Get Updates
Get notified of breaking news, exclusive insights, and must-see stories!

ಕನ್ಯಾ : ಒಂದಿಷ್ಟು ಕೂಡಿಡಿ, ಆಪತ್ಕಾಲದಲ್ಲಿ ನೆರವಿಗೆ ಬಂದೀತು!

ಕನ್ಯಾ ರಾಶಿಯಲ್ಲಿಯೇ ಗುರುವು ಈಗ ಕಾಲಿಟ್ಟಿದ್ದಾನೆ. ಈಗ ಈ ರಾಶಿಯವರ ಪರಿಸ್ಥಿತಿ ನರಳುವ ಸ್ಥಿತಿಯಲ್ಲಿ ನೆಲದಲ್ಲಿ ಹೊರಳಾಡುವಂತಾಗುವಂತೆ ಎನ್ನಬಹುದು. ಏಕೆಂದರೆ ಇಷ್ಟು ದಿನ ಶನಿಕಾಟ ಮತ್ತು ಶನಿಬಲ ಎರಡನ್ನೂ ಅನುಭವಿಸಿದ್ದಾರೆ ಈ ರಾಶಿಯವರು. ಈಗ ಗುರುಬಲವಿಲ್ಲದೇ ಕಂಗಾಲಾಗುವಂತಹ ಸಮಯ.

ಆದರೆ ಭಯ ಪಡದೇ ಶನಿಬಲ ಇರುವುದರಿಂದ, ಶನಿಬಲ ಇರುವವರೆಗೂ ಚೆನ್ನಾಗಿಯೇ ಇರುತ್ತದೆ ಜೀವನ. ಆದರೆ ಗುರುವು ಜನ್ಮಸ್ಥಾನದಲ್ಲಿ ಬಂದನೆಂದರೆ ಕೆಲವೊಂದು ರೋಗರುಜಿನಗಳನ್ನು ಹೊತ್ತು ತರುವ ಸಂಭವ ಇರುತ್ತದೆ. ಹೀಗಾಗಿ ಮಧುಮೇಹ, ಬಿಪಿ ಮುಂತಾದ ರೋಗಗಳು ಬರದಂತೆ ಮುಂಜಾಗ್ರತೆ ವಹಿಸಿಕೊಂಡು ದೇಹವನ್ನು ಗಟ್ಟಿಮುಟ್ಟಾಗಿಟ್ಟುಕೊಳ್ಳಲು ಆರಂಭಿಸಬೇಕು. [ನಿಯಮಿತ ಯೋಗ ಮಹಿಳೆಯ ಸೌಂದರ್ಯಕ್ಕೆ ರಾಮಬಾಣ]

ಕೇವಲ ಒಂದೆರಡು ವಾರ, ತಿಂಗಳು ಮಾಡದೇ ಪ್ರತಿನಿತ್ಯ ಮುಂದಿನ ವರ್ಷದವರೆಗೂ ಮಾಡಬೇಕು. ಆ ನಂತರ ತಾನಾಗಿಯೇ ರೂಢಿಯಾಗಿರುತ್ತದೆ. ನೀವು ಬೇಡವೆಂದರೂ ಮನಸ್ಸು ಕೇಳದೇ ದೇಹಾರೋಗ್ಯವನ್ನು ಸುಸ್ಥಿತಿಯಲ್ಲಿಡಲು ಸೂಚಿಸುತ್ತದೆ. [ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]

Gurubala for Virgo zodiac sign - You may find difficulties everywhere

ಸಾಮಾನ್ಯವಾಗಿ ಹಣಕಾಸಿನ ತೊಂದರೆ ಹೆಚ್ಚಿನ ಪ್ರಮಾಣದಲ್ಲಿ ಬರುವುದರಿಂದ ಈ ರಾಶಿಯವರು ಹಣದ ವಿಷಯದಲ್ಲಿ ಜಾಗ್ರತೆ ವಹಿಸಿಕೊಂಡಿರಬೇಕು. ಮಕ್ಕಳಿಗೆ ಕಿರಿಕಿರಿಯಾಗದಂತೆ ನೋಡಿಕೊಳ್ಳಬೇಕು. ಹೊರಗಡೆಗೆ ಹಣ ಕೊಟ್ಟಿದ್ದರೆ ಅದರ ಮರುಪಾವತಿಯಾಗದೇ ಮತ್ತೆ ವ್ಯವಹಾರ ಮಾಡುವುದು ಬೇಡ.

