಂದಾಗ ಮುಖ್ಯ ಕೆಲಸಗಳನ್ನು ಮಾಡಿಕೊಳ್ಳಬೇಕು. ಇನ್ನೊಂದು ಮುಖ್ಯವಾದ ವಿಷಯವೆಂದರೆ, ಗುರುವು ರಾಶಿಯಲ್ಲಿ ಒಂದು ವರ್ಷ ಸಂಚರಿಸಿದರೂ ಕೇವಲ 2 ತಿಂಗಳು ಮಾತ್ರ ಫಲ ನೀಡುತ್ತಾನೆ. ಆ ಫಲವು ಜನ್ಮಜಾತಕದಲ್ಲಿ ಗುರುವು ಇದ್ದ ನಿರ್ದಿಷ್ಟ ಡಿಗ್ರಿಗೆ ಬಂದಾಗ ಮಾತ್ರ ಅವರ ಫಲಾಫಲ ಪಡೆದುಕೊಳ್ಳಬಹುದು. ಕೆಟ್ಟದ್ದು ಇದೆ ಎಂದು ಇಡೀ ವರ್ಷ ಕೆಟ್ಟದ್ದು ಆಗಲ್ಲ. ಒಳ್ಳೆಯದು ಇದೆ ಎಂದು ಇಡೀ ವರ್ಷಪೂರ್ತಿ ಒಳ್ಳೆಯದೇ ಆಗಬೇಕಂತೇನೂ ಇಲ್ಲ. ಒಟ್ಟಿನಲ್ಲಿ ಜನ್ಮಜಾತಕದಲ್ಲಿ ಗುರು ಇರುವ ಡಿಗ್ರಿ ನೋಡಿಕೊಂಡು ಅವನು ರಾಶಿಯಲ್ಲಿ ಆ ಡಿಗ್ರಿಗೆ ಬಂದಾಗ ಜಾಗ್ರತರಾಗುವುದು ಒಳ್ಳೆಯದು.

ಈಗ ಯಾವ ರಾಶಿಯವರು ಯಾವ ರೀತಿಯ ಗುರುವಿನ ಫಲವನ್ನು ಅನುಭವಿಸುತ್ತಾರೆ ಎಂಬುದನ್ನು ಒಮ್ಮೆ ನೋಡೋಣ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Gurubala for various zodiac signs based on transit of Jupiter plant from Leo to Virgo in 2016. Planet Jupiter has entered Virgo on August 11, 2016. Our astrologer explains how it affects, helps people.
Please Wait while comments are loading...