ಉಡುಪಿಯಲ್ಲಿ ಸೀಗಡಿ ಜೊತೆ ನೀರು ದೋಸೆ ಚಪ್ಪರಿಸಿದ ರಾಹುಲ್ ಗಾಂಧಿ
Recommended Video

ಉಡುಪಿ, ಮಾರ್ಚ್ 20: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕರಾವಳಿ ಪ್ರವಾಸದಲ್ಲಿದ್ದಾರೆ. ಇಂದು ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಚುನಾವಣಾ ಪ್ರಚಾರ ನಡೆಸಲಿರುವ ಅವರು ಮೊದಲಿಗೆ ಉಡುಪಿಯಲ್ಲಿ ಬಂದಿಳಿದಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಉಡುಪಿಯ ತೆಂಕ ಎರ್ಮಾಳ್ ಗೆ ಹೆಲಿಕಾಪ್ಟರ್ ನಲ್ಲಿ ಬಂದ ರಾಹುಲ್ ಗಾಂಧಿ, ಹೆಲಿಪ್ಯಾಡ್ ಪಕ್ಕದಲ್ಲೇ ಇದ್ದ ಶಾಲೆಯೊಂದಕ್ಕೆ ಭೇಟಿ ನೀಡಿದರು. ನಂತರ ಮೀನುಗಾರರೊಬ್ಬರ ಮನೆಗೆ ತೆರಳಿದರು.
ಉತ್ತರ ಕರ್ನಾಟಕ ಪ್ರವಾಸದ ವೇಳೆ ಮಿರ್ಚಿ ಬಜ್ಜಿ ತಿಂದಿದ್ದರು ರಾಹುಲ್ ಗಾಂಧಿ. ಅವರು ಈ ಬಾರಿ ಮೀನುಗಾರರೊಬ್ಬರ ಮನೆಯಲ್ಲಿ ಹಾಳೆತಟ್ಟಿಯಲ್ಲಿ ಕರಾವಳಿಯ ಖಾದ್ಯ ನೀರು ದೋಸೆ ಮತ್ತು ಸೀಗಡಿ ಸಾಂಬಾರ್ ಹೊಟ್ಟೆಗಿಳಿಸಿದರು. ರಾಹುಲ್ ಗಾಂಧಿಗೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಸಚಿವ ಪ್ರಮೋದ್ ಮಧ್ವರಾಜ್ ಸಾಥ್ ನೀಡಿದರು.
In Pics: ರಾಹುಲ್ ಗಾಂಧಿ ಸ್ವಾಗತಕ್ಕೆ ಸಿಂಗಾರಗೊಂಡ ಮಂಗಳೂರು

ನೀರು ದೋಸೆ ಸೇವಿಸದ ಸಿದ್ದರಾಮಯ್ಯ
ರಾಹುಲ್ ಗಾಂಧಿ ಜತೆ ಕುಳಿತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನೀರು ದೋಸೆಯಾಗಲಿ, ಸೀಗಡಿ ಸಾಂಬರ್ ಗಾಗಲಿ ಕೈ ಹಾಕಲಿಲ್ಲ. ರಾಹುಲ್ ಗಾಂಧಿ ಉಪಹಾರ ಸೇವಿಸುತ್ತಾ ಮೀನುಗಾರರೊಂದಿಗೆ ಸಂವಾದ ನಡೆಸುವಾಗ, ಸುಮ್ಮನೆ ಕುಳಿತಿದ್ದ ಸಿಎಂ ಕೂಡ ಮಾತುಕತೆ ನಡೆಸಿದರು.

ಅತ್ತ ರಾಹುಲ್ ಗಾಂಧಿ ಕೈ ಬಾಯಿಗೆ ಕೆಲಸ ಕೊಟ್ಟಿದ್ದರೆ ಇತ್ತ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಬೀಚ್ ಸೌಂದರ್ಯ ಸವಿಯುವಲ್ಲಿ ನಿರತರಾಗಿದ್ದರು. ಬೀಚ್ ನಲ್ಲಿ ಸುತ್ತಾಟ ನಡೆಸಿದ ಅವರು, ಬಾವಿಕಟ್ಟೆ ಮೇಲೆ ಕೂತು ಸಮುದ್ರದ ಸೌಂದರ್ಯ ಸವಿಯುತ್ತಿದ್ದರು.












Click it and Unblock the Notifications