ಸಿಡಿದೆದ್ದ ಕಾಂಗ್ರೆಸ್ ಕಾರ್ಯಕರ್ತರು, ಮೊಯ್ಲಿ ವಿರುದ್ದ ಭಾರೀ ಆಕ್ರೋಶ

Posted By: ಉಡುಪಿ ಪ್ರತಿನಿಧಿ
Subscribe to Oneindia Kannada

ಉಡುಪಿ, ಏ 16: ಟಿಕೆಟ್ ಹಂಚಿಕೆ ವಿಚಾರವಾಗಿ ಸೋಮವಾರ (ಏ 16) ಉಡುಪಿ ಜಿಲ್ಲೆಯ ಕಾರ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಭಾರೀ ಪ್ರತಿಭಟನೆ ವ್ಯಕ್ತವಾಗಿದೆ. ಟಿಕೆಟ್ ಆಕಾಂಕ್ಷಿಯಾಗಿದ್ದ ಮುನಿಯಾಲು ಉದಯ ಕುಮಾರ್ ಶೆಟ್ಟಿ ಬೆಂಬಲಿಗರು ಪ್ರತಿಭಟನೆ ನಡೆಸಿ ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿಯವರ ಪ್ರತಿಕೃತಿ ದಹಿಸಿದ್ದಾರೆ.

ವೀರಪ್ಪ ಮೊಯ್ಲಿ 'ಹಠಾವೋ ಕಾಂಗ್ರೆಸ್ ಬಚಾವೋ' ಸ್ಲೋಗನ್ ಮೂಲಕ ತವರಿನಲ್ಲೇ ಮೊಯ್ಲಿಯವರಿಗೆ ಕಾಂಗ್ರೆಸ್ ಕಾರ್ಯಕರ್ತರು ಶಾಕ್ ಕೊಟ್ಟಿದ್ದಾರೆ. ಭಾನುವಾರ ಬಿಡುಗಡೆಯಾದ ಕಾಂಗ್ರೆಸ್ ಪಟ್ಟಿಯಲ್ಲಿ ಮಾಜಿ ಶಾಸಕ ಗೋಪಾಲ್ ಭಂಡಾರಿಯವರಿಗೆ ಕಾರ್ಕಳದಿಂದ ಟಿಕೆಟ್ ನೀಡಲಾಗಿತ್ತು.

ಪುತ್ರ ವ್ಯಾಮೋಹ ತೊರೆದ ಮೊಯ್ಲಿಯಿಂದ ಕಾರ್ಕಳದಲ್ಲಿ ಹೊಸ ಲಾಬಿ?

ಇದರಿಂದ ಇಲ್ಲಿನ ಇನ್ನೋರ್ವ ಪ್ರಬಲ ಆಕಾಂಕ್ಷಿಯಾಗಿದ್ದ ಉದಯಕುಮಾರ್ ಶೆಟ್ಟಿ ಬೆಂಬಲಿಗರಿಗೆ ಭಾರೀ ನಿರಾಸೆ ಆಗಿದೆ. ಸೋಮವಾರ, ಪ್ರತಿಭಟನೆ ನಡೆಸಿದ ಶೆಟ್ಟಿ ಬೆಂಬಲಿಗರ ಸಂಪೂರ್ಣ ಕೋಪ ಕಾಂಗ್ರೆಸ್ ಮುಖಂಡ ಮೊಯ್ಲಿ ವಿರುದ್ಧ ತಿರುಗಿಬಿದ್ದಿತ್ತು.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಮೊಯ್ಲಿಯವರಿಂದಾಗಿಯೇ ಉದಯ್ ಕುಮಾರ್ ಶೆಟ್ಟರಿಗೆ ಟಿಕೆಟ್ ತಪ್ಪಿದೆ ಎಂಬುದು ಕಾರ್ಯಕರ್ತರ ಆರೋಪವಾಗಿದೆ. ಹೀಗಾಗಿ ಇವತ್ತಿನ ಪ್ರತಿಭಟನೆಯ ಉದ್ದಕ್ಕೂ ಮೊಯಿಲಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಯಿತು. ಉದಯಕುಮಾರ್ ಶೆಟ್ಟಿಯವರ ಬೆಂಬಲಿಗರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು.

