ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುವೈತ್‌ಗೆ ರಫ್ತಾಗುತ್ತಿದೆ ಭಾರತದ ಹಸುವಿನ ಸಗಣಿ

|
Google Oneindia Kannada News

ಜೈಪುರ, ಜೂನ್ 14: ಭಾರತದಲ್ಲಿ ಕೃಷಿ ವಲಯದಲ್ಲಿ ಪ್ರಾಣಿ ಉತ್ಪನ್ನಗಳ ಯಶಸ್ವಿ ಬಳಕೆ ಸಾವಿರಾರು ವರ್ಷಗಳಿಂದ ನಡೆಯುತ್ತಿದೆ. ಪ್ರಾಣಿಗಳ ಜೊತೆಯಲ್ಲೇ ಭಾರತ ಕೃಷಿ ಸಾಗುತ್ತದೆ. ಅದರಲ್ಲೂ ಹಸುವನ್ನು ಗೋಮಾತೆ ಎಂದೇ ಪೂಜಿಸಿ ಸಾಕುತ್ತಾರೆ. ಸಗಣಿ ಗೊಬ್ಬರ ಭಾರತದಲ್ಲಿ ಅನಾದಿ ಕಾಲದಿಂದ ಬಳಕೆಯಲ್ಲಿದೆ. ಈಗೀಗ ಸಾವಯವ ಕೃಷಿ ಹೆಸರಿನಲ್ಲಿ ಕೊಟ್ಟಿಗೆ ಗೊಬ್ಬರಕ್ಕೆ ಬೇಡಿಕೆ ಬಂದಿದೆ.

ಕೃಷಿ ವಲಯದಲ್ಲಿ ಪಶು ಉತ್ಪನ್ನಗಳ ರಫ್ತಿನ ವಿಷಯದಲ್ಲಿ ಭಾರತ ಈಗಾಗಲೇ ದೊಡ್ಡ ಕೇಂದ್ರವಾಗಿದೆ ಮತ್ತು ಈಗ ದೇಶವು ಈ ವಲಯದಲ್ಲಿ ಮತ್ತೊಂದು ದೊಡ್ಡ ಮೈಲಿಗಲ್ಲನ್ನು ಸಾಧಿಸಿದೆ. ಕುವೈತ್‌ಗೆ ಭಾರತದಿಂದ ಹಸುವಿನ ಸಗಣಿ ರಫ್ತಾಗಲಿದೆ. 192 ಮೆಟ್ರಿಕ್ ಟನ್‌ಗಳಷ್ಟು ಬೃಹತ್ ಪ್ರಮಾಣದಲ್ಲಿ ರಫ್ತು ಮಾಡಲಾಗುವುದು ಎಂದು ಭಾರತೀಯ ಸಾವಯವ ರೈತ ಉತ್ಪಾದಕರ ಸಂಘದ ರಾಷ್ಟ್ರೀಯ ಅಧ್ಯಕ್ಷ ಅತುಲ್ ಗುಪ್ತಾ ಮಾಹಿತಿ ನೀಡಿದ್ದಾರೆ.

1.2 ಮಿಲಿಯನ್ ಟನ್ ಗೋಧಿ ರಫ್ತಿಗೆ ಭಾರತ ಅನುಮತಿ ಸಾಧ್ಯತೆ 1.2 ಮಿಲಿಯನ್ ಟನ್ ಗೋಧಿ ರಫ್ತಿಗೆ ಭಾರತ ಅನುಮತಿ ಸಾಧ್ಯತೆ

ಗೋವುಗಳ ರಕ್ಷಣೆಗಾಗಿ ನಮ್ಮ ತಂಡ ನಡೆಸಿದ ಅವಿರತ ಪ್ರಯತ್ನಗಳು ಫಲ ನೀಡಿವೆ ಎಂದ ಅವರು, ಜೈಪುರ ಮೂಲದ ಸನ್‌ರೈಸ್ ಅಗ್ರಿಲ್ಯಾಂಡ್ ಮತ್ತು ಡೆವಲಪ್‌ಮೆಂಟ್ ರಿಸರ್ಚ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ರಫ್ತು ಮಾಡಲು ಕುವೈತ್‌ನಿಂದ ಆದೇಶ ಪಡೆದುಕೊಂಡಿದೆ.

ಅಕ್ಕಿ ರಫ್ತಿನ ಮೇಲೆ ನಿಷೇಧ: ಕೇಂದ್ರ ಸರ್ಕಾರ ಕೊಟ್ಟ ಸ್ಪಷ್ಟನೆ ಏನು?ಅಕ್ಕಿ ರಫ್ತಿನ ಮೇಲೆ ನಿಷೇಧ: ಕೇಂದ್ರ ಸರ್ಕಾರ ಕೊಟ್ಟ ಸ್ಪಷ್ಟನೆ ಏನು?

