ಸಿಂಹ ರಾಶಿಯವರಿಗೆ ಜಾಕಪಾಟ್ ಹೊಡೆದಂಗೇನೆ!
ಲಾಭದ ಸ್ಥಾನವೆಂದೇ ಕರೆಯಿಸಿಕೊಳ್ಳುವ ರಾಶಿಯಿಂದ ಎರಡನೇ ಸ್ಥಾನದಲ್ಲಿ ಗುರು ಸಂಚರಿಸುವುದರಿಂದ ಸಿಂಹ ರಾಶಿಯವರಿಗೆ ಜಾಕಪಾಟ್ ಹೊಡೆದಂಗೇನೆ.
ಏಕೆಂದರೆ ಇಷ್ಟು ದಿನ ಅಂದರೆ ಕಳೆದ ವರ್ಷದಿಂದ ಗುರು ನಿಮ್ಮ ರಾಶಿಯಲ್ಲಿಯೇ ಇದ್ದನು. ಈಗ ಸಿಂಹ ರಾಶಿ ಬಿಟ್ಟು ಕನ್ಯಾ ರಾಶಿಗೆ ಸಂಚರಿಸುವುದರಿಂದ ನಿಮಗೆ ಬಿಡುಗಡೆಯ ಭಾಗ್ಯವೆಂದೇ ಹೇಳಬಹುದು.
ಗುರು ಸಂಚಾರದ ಸಮಯದಲ್ಲಿ ಕೆಲವೊಮ್ಮೆ ಮಧುಮೇಹ ಬಂದಿರುವ ಸಂಭವ ಇರುವುದರಿಂದ ಈ ರಾಶಿಯ 35 ವರ್ಷ ಮೇಲಿನವರು ತಪ್ಪದೇ ರಕ್ತದಲ್ಲಿ ಗ್ಲುಕೋಸ್ ಪರೀಕ್ಷಿಸಿಕೊಂಡು ಶುಗರ್ ಬಂದಿದೆಯೋ ಬರುವ ಹಂತದಲ್ಲಿಯೋ ಎಂಬುದನ್ನು ತಿಳಿದುಕೊಳ್ಳಬೇಕು. ಇದು ಮುಖ್ಯವಾದ ಸಂಗತಿ. [ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]

ಇನ್ನು ಕನ್ಯಾ ರಾಶಿಯಲ್ಲಿನ ಗುರು ನಿಮಗೆ ಹಣದೊಂದಿಗೆ ಅದೃಷ್ಟವನ್ನು ತೆರೆದಿಟ್ಟು ಬಿಡುತ್ತಾನೆ. ಕಾಸಿನ ಕೊರತೆಯಿಂದ ಕಂಗಾಲಾದವರಿಗೆ ಈಗ ಗುರುಬಲ ಬಂದಿದೆ ಎಂದೇ ಹೇಳಬಹುದು.
ಇಷ್ಟು ದಿನ ಗುರುಬಲವಿಲ್ಲದೇ ತೊಂದರೆ ಅನುಭವಿಸಿದವರಿಗೆ ಈಗ ಗುರುಬಲವನ್ನು ಕಣ್ಣಾರೆ ನೋಡಿಕೊಂಡು ಅನುಭವಿಸುವ ಸಮಯವೆನ್ನಬಹುದು. ಬಾಕಿ ಇದ್ದ ಹಣ ಅಥವಾ ಸರಕಾರದಿಂದ ಬರಬೇಕಾದ ದುಡ್ಡು ಕೈಸೇರಲು ಹವಣಿಸುತ್ತದೆ. ಕೆಲವೊಂದು ವ್ಯವಹಾರಗಳಲ್ಲಿ ಸಿಲುಕಿ ಹಾಕಿಕೊಂಡ ದುಡ್ಡು ಕೂಡ ಈಗ ಬಂದು ಮನಸ್ಸಿಗೆ ಸಮಾಧಾನವಾಗುತ್ತದೆ. [ಗುರುಫಲ : ವೃಷಭ, ಸಿಂಹ, ಮೀನ, ವೃಶ್ಚಿಕ ರಾಶಿಗೆ ಸೂಪರ್]
ಇಷ್ಟು ದಿನ ವೈರತ್ವ ಸಾಧಿಸಿದವರು ಈಗ ಸ್ನೇಹದ ಹಸ್ತ ಕೈಚಾಚಲು ಮುಂದೆ ಬರುತ್ತಾರೆ. ಬಂದವರನ್ನು ಹೃದಯದಿಂದ ಸ್ವಾಗತಿಸಿ. ಅವರಿಂದಲೇ ಲಾಭ ಮಾಡಿಕೊಳ್ಳುವ ಹಾದಿ ಗೊತ್ತಾಗಬಹುದು. ಎಲ್ಲ ವಿಷಯಗಳಲ್ಲೂ ಸಂತಸವಿರುವುದರಿಂದ ಮಾನಸಿಕ ಸ್ಥಿರತೆ ಹೆಚ್ಚಾಗುತ್ತದೆ. ಜೊತೆಗೆ ಕೆಲವೊಬ್ಬರಿಗೆ ಅಹಂ ಕೂಡ ಬರಬಹುದು. ಅದನ್ನು ಬರದಂತೆ ನೋಡಿಕೊಳ್ಳುವುದು ಜಾಣರ ಲಕ್ಷಣ.
