Today Gold Price: ಇಂದು ಚಿನ್ನ, ಬೆಳ್ಳಿ ಬೆಲೆ ದಿಢೀರ್ ಏರಿಕೆ; ನಗರವಾರು ದರ ಪಟ್ಟಿ ಹೀಗಿದೆ ನೋಡಿ

ಚಿನ್ನ, ಬೆಳ್ಳಿ ಎಂದರೆ ಯಾರಿಗೆ ಇಷ್ಟಯಿರಲ್ಲ ಹೇಳಿ. ಈ ಲೋಹಗಳ ಬೆಲೆ ಎಷ್ಟೇ ಗಗನಕ್ಕೇರಿದರೂ ಖರೀದಿಗೆ ಮುಗಿಬೀಳುವವರ ಸಂಖ್ಯೆ ಮಾತ್ರ ಕಡಿಮೆಯಾಗಲ್ಲಾ... ಹಾಗಾಗಿ ಮಾರುಕಟ್ಟೆಯಲ್ಲಿ ಪ್ರತಿನಿತ್ಯ ಚಿನ್ನ, ಬೆಳ್ಳಿ ದರ ಎಷ್ಟಿರುತ್ತದೆ ಎನನುವ ಕುರಿತು ಎಲ್ಲರಲ್ಲೂ ಕುತೂಹಲ ಇದ್ದೇ ಇರುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ರಾಜಕೀಯ ಉದ್ವಿಗ್ನತೆಗಳ ನೇರ ಪರಿಣಾಮ ಭಾರತೀಯ ಮಾರುಕಟ್ಟೆಯ ಮೇಲೂ ಬೀರಿದೆ.

ಇಂದು (ಜುಲೈ 22, 2026) ಚಿನ್ನ ಮತ್ತು ಬೆಳ್ಳಿ ದರದಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ಆಭರಣ ಖರೀದಿದಾರರು ಮತ್ತು ಹೂಡಿಕೆದಾರರ ಲೆಕ್ಕಾಚಾರಗಳು ಸ್ವಲ್ಪ ಮಟ್ಟಿಗೆ ತಲೆಕೆಳಗಾಗಿವೆ. ವಿಶೇಷವಾಗಿ ಹೆಚ್ಚಾಗಿ ಖರೀದಿಸುವ 22 ಕ್ಯಾರೆಟ್ ಆಭರಣದ ಚಿನ್ನದ ಬೆಲೆಯಲ್ಲಿ ನಿನ್ನೆಗಿಂತ ಭಾರೀ ಹೆಚ್ಚಳವಾಗಿದೆ.

Gold and Silver Price

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಇಂದು ಗ್ರಾಹಕರಿಗೆ ತುಸು ಬಿಸಿ ಮುಟ್ಟಿಸಿದೆ. ಮಾರುಕಟ್ಟೆಯ ಅಂಕಿ-ಅಂಶಗಳ ಪ್ರಕಾರ, ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆ 13,430 ರೂಪಾಯಿಗಳಿಗೆ ಏರಿಕೆಯಾಗಿದೆ. ಇನ್ನು 24 ಕ್ಯಾರೆಟ್ ಶುದ್ಧ ಚಿನ್ನದ ದರ 1 ಗ್ರಾಂಗೆ 14,651 ರೂಪಾಯಿಗಳಷ್ಟಿದೆ. ಬೆಳ್ಳಿಯ ದರವೂ ಗಗನಕ್ಕೇರಿದ್ದು, ಒಂದು ಕೆಜಿ ಬೆಳ್ಳಿ ಬೆಲೆ ಮಾರುಕಟ್ಟೆಯಲ್ಲಿ ಬರೋಬ್ಬರಿ 2,26,350 ರೂಪಾಯಿಗಳ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ.