ಜೂನ್ 15ರಿಂದ ದೇಶೀಯ ಹಸುಗಳ ಸಗಣಿ ರಫ್ತು

ಜೂನ್ 15ರಿಂದ ದೇಶೀಯ ಹಸುಗಳ ಸಗಣಿ ರಫ್ತು

ಮುಸ್ಲಿಂ ಬಾಹುಳ್ಯದ ಕುವೈತ್‌ ದೇಶಿ ಹಸುಗಳ ಸಗಣಿಯನ್ನು ಭಾರತದಿಂದ ಆಮದು ಮಾಡಿಕೊಳ್ಳುತ್ತಿರುವುದು ಬಹುಶಃ ಇದೇ ಮೊದಲು ಎಂದು ಸನ್‌ರೈಸ್ ಅಗ್ರಿಲ್ಯಾಂಡ್ ಮತ್ತು ಡೆವಲಪ್‌ಮೆಂಟ್ ರಿಸರ್ಚ್ ಪ್ರೈವೇಟ್ ಲಿಮಿಟೆಡ್ ಕಂಪನಿ ನಿರ್ದೇಶಕ ಪ್ರಶಾಂತ್ ಚತುರ್ವೇದಿ ಹೇಳಿದ್ದಾರೆ.

ಜೈಪುರದ ಟೋಂಕ್ ರಸ್ತೆಯ ಶ್ರೀಪಿಂಜ್ರಾಪೋಲ್ ಗೋಶಾಲೆಯಲ್ಲಿರುವ ಸನ್‌ರೈಸ್ ಆರ್ಗಾನಿಕ್ ಪಾರ್ಕ್‌ನಲ್ಲಿ ಕಸ್ಟಮ್ಸ್ ಇಲಾಖೆಯ ಮೇಲ್ವಿಚಾರಣೆಯಲ್ಲಿ ಕಂಟೈನರ್‌ಗಳಲ್ಲಿ ಹಸುವಿನ ಸಗಣಿ ಪ್ಯಾಕ್ ಮಾಡುವ ಕೆಲಸ ನಡೆಯುತ್ತಿದೆ. ಜೂನ್ 15 ರಂದು ಕನಕಪುರ ರೈಲು ನಿಲ್ದಾಣದಿಂದ ರವಾನೆಯಾಗಲಿದೆ ಎಂದು ಹೇಳಿದ್ದಾರೆ. ಮೊದಲ ರವಾನೆಯಲ್ಲಿ, 192 ಮೆಟ್ರಿಕ್ ಟನ್ ಹಸುವಿನ ಸಗಣಿ ಕುವೈತ್‌ಗೆ ರಫ್ತು ಮಾಡಲಾಗುವುದು. ಗುಜರಾತ್‌ನ ಮುಂದ್ರಾ ಬಂದರಿನಿಂದ ಕುವೈತ್‌ಗೆ ಸಾಗಿಸಲಾಗುವುದು.

ವಿದೇಶಗಳಿಂದ ಬೇಡಿಕೆ ಹೆಚ್ಚಾಗುತ್ತಿದೆ

ವಿದೇಶಗಳಿಂದ ಬೇಡಿಕೆ ಹೆಚ್ಚಾಗುತ್ತಿದೆ

2020-21ರಲ್ಲಿ ಭಾರತದಿಂದ ಪ್ರಾಣಿ ಉತ್ಪನ್ನಗಳ ರಫ್ತು 27,155.56 ಕೋಟಿ ರುಪಾಯಿಗಳಾಗಿದೆ ಎಂದು ಸಾವಯವ ರೈತ ಉತ್ಪಾದಕರ ಸಂಘದ ರಾಷ್ಟ್ರೀಯ ಅಧ್ಯಕ್ಷ ಅತುಲ್ ಗುಪ್ತಾ ಹೇಳಿದರು. ಇದಲ್ಲದೇ ಸಾವಯವ ಗೊಬ್ಬರದ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ.

ದೇಶೀಯ ಹಸುವಿನ ಸಗಣಿ ಸಂಶೋಧನೆಯ ನಂತರ ಅದರ ಬಳಕೆಯ ಲಾಭಗಳನ್ನು ಅನೇಕ ದೇಶಗಳು ಕಂಡುಕೊಂಡಿವೆ, ಇದು ಬೆಳೆಗಳ ಉತ್ಪಾದನೆಯನ್ನು ಹೆಚ್ಚಿಸುವುದಲ್ಲದೆ, ಅದರಿಂದ ಉತ್ಪತ್ತಿಯಾಗುವ ಉತ್ಪನ್ನಗಳ ಬಳಕೆಯು ಗಂಭೀರ ಕಾಯಿಲೆಗಳಿಂದ ಮನುಷ್ಯರನ್ನು ರಕ್ಷಿಸುತ್ತದೆ. ಇದೇ ಕಾರಣಕ್ಕೆ ಹಲವು ದೇಶಗಳು ಭಾರತದಿಂದ ಸಾವಯವ ಗೊಬ್ಬರದ ಜೊತೆಗೆ ದೇಶಿ ಗೋಮಯವನ್ನು ಆಮದು ಮಾಡಿಕೊಳ್ಳಲು ಆರಂಭಿಸಿವೆ.