ಸಿಕ್ಕಾಪಟ್ಟೆ ಸಾಲದ ಶೂಲದಲ್ಲಿ ಸಿಲುಕಬಾರದು. ಬೇಕೆಂದರೆ ಮಾತ್ರ ಸಾಲ ಪಡೆದುಕೊಳ್ಳಬೇಕು. ಅನವಶ್ಯಕವಾಗಿ ಖರ್ಚು ಮಾಡುವದನ್ನು ನಿಲ್ಲಿಸಿ ಪೈಸೆ ಪೈಸೆ ಲೆಕ್ಕ ಇಟ್ಟುಕೊಳ್ಳಲಾರಂಭಿಸಬೇಕು. ಏಕೆಂದರೆ ಹಣವಿಲ್ಲದಾಗ ಮತ್ತೊಬ್ಬರ ಮುಂದೆ ಕೈಚಾಚುವ ಪರಿಸ್ಥಿತಿ ಬರಬಾರದು ಅಷ್ಟೇ. ಕೆಲವೊಂದು ಎಮರ್ಜೆನ್ಸಿ ಸಂದರ್ಭಗಳಿಗೆಂದು ಮನೆಯಲ್ಲಿ ಒಂದೈದು ಸಾವಿರನಾದರೂ ಉಳಿಸಿಟ್ಟಿರಬೇಕು. [ಕನ್ಯಾ ರಾಶಿಗೆ ದುರ್ಮುಖನಾಮ ಸಂವತ್ಸರದ ಫಲಾಫಲ]

ಮಾನಸಿಕ ಸ್ಥಿರತೆಗೆ ಪ್ರಯತ್ನ ಮಾಡುತ್ತಲೇ ಇರಬೇಕು. ಸಿಟ್ಟಿನಲ್ಲಿ ಭರದಲ್ಲಿಯೋ ಅಥವಾ ಅಜ್ಞಾನದಿಂದಲೋ ಯಾರಿಗೂ ಏನೂ ಅನ್ನಬೇಡಿ ಮತ್ತು ಅವರಿವರ ಉಸಾಬರಿ ಮಾತನಾಡಬೇಡಿ. ಮಾತನಾಡಿದ್ದಲ್ಲಿ ಅದರಿಂದಲೇ ಮಾನ ಮರ್ಯಾದೆ ಮಣ್ಣು ಪಾಲು ಆಗಬಹುದು ಎಚ್ಚರವಿರಲಿ, ನಾಲಿಗೆ ಹೊರಳಾಡಿಸುವ ಮೊದಲು.

Gurubala for Virgo zodiac sign - You may find difficulties everywhere

ಉದ್ಯೋಗಿಗಳಾಗಿದ್ದರೆ ಬಾಸ್ ಹೇಳಿದ ಕೆಲಸವನ್ನಷ್ಟೇ ಮಾಡಬೇಕು. ನನಗೂ ಗೊತ್ತು ಎಂದು ಹೆಚ್ಚಿನ ಬುದ್ಧಿವಂತಿಕೆ ತೋರಿಸಿದ್ರೆ ಬಾಸ್ ಬಾಗಿಲು ಕಡೆಗೆ ಕೈ ತೋರಿಸಬಹುದು. ಸಹೋದ್ಯೋಗಿಗಳ ಮಾತನ್ನು ಅತಿಯಾಗಿ ಕೇಳುವುದಕ್ಕಿಂತ ಬಾಸ್ ಮಾತನ್ನೇ ಹೆಚ್ಚು ಹೇಳಿ ಅವರು ಹೇಳಿದ ಕೆಲಸದ ಕಡೆ ಗಮನ ಕೊಡಬೇಕು ಈ ರಾಶಿಯವರು ಈ ವರ್ಷ ಪೂರ್ತಿ.

ದೊಡ್ಡ ದೊಡ್ಡ ಯೋಜನೆಗಳು ಹಾಕಿಕೊಳ್ಳದೇ ಹಾಕಿಕೊಂಡ ಕೆಲಸ ಕಾರ್ಯಗಳನ್ನು ಮಾಡಿ ಮುಗಿಸಿಕೊಳ್ಳಬೇಕು. ಮುಂದಿನ ವರ್ಷ ದೊಡ್ಡ ದೊಡ್ಡ ಯೋಜನೆಗಳನ್ನು ಹಾಕಿಕೊಳ್ಳಬಹುದು. ಆದರೆ ಈಗ ಮಾತ್ರ ಬೇಡ. ಯಾಕೆಂದರೆ ಶಾಸ್ತ್ರದಿಂದ ಶತ್ರುಗಳೊಂದಿಗೆ ಮಿತೃತ್ವ ಮಾಡಿಕೊಳ್ಳಲು ಬರುವುದಿಲ್ಲ. ಏಕೆಂದರೆ ಶಾಸ್ತ್ರ ನಮಗೆ ಮಾತ್ರ ಶತ್ರುಗಳಿಗಲ್ಲ ಎಂಬುದು ಗಮನದಲ್ಲಿರಲಿ. [ಕನ್ಯಾ ರಾಶಿಯ ವರ್ಷಫಲ ಮತ್ತು ಪರಿಹಾರೋಪಾಯಗಳು]

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+