ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮೀನು ಕೊಟ್ರ ಗಂಡು ಯಾರು ಕೊಡ್ತಾರ? ರೈತರ ಪ್ರಶ್ನೆ

By Prasad
|
Google Oneindia Kannada News

An agricultural land in North Karnataka
ಗದಗ, ಜು. 9 : "ಪಾಸ್ಕೋ ಕಂಪನಿಗಾಗಿ ನಮ್ಮ ಜಮೀನನ್ನು ಏನೇ ಮಾಡಿದರೂ ಕೊಡುವುದಿಲ್ಲ. ಬಲವಂತವಾಗಿ ಕಿತ್ತುಕೊಳ್ಳಲು ಬಂದರೆ ಪ್ರಾಣವಾದರೂ ಕೊಟ್ಟೇವು, ಆದರೆ ಜಮೀನು ಮಾತ್ರ ಬಿಟ್ಟುಕೊಡುವುದಿಲ್ಲ" ಎಂದು ಗದಗ ಜಿಲ್ಲೆಯ ಬಿಸ್ನಳ್ಳಿ ಗ್ರಾಮದ 17 ಜನರ ಕುಟುಂಬವೊಂದು ಉಡದಪಟ್ಟು ಹಿಡಿದಿದೆ.

ಈ ಜಮೀನಿನಿಂದನೇ ನಮ್ಮ ಜೀವನ. ಇದೇ ನಮ್ಮ ಜೀವಾಳ. ಜಮೀನು ಕೊಟ್ಟರೆ ನಮ್ಮ ತಾಯಿಯನ್ನೇ ಬಿಟ್ಟುಕೊಟ್ಟಂತೆ. ಸರಕಾರದವರು ಎಷ್ಟೇ ದುಡ್ಡು ಕೊಟ್ಟರೂ ನಮ್ಮ ಜೀವನಕ್ಕೆ ಆಧಾರವಾಗಿರುವ ಜಮೀನನ್ನು ಪರರ ವಶ ಮಾಡುವುದಿಲ್ಲ ಎಂದು ರೈತರು ಖಡಾಖಂಡಿತವಾಗಿ ಹೇಳುತ್ತಿದ್ದಾರೆ.

"ಮನ್ಯಾಗ ಹೆಣ್ಮಕ್ಕಳದಾವು. ಜಮೀನು ಕೊಟ್ರ ಅವ್ರಿಗೆ ಗಂಡು ಯಾರು ಕೊಡ್ತಾರ? ರೊಕ್ಕ ಕೊಟ್ರ ಹುಡುಗರು ಕುಡ್ದು ಹಾಳು ಮಾಡಿ ಬಿಡ್ತಾರ. ಕಂಪನ್ಯಾಗ ಕೆಲಸ ಕೊಡ್ತೇನಂತಾರ. ಸಣ್ಣಸಣ್ಣ ಮಕ್ಕಳನ್ನು ಕಟ್ಕೊಂಡು ಕೆಲಸ ಮಾಡಲಿಕ್ಕಾಗ್ತದೇನ್ರೀ" ಎಂದು ಆ ಕುಟುಂಬದ ಹೆಣ್ಣುಮಕ್ಕಳು ಪ್ರಶ್ನಿಸುತ್ತಿದ್ದಾರೆ. ವಾಜಮೈತ್ರಿ ಮಾತು ಮಾಜಮೈತಿ.

ರೈತರ ಹೋರಾಟಕ್ಕೆ ಎಲ್ಲೆಡೆಯಿಂದ ಬೆಂಬಲ ವ್ಯಕ್ತವಾಗುತ್ತಿದೆ. ಚಳವಳಿಗಾರ್ತಿ ಮೇಧಾ ಪಾಟ್ಕರ್ ಅವರು ರೈತರಿಂದ ಬಲವಂತವಾಗಿ ಜಮೀನು ಕಿತ್ತುಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ. ಅಲ್ಲದೆ, ತೋಂಟದಾರ್ಯ ಶ್ರೀಗಳ ಸಮ್ಮುಖದಲ್ಲಿ ಸಚಿವ ಸಿಸಿ ಪಾಟೀಲ್ ನಡೆಸಿದ ಮಾತುಕತೆ ಕೂಡ ವಿಫಲವಾಗಿದ್ದು, ರೈತರು ತಮ್ಮ ಪಟ್ಟನ್ನು ಬಿಗಿಹಿಡಿದಿದ್ದಾರೆ.

English summary
Farmers from Bisnalli village in Gadag are not at all willing to give away their land for Posco company. 17 members family asks, how will they marry unmarried girls if they are without agricultural land.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X