ಅಡಕೆ ತೋಟ ಉಳಿಸಿಕೊಳ್ಳಲು ಪರದಾಡುತ್ತಿರುವ ರೈತರು: ಟ್ಯಾಂಕರ್ ನೀರಿಗೆ ಸಾವಿರ ಸಾವಿರ ಬೆಲೆ!

ಅಡಕೆ ಬೆಳೆಯುವ ರೈತರ ಬಗ್ಗೆ ಏನೇನೋ ಊಹಾಪೋಹ ಇದೆ, ಅದ್ರಲ್ಲೂ ಅಡಕೆ ಬೆಳೆಯುವ ರೈತರಿಗೆ ಲಕ್ಷ ಲಕ್ಷ ಲಾಭ ಬರುತ್ತೆ ಅನ್ನೋ ನಂಬಿಕೆ ಕೂಡ ಇದೆ. ಆದರೆ ಅಡಕೆ ಬೆಳೆ ಒಲಿದರೆ ಕೈತುಂಬಾ ಕಾಸು ಬರುತ್ತೆ, ಅಕಸ್ಮಾತ್ ಕೈಕೊಟ್ಟರೆ ಅಡಕೆ ಬೆಳೆದ ರೈತರ ಪರಿಸ್ಥಿತಿ ಸೀದಾ ಸೀದಾ ಬೀದಿಗೆ ಬಿದ್ದಂತೆ ಆಗುತ್ತದೆ. ಮಳೆಯ ಕೊರತೆ ನಡುವೆ ಕರ್ನಾಟಕದ ರೈತರ ಪರಿಸ್ಥಿತಿ ಹೀಗೆಯೇ ಆಗಿದ್ದು, ಅಡಕೆ ತೋಟ ಉಳಿಸಿಕೊಳ್ಳಲು ಕರ್ನಾಟಕದ ರೈತರು ಏನು ಮಾಡ್ತಿದ್ದಾರೆ ಗೊತ್ತಾ?

2023 ಕರ್ನಾಟಕ ರಾಜ್ಯದ ಪಾಲಿಗೆ, ದುರದೃಷ್ಟಕರ ವರ್ಷ ಎನ್ನಬಹುದು. ಮುಂಗಾರು ಮಳೆಯೇ ಸರಿಯಾಗಿ ಬೀಳದೆ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪೈಕಿ ಮಳೆ ಆಶ್ರಯಿಸಿ, ಕೃಷಿ ಕೈಗೊಳ್ಳುವ ರೈತರಿಗೆ ಆತಂಕ ಎದುರಾಗಿದೆ. ಕರ್ನಾಟಕ ಸಾಕಷ್ಟು ಮಳೆ ಕೊರತೆ ಎದುರಿಸಿದೆ, ಕೆಲ ರಾಜ್ಯಗಳಲ್ಲಿ ವಿಪರೀತ ಮಳೆ ಬಂದಿದ್ದರೂ, ಹಲವು ರಾಜ್ಯಗಳ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಅದರಲ್ಲೂ ಈ ಪರಿಸ್ಥಿತಿಯಲ್ಲಿ ಕರ್ನಾಟಕದ ಅಡಕೆ ಬೆಳೆಗಾರರು ಪರದಾಡುತ್ತಿದ್ದು, ಹನಿ ಹನಿ ನೀರಿಗೂ ಈಗ ಸಂಕಷ್ಟ ಅನುಭವಿಸಿದ್ದಾರೆ. ಹೀಗಾಗಿ ಇದೀಗ ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ ರೈತರು.

Farmers Concerned About Protecting Their Areca Nut Farms Relying on Tanker Water for Irrigation

ಮಳೆ ಯಾವಾಗ ಬರುತ್ತೆ ದೇವರೆ?

ಕರ್ನಾಟಕದ ರೈತರು ಬರದಿಂದ ಬೆಳೆ ನಷ್ಟ ಅನುಭವಿಸಿದ್ದು, ಇದೀಗ ತೋಟಗಾರಿಕೆ ಬೆಳೆಗಳನ್ನೂ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ನೀರಿನ ಸಮಸ್ಯೆ ಬಿಗಡಾಯಿಸಿದ್ದು ತೋಟಗಳಿಗೂ ಟ್ಯಾಂಕರ್‌ ಮೊರೆ ಹೋಗಿದ್ದಾರೆ. ಕಳೆದ ಎರಡು ಮೂರು ವರ್ಷಗಳಿಂದ ನೀರಿನ ಸಮಸ್ಯೆ ಇರಲಿಲ್ಲ. ಉತ್ತಮ ಮಳೆಯಾದ ಕಾರಣ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕರೆ & ಕಟ್ಟೆಗಳು ತುಂಬಿ ತುಳುಕುತ್ತಿದ್ದವು. ಆದರೆ ಈಗ ಪರಿಸ್ಥಿತಿ ಬಿಗಡಾಯಿಸಿ ಹೋಗಿದ್ದು, ಮಳೆ ಇಲ್ಲದೆ ಭೀಕರ ಬರ ಎದುರಾಗಿದೆ. ಇದೇ ಕಾರಣಕ್ಕೆ ಬೆಳೆ ಉಳಿಸಿಕೊಳ್ಳಲು ಅಡಕೆ ಬೆಳೆಗಾರರು ಸಾವಿರ ಸಾವಿರ ಕೊಟ್ಟು ಟ್ಯಾಂಕರ್ ನೀರು ಹಾಕಿಸಿಕೊಳ್ಳುತ್ತಿದ್ದಾರೆ. ಹಾಗಾದ್ರೆ ಒಂದು ಟ್ಯಾಂಕರ್ ನೀರಿಗೆ ಅಡಕೆ ಬೆಳೆಗಾರರು ಎಷ್ಟು ಸಾವಿರ ಕೊಡಬೇಕು ಗೊತ್ತಾ? ಮುಂದೆ ಓದಿ.

