ಚುನಾವಣೆಯಲ್ಲಿ ದೊಡ್ಡ ರೋಗವನ್ನು ಹೊಡೆದೋಡಿಸೋಣ: ಪ್ರಕಾಶ್ ರೈ

ಶಿರಸಿ, ಜನವರಿ 13 : ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ತುಂಬಾ ಅಪಾಯಕಾರಿ ಆದಂಥ ದೊಡ್ಡ ರೋಗವನ್ನು ಹೊಡೆದೋಡಿಸೋಣ. ಆ ನಂತರ ಉಳಿಯುವ ಕೆಮ್ಮು, ನೆಗಡಿ ಅಂಥದ್ದನ್ನು ನಿವಾರಿಸಿಕೊಳ್ಳುವ ಬಗ್ಗೆ ಯೋಚನೆ ಮಾಡೋಣ ಎಂದು ಬಹು ಭಾಷಾ ನಟ, ನಿರ್ಮಾಪಕ ಹಾಗೂ ಅಂಕಣಕಾರರಾದ ಪ್ರಕಾಶ್ ರೈ ಇಲ್ಲಿ ಹೇಳಿದ್ದಾರೆ.

ಆ ನಂತರ ಮುಂದುವರಿದು, ಯಾವ ರಾಜಕೀಯ ನಾಯಕರೂ ಸರಿಯಿಲ್ಲ. ಇನ್ನು ನಾನು ಯಾವುದೇ ರಾಜಕೀಯ ಪಕ್ಷದ ವಕ್ತಾರನಲ್ಲ. ನಾನೊಬ್ಬ ಸಾಮಾನ್ಯ ಪ್ರಜೆ. ನನಗೆ ಸಿಕ್ಕ ಪ್ರೀತಿ, ಆದರ, ಗೌರವ- ಮನ್ನಣೆಗಳು ಈ ಸಮಾಜದಿಂದ ಹಾಗೂ ಜನರಿಂದ. ಅದನ್ನು ಸಮುದಾಯಕ್ಕೆ, ಸಮಾಜಕ್ಕೆ ವಾಪಸ್ ಕೊಡುವ ಉದ್ದೇಶದಿಂದ ಬಂದಿದ್ದೇನೆ ಎಂದಿದ್ದಾರೆ.

 Prakash Rai

ವಿವೇಚನೆ, ವಿಚಾರದ ಕುರಿತಾಗಿ ಇರುವ ಕಾರ್ಯಕ್ರಮಗಳು ಎಲ್ಲೇ ಇದ್ದರೂ ನನ್ನನ್ನು ಆ ಕಾರ್ಯಕ್ರಮಗಳಿಗೆ ಆಹ್ವಾನಿಸಿದರೆ ಬಂದೇ ಬರುತ್ತೇನೆ ಎಂದು ಪ್ರಕಾಶ್ ರೈ ಹೇಳಿದ್ದಾರೆ. ಬಿಜೆಪಿಯವರು ಕೋಮುವಾದ ರಾಜಕಾರಣ ಮಾಡುತ್ತಿದ್ದಾರೆ. ಅದರ ನಾಯಕರು-ಮುಖಂಡರು ಜನರನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಕಾಶ್ ರೈ ಆರೋಪಿಸಿದ್ದನ್ನು ನಾವಿಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+