ಮಿಥುನ : ಎಷ್ಟೇ ಕಷ್ಟ ಬಂದರೂ ನಿಷ್ಠೆಯಿಂದ ಕೆಲಸ ಮಾಡಿ

ರಾಶಿಯಿಂದ ನಾಲ್ಕನೇ ಸ್ಥಾನದಲ್ಲಿ ಗುರು ಇರುವುದರಿಂದ ಮಾನಸಿಕವಾಗಿ ಸ್ಥಿರತೆ ಇಲ್ಲದ ಮಿಥುನ ರಾಶಿಯವರಿಗೆ ಹೆಚ್ಚಿನ ಒತ್ತಡಗಳು ಗುರುವಿನ ಸಂಚಾರದ ಫಲಗಳೆನ್ನಬಹುದು.

ಸಂಬಂಧಿಕರೊಂದಿಗೆ ಚಿಕ್ಕಪುಟ್ಟ ವಿಷಯಗಳಿಗೆ ಕಿತ್ತಾಡುವುದನ್ನ ಮಾಡಬೇಡಿ. ಅವರೊಂದಿಗೆ ವಾದ-ವಿವಾದವನ್ನು ಮಾಡಲೇಬೇಡಿ. ಏನೇ ಆಗಿದ್ದರೂ ಗಪಚುಪ್ ಆಗಿ ಇರುವುದು ಬುದ್ಧಿವಂತರ ಲಕ್ಷಣ ಎಂದುಕೊಂಡು ಸುಮ್ಮನಿರುವುದು ಶ್ರೇಷ್ಠರೆನಿಸಿಕೊಳ್ಳುತ್ತಾರೆ ಎಂದು ನೆನಪಿಸಿಕೊಳ್ಳಿ.

ಏಕೆಂದರೆ ಗುರುಫಲ ಅಷ್ಟೇನೂ ಸುಖಕರವಾಗಿರಲ್ಲ. ಹೀಗಾಗಿ ಗೊತ್ತಿದ್ದೂ ಗೊತ್ತಿದ್ದು ತಪ್ಪು ಮಾಡುವುದು ಬೆಪ್ಪರ ಲಕ್ಷಣವೆನಿಸಿಕೊಳ್ಳುತ್ತದೆ. ಎಷ್ಟು ಬೇಕೋ ಅಷ್ಟು ಮಾತ್ರ ಸಂಬಂಧಿಕರೊಂದಿಗೆ ವ್ಯವಹಾರ ಇರಲಿ. [ಗುರುಫಲ : ವೃಷಭ, ಸಿಂಹ, ಮೀನ, ವೃಶ್ಚಿಕ ರಾಶಿಗೆ ಸೂಪರ್]

Gurubala for Gemini zodiac sign - Don't take risks

ಮನೆಗೆ ಮತ್ತು ಆಸ್ತಿಪಾಸ್ತಿಗೆ ಸಂಬಂಧಪಟ್ಟಂತ ಕಲಹಗಳು ಬರುವ ಸಂಭವವಿರುವುದರಿಂದ ನ್ಯಾಯವಾಗಿ ಸೂಕ್ತವಾದ ದಾಖಲೆಗಳು ಇಟ್ಟುಕೊಳ್ಳಿ. ಒಂದು ಚಿಕ್ಕ ತಪ್ಪು ಕೂಡ ಈ ಸಮಯದಲ್ಲಿ ಆಸ್ತಿ ಕೈ ಬಿಟ್ಟು ಹೋಗಲು ಕಾರಣವಾಗುತ್ತದೆ.

ಆದ್ದರಿಂದ ಹೆಚ್ಚಿನ ಪ್ರಮಾಣದ ಚಂಚಲ ಸ್ವಭಾವ ಹೊಂದಿರುವ ಈ ರಾಶಿಯವರು ಈ ಬಾರಿ ಮಾನಸಿಕವಾಗಿ ಗಟ್ಟಿಮುಟ್ಟಾಗಿರಲು ಪ್ರಯತ್ನಿಸಬೇಕು. ನಿರ್ಧಾರಗಳನ್ನು ಸರಿಯಾಗಿ ತಿಳಿದವರ ಬಳಿ ಕೇಳಿ ತಿಳಿದುಕೊಂಡು ಮುಂದುವರೆಯಬೇಕು. [ವರ್ಷಭವಿಷ್ಯ 2016 : ಮಿಥುನ ರಾಶಿಗೆ ಪರಿಹಾರೋಪಾಯ]

ಕೆಲಸದ ನಿಮಿತ್ತ ಪರಸ್ಥಳಕ್ಕೆ ವರ್ಗಾವಣೆಯಾದರೆ ಮುಲಾಜಿಲ್ಲದೇ ಹೋಗಿ ಕೆಲಸ ಮಾಡಬೇಕು. ಇದೆಲ್ಲಾ ಆಗೋಲ್ಲಾ, ನನಗೆ ಕಷ್ಟ, ಮನೆಯವರಿಗೆ ಕಷ್ಟ ಎಂದು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವುದು ಬೇಡ. ಮುಂದಿನ ದಿನಗಳಲ್ಲಿ ಇದೇ ಗುರು ಬೇಡವೆಂದರೂ ಬೇಡಿದ್ದನ್ನು ಕೊಡುತ್ತಾನೆ. [ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]

ಹೀಗಾಗಿ ಈಗ ಗುರುಫಲ ವಿರೋಧಿಸಿದರೆ ಮುಂದೆ ಬರುವುದು ಕೈ ತಪ್ಪಿ ಹೋಗುತ್ತದೆ ನೆನಪಿರಲಿ. ನೀವು ನೋಡಿರಬಹುದು ಮಂಗ ಎಷ್ಟೇ ವಯಸ್ಸಾಗಿರಲಿ ಗಿಡದಿಂದ ಗಿಡಕ್ಕೆ ನೆಗೆಯುವುದನ್ನು ಮತ್ತು ಜಿಗಿದಾಡುವುದನ್ನು ಬಿಡುವುದಿಲ್ಲ. ಇದೇ ಪಾಠವೆಂದುಕೊಂಡು ಎಷ್ಟೇ ಕಷ್ಟ ಬಂದರೂ ಮನಸ್ಸಿಗೆ ಹಚ್ಚಿಕೊಳ್ಳದೇ ಇದ್ದ ಕೆಲಸವನ್ನು ನಿಷ್ಠೆಯಿಂದ ಮಾಡಿದರೆ ಗುರುಫಲ ಹೆಚ್ಚಿನ ಪ್ರಮಾಣದಲ್ಲಿ ಕೆಟ್ಟದ್ದನ್ನು ಮಾಡುವುದಿಲ್ಲ. [ಮಿಥುನ ರಾಶಿಗೆ ದುರ್ಮುಖನಾಮ ಸಂವತ್ಸರದ ಫಲಾಫಲ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+