ನಗರವಾರು 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ ಪಟ್ಟಿ

ಬೆಂಗಳೂರು - 13,430 ರೂಪಾಯಿ

ದೆಹಲಿ - 13,445 ರೂಪಾಯಿ

ಚೆನ್ನೈ - 13,430 ರೂಪಾಯಿ

ಮುಂಬೈ - 13,430 ರೂಪಾಯಿ

ಹೈದರಾಬಾದ್ - 13,430 ರೂಪಾಯಿ

ಅಹಮದಾಬಾದ್ - 13,435 ರೂಪಾಯಿ

ಪುಣೆ - 13,430 ರೂಪಾಯಿ

ಕೋಲ್ಕತ್ತಾ - 13,430 ರೂಪಾಯಿ

ನಿನ್ನೆಯ ದರಗಳಿಗೆ ಹೋಲಿಸಿದರೆ ಇಂದು ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಜುಲೈ 21 ರಂದು 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 13,220 ರೂಪಾಯಿ ಇತ್ತು, ಆದರೆ ಇಂದು (ಜುಲೈ 22) ಅದು 13,430 ರೂಪಾಯಿಗೆ ಜಿಗಿದಿದೆ. ಅಂದರೆ ಕೇವಲ 24 ಗಂಟೆಗಳ ಅಂತರದಲ್ಲಿ ಪ್ರತಿ 1 ಗ್ರಾಂಗೆ 210 ರೂಪಾಯಿಗಳಷ್ಟು ದರ ಹೆಚ್ಚಳವಾಗಿದೆ. ಅದೇ ರೀತಿ, ಬೆಳ್ಳಿ ಬೆಲೆಯಲ್ಲೂ ಗಣನೀಯ ಏರಿಕೆಯಾಗಿದ್ದು, ನಿನ್ನೆ 2,23,895 ರೂಪಾಯಿ ಆಸುಪಾಸಿನಲ್ಲಿದ್ದ ಒಂದು ಕೆಜಿ ಬೆಳ್ಳಿ ಬೆಲೆ, ಇಂದು ಮಾರುಕಟ್ಟೆಯಲ್ಲಿ 2,26,350 ರೂಪಾಯಿಯ ಗಡಿ ದಾಟಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದಿಢೀರ್ ಬೆಳವಣಿಗೆಗಳಿಂದ ಆಭರಣ ಪ್ರಿಯರಿಗೆ ಹಾಗೂ ಹೂಡಿಕೆದಾರರಿಗೆ ಇದು ಸ್ವಲ್ಪ ಹೊರೆಯಾಗಿ ಪರಿಣಮಿಸಿದರೂ, ಜಾಗತಿಕ ಅನಿಶ್ಚಿತತೆಯ ಸಮಯದಲ್ಲಿ ಹಳದಿ ಲೋಹದ ಮೇಲಿನ ಹೂಡಿಕೆ ಅತ್ಯಂತ ಸುರಕ್ಷಿತ ಎಂಬ ಭಾವನೆ ಮಾರುಕಟ್ಟೆಯಲ್ಲಿ ಎದ್ದು ಕಾಣುತ್ತಿದೆ. ಇಂದಿನ ಮಾರುಕಟ್ಟೆಯ ಈ ರೀತಿ ಇದೆ, ಮುಂಬರುವ ದಿನಗಳಲ್ಲಿ ದರ ಮತ್ತಷ್ಟು ಬದಲಾಗುವ ಎಲ್ಲ ಸಾಧ್ಯತೆಗಳೂ ಇವೆ.

ಗಮನಿಸಿ: ಮೇಲೆ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ದರಗಳು ಕೇವಲ ಸೂಚಕ ದರಗಳಾಗಿದ್ದು, ಇವುಗಳಿಗೆ ಜಿಎಸ್‌ಟಿ ಹಾಗೂ ಆಭರಣ ತಯಾರಿಕಾ ಶುಲ್ಕಗಳು ಸೇರಿರುವುದಿಲ್ಲ ಎಂಬುದನ್ನು ಗ್ರಾಹಕರು ಗಮನಿಸಬೇಕು. ಹೀಗಾಗಿ , ನೀವು ಆಭರಣಗಳನ್ನು ಖರೀದಿಸಲು ಮಳಿಗೆಗೆ ಭೇಟಿ ನೀಡಿದಾಗ ಅಂತಿಮ ಬಿಲ್ ಮೊತ್ತದಲ್ಲಿ ವ್ಯತ್ಯಾಸ ಕಂಡುಬರಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+