12 ಹಾಲಿ ಶಾಸಕರಿಗೆ ಟಿಕೆಟ್ ನೀಡದೆ ರಣತಂತ್ರ ಹೂಡಿದ ಕಾಂಗ್ರೆಸ್

ಮಾಜಿ ಶಾಸಕ ಗೋಪಾಲ್ ಭಂಡಾರಿಯವರ ಕಚೇರಿ ಎದುರು ವೀರಪ್ಪ ಮೊಯ್ಲಿಲಿಯವರ ಪ್ರತಿಕೃತಿಯನ್ನು ಕಾಂಗ್ರೆಸ್ ಕಾರ್ಯಕರ್ತರು ದಹಿಸಿದರು. ಮೊಯ್ಲಿಲಿಯವರ ಅಣಕು ಶವಯಾತ್ರೆ ನಡೆಸಿ ಅಸಮಾಧಾನ ಹೊರ ಹಾಕಿದ್ದಾರೆ. ಮುಂದೆ ಓದಿ..

ಗೋಪಾಲ್ ಭಂಡಾರಿಯವರ ಜೊತೆಗೂ ಮಾತನಾಡಿದ್ದೇನೆ

ಗೋಪಾಲ್ ಭಂಡಾರಿಯವರ ಜೊತೆಗೂ ಮಾತನಾಡಿದ್ದೇನೆ

ಈ ವೇಳೆ ಮಾತನಾಡಿದ ಟಿಕೆಟ್ ಆಕಾಂಕ್ಷಿ ಉದಯಕುಮಾರ್ ಶೆಟ್ಟಿ , ಇನ್ನೂ ಕಾಲ ಮಿಂಚಿಲ್ಲ. ಗೋಪಾಲ್ ಭಂಡಾರಿಯವರ ಜೊತೆಗೂ ಮಾತನಾಡಿದ್ದೇನೆ. ಕಾರ್ಯಕರ್ತರ ಬೆಂಬಲ ನನಗಿದೆ. ಪಕ್ಷವನ್ನು ಕಟ್ಟಿ ಬೆಳೆಸಿದ ನನಗೆ ಟಿಕೆಟ್ ನೀಡದೇ ಇದ್ದುದು ಬೆಂಬಲಿಗರಿಗೆ ಬೇಸರವಾಗಿದೆ ಎಂದು ಹೇಳಿದರು.

ಪ್ರಾರಂಭದಲ್ಲೇ ವೀರಪ್ಪ ಮೊಯ್ಲಿ ಆಕ್ಷೇಪ

ಪ್ರಾರಂಭದಲ್ಲೇ ವೀರಪ್ಪ ಮೊಯ್ಲಿ ಆಕ್ಷೇಪ

ಗುತ್ತಿಗೆದಾರರೂ ಆಗಿರುವ ಉದಯಕುಮಾರ್ ಶೆಟ್ಟಿ ಬಗ್ಗೆ ಪ್ರಾರಂಭದಲ್ಲೇ ವೀರಪ್ಪ ಮೊಯ್ಲಿ ಆಕ್ಷೇಪ ಎತ್ತಿದ್ದರು. ತಮ್ಮ ಪುತ್ರ ಹರ್ಷ ಮೊಯ್ಲಿ ಟಿಕೆಟ್ ಪಡೆಯಲು ಅಡ್ಡಗಾಲು ಹಾಕಿದ್ದ ಉದಯಕುಮಾರ್ ಶೆಟ್ಟಿ ವಿರುದ್ಧ ಮೊಯಿಲಿ ತೀವ್ರ ಅಸಮಾಧಾನಗೊಂಡಿದ್ದರು. ಮಾತ್ರವಲ್ಲ, ಶತಾಯಗತಾಯ ಉದಯಕುಮಾರ್ ಶೆಟ್ಟಿಗೆ ಟಿಕೆಟ್ ತಪ್ಪಿಸಲು ಮೊಯ್ಲಿಲಿಯವರು ದೆಹಲಿ ಮಟ್ಟದಲ್ಲಿ ತೀವ್ರ ಲಾಬಿ ನಡೆಸಿದ್ದರು. ಈ ಕುರಿತು 'ಒನ್ ಇಂಡಿಯಾ'ದಲ್ಲಿ ವಿಸ್ತೃತ ವದರಿ ಪ್ರಕಟವಾಗಿತ್ತು.