ಖರ್ಜೂರ ಬೆಳೆಗೆ ಸಾವಯವ ಗೊಬ್ಬರ ಬಳಕೆ

ಖರ್ಜೂರ ಬೆಳೆಗೆ ಸಾವಯವ ಗೊಬ್ಬರ ಬಳಕೆ

ಇಸ್ಲಾಮಿಕ್ ದೇಶ ಕುವೈತ್‌ನ ವೈಜ್ಞಾನಿಕ ಸಂಶೋಧನೆಯಲ್ಲಿ, ಹಸುವಿನ ಸಗಣಿ ಬೆಳೆಗಳಿಗೆ ತುಂಬಾ ಉಪಯುಕ್ತವಾಗಿದೆ ಎಂದು ಕಂಡುಬಂದಿದೆ.

ಖರ್ಜೂರದ ಬೆಳೆಗೆ ಪೌಡರ್ ರೂಪದಲ್ಲಿ ದೇಶಿ ಗೋಮಯವನ್ನು ಬಳಸುವುದರಿಂದ ಹಣ್ಣಿನ ಗಾತ್ರದಲ್ಲಿ ಹೆಚ್ಚಳ ಹಾಗೂ ಉತ್ಪಾದನೆಯಲ್ಲಿ ನಿರೀಕ್ಷಿತ ಹೆಚ್ಚಳ ಕಂಡುಬಂದಿದೆ. ಈ ಕಾರಣಕ್ಕಾಗಿಯೇ ಕುವೈತ್ ಮೂಲದ ಕಂಪನಿ ಲಾಮೋರ್, ಜೈಪುರ ಸಂಸ್ಥೆಯಿಂದ 192 ಮೆಟ್ರಿಕ್ ಟನ್ ದೇಶಿ ಹಸುವಿನ ಸಗಣಿ ಆಮದು ಮಾಡಿಕೊಳ್ಳಲು ಆರ್ಡರ್ ಮಾಡಿದೆ.

ಬೇಡಿಕೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ

ಬೇಡಿಕೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ

ಕುವೈತ್‌ನಿಂದ ಭಾರತಕ್ಕೆ ಹಸುವಿನ ಸಗಣಿ ಆರ್ಡರ್ ಬಂದಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ. ಹಿಂದೆ, ಭಾರತವು ಪ್ರಾಣಿ ಉತ್ಪನ್ನಗಳಲ್ಲಿ ಮಾಂಸ ಮತ್ತು ಪ್ರಾಣಿಗಳ ಚರ್ಮವನ್ನು ರಫ್ತು ಮಾಡುತ್ತಿದೆ ಮತ್ತು ಹಾಲು ಹಾಗೂ ಹಾಲಿನಿಂದ ತಯಾರಿಸಿದ ಇತರ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ.

ಈಗ ವಿದೇಶಿ ವೈಜ್ಞಾನಿಕ ಸಂಶೋಧನೆಯಲ್ಲಿ ಹಸುವಿನ ಸಗಣಿ ಗುಣಮಟ್ಟವನ್ನು ದೃಢೀಕರಿಸಿದ ನಂತರ, ಭಾರತವು ಹೆಚ್ಚಿನ ಆದೇಶಗಳನ್ನು ಪಡೆಯಬಹುದು. ಈ ರಫ್ತು ಸರ್ಕಾರದಿಂದ ಆಗುತ್ತಿಲ್ಲ ಬದಲಾಗಿ ಸಹಕಾರಿ ಮಟ್ಟದಲ್ಲಿ ಆಗುತ್ತಿರುವುದು ದೊಡ್ಡ ವಿಷಯ. ಭಾರತದ ಜಾನುವಾರುಗಳು ಪ್ರತಿದಿನ ಸುಮಾರು 3 ಮಿಲಿಯನ್ ಟನ್ ಹಸುವಿನ ಸಗಣಿ ನೀಡುತ್ತವೆ. ಚೀನಾ 15 ಮಿಲಿಯನ್ ಮನೆಗಳಿಗೆ ಬೆಳಕು ನೀಡಲು ಹಸುವಿನ ಸಗಣಿ ಬಳಸುತ್ತದೆ.

Recommended Video

Rahul Gandhi ED ,DK Sureshರನ್ನು ತಳ್ಳಾಡಿದ ಪೊಲೀಸರು | Oneindia Kannada

English summary
Cow dung from the India will be exported to Kuwait, that too a whopping 192 metric tonnes. the demand for organic manure is increasing continuously.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X