1000 ರೂಪಾಯಿ ಟ್ಯಾಂಕರ್‌ಗೆ!

ಹೌದು, ಈ ಸುದ್ದಿ ಆಘಾತ ನೀಡಿದರೂ ಇದು ಸತ್ಯ. ಅಡಕೆ ಬೆಳೆಗಾರರು ಇದೀಗ ತಮ್ಮ ತಮ್ಮ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ನೀರು ಹಾಕಿಸಿಕೊಳ್ಳುತ್ತಿದ್ದಾರೆ. ಹೀಗೆ ನೀರು ಹಾಕಿಸಿಕೊಳ್ಳಲು, ಬರೋಬ್ಬರಿ 1000 ರೂಪಾಯಿ ಪ್ರತಿ ಟ್ಯಾಂಕರ್‌ಗೆ ಕೊಡಬೇಕಾಗಿ ಬಂದಿದೆ. ಒಂದು ಎಕರೆ ಅಡಕೆ ತೋಟ ಇದ್ದರೆ ಭರ್ಜರಿ 5 ಟ್ಯಾಂಕರ್ ನೀರು ಒಮ್ಮೆಗೆ ಬೇಕು. ಈ ರೀತಿ ತಿಂಗಳಿಗೆ ಸುಮಾರು 4 ಅಥವಾ 5 ಬಾರಿ ಟ್ಯಾಂಕರ್ ನೀರು ಹಾಕಿಸಬೇಕಿದೆ. ಈ ಮೂಲಕ ಏನಿಲ್ಲ ಎಂದರೂ ರೈತರಿಗೆ ಪ್ರತಿ ತಿಂಗಳು 25 ರಿಂದ 30 ಸಾವಿರ ರೂಪಾಯಿ ಖರ್ಚು ಪ್ರತಿ ಎಕರೆಗೆ ಆಗುತ್ತಿದೆ. ಅಡಕೆಯನ್ನ ಬೆಳೆದ ರೈತರು ಪರದಾಡುವ ಪರಿಸ್ಥಿತಿ ಬಂದಿದೆ.

ಕರ್ನಾಟಕದಲ್ಲೂ ಮಳೆ ಗ್ಯಾರಂಟಿ!

ಹವಾಮಾನ ತಜ್ಞರು ನೀಡಿರುವ ಮಾಹಿತಿಯ ಪ್ರಕಾರ ಶಿವಮೊಗ್ಗ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಹಾಸನ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಏಪ್ರಿಲ್ ಮೊದಲ ವಾರದಿಂದ ಮಳೆಯಾಗಲಿದೆ ಅಂತಾ ಇದೀಗ ಹವಾಮಾನ ತಜ್ಞರಿಂದ ಮುನ್ಸೂಚನೆ ಸಿಕ್ಕಿದೆ. ಪೂರಕವಾಗಿ ಈಗಾಗಲೇ, ಕಾವೇರಿ ನದಿಯ ತವರು ಜಿಲ್ಲೆ ಕೊಡಗು ಸೇರಿದಂತೆ ಚಿಕ್ಕಮಗಳೂರು, ಹುಬ್ಬಳ್ಳಿ & ಧಾರವಾಡ ಸೇರಿ ಗಡಿನಾಡು ಬೆಳಗಾವಿ ಜಿಲ್ಲೆಯಲ್ಲೂ ಮಳೆ ಬಿದ್ದಿದೆ. ಹಾಗೇ ವಿಜಯಪುರ ಜಿಲ್ಲೆಯಲ್ಲಿ ಭಾರಿ ಮಳೆ & ಗಾಳಿ ಬಂದು ಸಂತಸ ತಂದಿದೆ. ಈ ನಡುವೆ ದೇಶದ ಇನ್ನೂ ಹಲವು ಕಡೆ ಭಾರಿ ಮಳೆ ಶುರುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+