ವೀರಪ್ಪ ಮೊಯಿಲಿಯವರ ಶಿಷ್ಯ ಮತ್ತು ಎರಡು ಬಾರಿ ಕಾರ್ಕಳದ ಶಾಸಕ

ವೀರಪ್ಪ ಮೊಯಿಲಿಯವರ ಶಿಷ್ಯ ಮತ್ತು ಎರಡು ಬಾರಿ ಕಾರ್ಕಳದ ಶಾಸಕ

ಮಾಜಿ ಶಾಸಕ ಗೋಪಾಲ್ ಭಂಡಾರಿ ,ವೀರಪ್ಪ ಮೊಯಿಲಿಯವರ ಶಿಷ್ಯ ಮತ್ತು ಎರಡು ಬಾರಿ ಕಾರ್ಕಳದ ಶಾಸಕರಾಗಿದ್ದವರು. ಈ ಕಳೆದ ಚುನಾವಣೆಯಲ್ಲಿ ಬಿಜೆಪಿಯ ಸುನಿಲ್ ಕುಮಾರ್ ವಿರುದ್ಧ ಭಂಡಾರಿ ಪರಾಭವಗೊಂಡಿದ್ದರು.
ಹೀಗಾಗಿ ಈ ಸಲ ಉದಯಕುಮಾರ್ ಶೆಟ್ಟಿ ತಮಗೇ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದುದು ಸಹಜ. ಆದರೆ, ಮೊಯ್ಲಿ ಹೈಕಮಾಂಡ್ ಅಂಗಳದಲ್ಲಿ ಗೋಪಾಲ್ ಭಂಡಾರಿಯವರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಉದಯಕುಮಾರ್ ಶೆಟ್ಟಿ ಬಣ ಈಗ ತೀವ್ರ ಅಸಮಾಧಾನಗೊಂಡಿದೆ.

ಕಾಂಗ್ರೆಸ್ ಹಿರಿಯ ಮುಖಂಡ ವೀರಪ್ಪ ಮೊಯ್ಲಿ

ಕಾಂಗ್ರೆಸ್ ಹಿರಿಯ ಮುಖಂಡ ವೀರಪ್ಪ ಮೊಯ್ಲಿ

ವೀರಪ್ಪ ಮೊಯ್ಲಿಯವರು ಮಾಜಿ ಶಾಸಕ ಗೋಪಾಲ್ ಭಂಡಾರಿಯವರಿಗೆ ಟಕೆಟ್ ಕೊಡಿಸಲು ಇನ್ನಿಲ್ಲದ ಲಾಬಿ ಮಾಡಿದ್ದರು. ತಮ್ಮ ಪುತ್ರನಿಗೆ ಸಿಗದಿದ್ದರೂ ಚಿಂತೆ ಇಲ್ಲ. ಆದ್ರೆ ಇನ್ನೋರ್ವ ಪ್ರಬಲ ಆಕಾಂಕ್ಷಿ ಗುತ್ತಿಗೆದಾರ ಮುನಿಯಾಲು ಉದಯಕುಮಾರ್ ಶೆಟ್ಟರಿಗೆ ಟಿಕೆಟ್ ಸಿಗದಂತೆ ಮಾಡಲು ಮೊಯ್ಲಿಯವರು ಇನ್ನಿಲ್ಲದ ಹರಸಾಹಸ ಪಡುತ್ತಿದ್ದ ಸುದ್ದಿ ಗೌಪ್ಯವಾಗಿ ಏನೂ ಉಳಿದಿರಲಿಲ್ಲ.

ಮೊಯ್ಲಿ ಗುಂಪು ಮತ್ತು ಉದಯಕುಮಾರ್ ಶೆಟ್ಟಿ ಬಣ ಹೀಗೆ ಎರಡು ಗುಂಪು

ಮೊಯ್ಲಿ ಗುಂಪು ಮತ್ತು ಉದಯಕುಮಾರ್ ಶೆಟ್ಟಿ ಬಣ ಹೀಗೆ ಎರಡು ಗುಂಪು

ಹೀಗಾಗಿ ಕಾರ್ಕಳದಲ್ಲೀಗ ಮೊಯ್ಲಿ ಗುಂಪು ಮತ್ತು ಉದಯಕುಮಾರ್ ಶೆಟ್ಟಿ ಬಣ ಹೀಗೆ ಎರಡು ಗುಂಪುಗಳಾಗಿವೆ. ಮೊದಲೇ ತಾಲೂಕಿನಲ್ಲಿ ಸೊರಗಿದ್ದ ಕಾಂಗ್ರೆಸ್ ಗೆ ಇದು ದುಬಾರಿಯಾಗಿ ಪರಿಣಮಿಸುತ್ತಾ? ಕಾಂಗ್ರೆಸ್ ನ ಗುಂಪುಗಾರಿಕೆಯ ಲಾಭವನ್ನು ಬಿಜೆಪಿ ಪಡೆಯುತ್ತಾ? ಸ್ವಕ್ಷೇತ್ರದಲ್ಲೇ ಮೊಯ್ಲಿಲಿಗೆ ಮುಖಭಂಗವಾಗುತ್ತಾ ಎಂಬುದು ಮೇ ಹದಿನೈದರಂದು ಗೊತ್ತಾಗಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka assembly elections 2018: Congress workers huge protest in Karkala (Udupi district) over ticket issue. Uday Kumar Shetty and Gopal Bhandary was the main ticket contender. Congress has announced the ticket to Gopal Bhandary. Uday Kumar Shetty claims, because of Veerappa Moily lobby, ticket has not given to me.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