ಈ ಹಿಂದಿನ ಕೆಲ ದಿನಗಳು ನಿಮಗೆ ಕಾಲಿಗೆ ಕಲ್ಲು ಕಟ್ಟಿಕೊಂಡು ಓಡಾಡಿರುವಂತೆ ಅನುಭವವಾಗಿರುತ್ತದೆ. ಹೀಗಾಗಿ ಈಗ ಬಂದಿರುವ ಶುಭಫಲವನ್ನು ಚೆನ್ನಾಗಿ ಬಳಸಿಕೊಂಡು ಆಸ್ತಿಪಾಸ್ತಿ ಮಾಡಿಕೊಂಡು ಆರಾಮಾಗಿ ಸಂಧ್ಯಾಕಾಲದವರೆಗೂ ಜೀವನ ಕಳೆಯಬಹುದು. ನಿಮ್ಮಿಂದ ಕುಟುಂಬದವರೂ ಕೂಡ ಸಂತಸದಿಂದಿರಬಹುದು. [ಸಿಂಹ ರಾಶಿಗೆ ದುರ್ಮುಖನಾಮ ಸಂವತ್ಸರದ ಫಲಾಫಲ]
ಆದರೆ, ಮನೆಯಲ್ಲಿನವರ ರಾಶಿಗಳು ಯಾವವು ಮತ್ತು ಅವರಿಗೇನು ಫಲ ಎಂಬುದನ್ನು ನೀವು ತಿಳಿದುಕೊಂಡು ಅವರೊಂದಿಗೆ ಸೂಕ್ತ ರೀತಿಯಲ್ಲಿ ವರ್ತಿಸಬೇಕು. ಕೆಲವೊಮ್ಮೆ ಈ ರಾಶಿಯ ಪುರುಷರಿಗೆ ಕಚೇರಿ ಅಥವಾ ವ್ಯವಹಾರದಲ್ಲಿ ಅಥವಾ ಸಂಬಂಧಿಕರಲ್ಲಿನ ಮಹಿಳೆಯರಿಂದ ಜೀವನಕ್ಕೆ ಸಹಾಯ ಸಿಗುತ್ತದೆ. ಸಹಾಯ ನೀಡಲು ಬಂದರೆ ತಿರಸ್ಕರಿಸದೇ ಬಯಸದೇ ಬಂದ ಭಾಗ್ಯ ಎಂದುಕೊಂಡು ಸ್ವೀಕರಿಸಬೇಕು. ಕೆಲ ಮಹಿಳೆಯರು ಹೆತ್ತ ತಾಯಿಯಂತೆ ಮುಂದೆ ನಿಂತು ಸಹಾಯಹಸ್ತ ನೀಡುತ್ತಾರೆ. ಹಣದ ಹರಿವು ಹೆಚ್ಚಳವಾಗುವುದರಿಂದ ಹಣವನ್ನು ಸೂಕ್ತವಾಗಿ ಬಳಕೆ ಮಾಡಿಕೊಳ್ಳಬೇಕು. ['ಸಿಂಹಾ'ಸನದ ಅದೃಷ್ಟವಿರುವ ಮಘಾ ನಕ್ಷತ್ರ!]
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications