ಗುರುಫಲ : ಕರ್ಕ ರಾಶಿಗೆ ಹಣಕಾಸಿನ ತೊಂದರೆ, ಎಚ್ಚರ!

ಕರ್ಕ ರಾಶಿಯ ಅಧಿಪತಿ ಸ್ವತಃ ಗುರುವೇ ಆಗಿದ್ದಾನೆ. ಹೀಗಿದ್ಯಾಗ್ಯೂ ಜನ್ಮರಾಶಿಯಿಂದ ಮೂರನೇ ಸ್ಥಾನದಲ್ಲಿ ಬಂದಿರುವ ಗುರು ಅಷ್ಟೇನೂ ಶುಭದಾಯಕನಲ್ಲ. ಆದರೆ, ಒಂದು ಮಾತಂತೂ ನಿಜ. ಪಂಚಮ ಶನಿಯ ಕಾಟದಲ್ಲಿ ಇರುವ ಕರ್ಕ ರಾಶಿಗೆ ಗುರು ಕೂಡ ಕಾಟ ಕೊಡಲಿದ್ದಾನೆ. ಹೀಗಾಗಿ ಆದಷ್ಟು ಗುರುಶಾಂತಿಯೊಂದಿಗೆ ಶನಿಶಾಂತಿ ಮಾಡಿಸಿಕೊಳ್ಳುವುದು ಶುಭ.

ಇನ್ನು ಪಂಚಮಶನಿಯು ಸಂಸಾರಕ್ಕೆ ಹೊಡೆತ ನೀಡುತ್ತಿರುವುದರಿಂದ ಸ್ವಲ್ಪ ಮಾನಸಿಕ ಅಸಮತೋಲನ ಕಳೆದುಕೊಂಡಿರುವ ಕರ್ಕ ರಾಶಿಯವರು ಗುರುವಿನ ಕೃಪಾಕಟಾಕ್ಷ ಪಡೆದುಕೊಳ್ಳಲು ಪ್ರಯತ್ನಿಸಬೇಕು.

ಎಲ್ಲ ಕೆಲಸಗಳು ಅರ್ಧಮರ್ಧಕ್ಕೆ ನಿಲ್ಲುವುದರಿಂದ ಮುಖ್ಯವಾದ ಕೆಲಸಗಳನ್ನೇ ಮಾತ್ರ ಹಾಕಿಕೊಳ್ಳಿ. ಅನವಶ್ಯಕವಾಗಿ ಸಿಕ್ಕಾಪಟ್ಟೆ ಕೆಲಸಗಳನ್ನು ಮೈಮೇಲೆ ಎಳೆದುಕೊಂಡು ಒಂದೂ ಪೂರ್ತಿಯಾಗದ ಹಾಗೆ ಇರುವಂತಾಗಬೇಡಿ. ಬೇಗ ಮುಗಿದರೆ ಬೇಕು ಮತ್ತು ಹೆಚ್ಚಿನ ತಲೆಬಿಸಿ ಇರಬಾರದು ಅಂತಹ ಕೆಲಸಗಳನ್ನು ಯೋಚಿಸಿ. [ಕರ್ಕ ರಾಶಿಗೆ ದುರ್ಮುಖನಾಮ ಸಂವತ್ಸರದ ಫಲಾಫಲ]

Gurubala for Cancer zodiac sign - Be careful about financial transactions

ಸರಕಾರದ ಸೇವೆಯಲ್ಲಿರುವವರಿಗೆ ಹೆಚ್ಚಿನ ಒತ್ತಡ ಬರುವುದರಿಂದ ಸ್ವಲ್ಪ ಜಾಗರೂಕತೆಯಿಂದ ಕೆಲಸ ನಿರ್ವಹಿಸಿಕೊಂಡು ಹೋಗಬೇಕು. ಹೊಂದಾಣಿಕೆಯಿಂದಲೇ ಮಾತ್ರ ನಿಮ್ಮನ್ನು ಎಲ್ಲರೂ ಗೌರವದಿಂದ ನೋಡುತ್ತಾರೆ ಎಂಬುದು ನೆನಪಿರಲಿ.

ಹೊಸ ಹೊಸ ಪ್ರಯತ್ನಗಳಿಗೆ ಕೈಹಾಕಿ ಲಾಭದ ರುಚಿ ನೋಡುವುದು ಈ ಸಮಯದಲ್ಲಿ ಬೇಡ. ಇದ್ದುದ್ದನ್ನೇ ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕು. [ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]

ಹಣಕಾಸಿನ ವ್ಯವಹಾರದಲ್ಲಿ ಈ ಬಾರಿ ಜಾಗ್ರತೆ ಇರಲಿ. ತೆಗೆದುಕೊಂಡ ಸಾಲವನ್ನು ಮೊದಲು ತೀರಿಸಿಯೇ ಮುಂದಿನ ಸಾಲಕ್ಕೆ ಕೈ ಚಾಚಬೇಕು. ಹಣ ಉಳಿಸಿಕೊಂಡು ಮುಂದಿನ ದಿನಗಳಿಗೆ ಬೇಕಾಗಬಹುದು ಎಂದು ನೆನಪಿಟ್ಟುಕೊಂಡು ಮುಂದುವರೆಯಿರಿ.

ದೇಹಾರೋಗ್ಯದಲ್ಲಿ ಕಿರಿಕಿರಿ ಬರಂಗಿಲ್ಲವಾದರೂ ಮಾನಸಿಕವಾಗಿ ಸದೃಢರಾಗಬೇಕು ಈ ಸಮಯದಲ್ಲಿ. ಒಟ್ಟಿನಲ್ಲಿ ಕರ್ಕ ರಾಶಿಯವರು ಗುರುವಿನ ಫಲಾಫಲವನ್ನು ಅಷ್ಟೇನೂ ಚೆನ್ನಾಗಿ ಇದೆ ಅಂದುಕೊಳ್ಳಬೇಕಾಗಿಲ್ಲ. ಅಷ್ಟೇ ಅಲ್ಲ ಕೆಟ್ಟದ್ದೂ ಆಗುತ್ತದೆ ಅಂತೇನೂ ಇಲ್ಲ. ಒಟ್ಟು ಫಲಾಫಲ ಕೊಡುವುದರಲ್ಲಿ ಗುರು ಕರ್ಕ ರಾಶಿಯವರಿಗೆ ಸ್ವಲ್ಪ ಕರುಣೆ ತೋರುತ್ತಾನೆ ಎನ್ನಬಹುದು. [ಕರ್ಕ ರಾಶಿ ವರ್ಷಭವಿಷ್ಯ 2016 ಮತ್ತು ಪರಿಹಾರೋಪಾಯ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+