• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೆಹಲಿಗೆ ಪ್ರಾಣವಾಯು ಒದಗಿಸಿದ ರೈಲ್ವೆಯ ಆಕ್ಸಿಜನ್ ಎಕ್ಸ್ ಪ್ರೆಸ್

|

ದೇಶದ ವಿವಿಧ ರಾಜ್ಯಗಳಿಗೆ ದ್ರವ ವೈದ್ಯಕೀಯ ಆಮ್ಲಜನಕ [ಎಲ್.ಎಂ.ಒ] ಪೂರೈಸಿ ಜನರಿಗೆ ಪರಿಹಾರ ನೀಡುವ ತನ್ನ ಯಾನವನ್ನು ಭಾರತೀಯ ರೈಲ್ವೆ ಮುಂದುವರೆಸಿದ್ದು, 74 ಟ್ಯಾಂಕರ್‌ಗಳ ಮೂಲಕ ದೇಶದ ವಿವಿಧ ಭಾಗಗಳಿಗೆ ಇಲ್ಲಿಯತನಕ 1094 ಮೆಟ್ರಿಕ್ ಟನ್ ಎಲ್.ಎಂ.ಒ ವಿತರಿಸಿದೆ.

ಈವರೆಗೆ 19 ಆಕ್ಸಿಜನ್ ಎಕ್ಸ್‌ಪ್ರೆಸ್‌ಗಳು ತನ್ನ ಯಾನವನ್ನು ಪೂರ್ಣಗೊಳಿಸಿದ್ದು, ಇನ್ನೂ ಎರಡು ಆಕ್ಸಿಜನ್ ಎಕ್ಸ್‌ಪ್ರೆಸ್‌ಗಳು 4 ಟ್ಯಾಂಕರ್‌ಗಳ ಮೂಲಕ 61.46 ಮೆಟ್ರಿಕ್ ಟನ್ [ಅಂದಾಜು] ದ್ರವ ವೈದ್ಯಕೀಯ ಆಮ್ಲಜನಕವನ್ನು ಕೊಂಡೊಯ್ದಿದೆ. ಬೇಡಿಕೆ ಇಡುವ ರಾಜ್ಯಗಳಿಗೆ ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ಎಲ್.ಎಂ.ಒ ತಲುಪಿಸಲು ಭಾರತೀಯ ರೈಲ್ವೆ ತನ್ನ ಪ್ರಯತ್ನದಲ್ಲಿ ತೊಡಗಿಕೊಂಡಿದೆ.

ಎರಡನೇ ಆಕ್ಸಿಜನ್ ಎಕ್ಸ್‌ಪ್ರೆಸ್‌ ಮೂಲಕ ದೆಹಲಿ ಇಂದು 120 ಮೆಟ್ರಿಕ್ ಟನ್ ದ್ರವ ವೈದ್ಯಕೀಯ ಆಮ್ಲಜನಕ - ಎಲ್.ಎಂ.ಒ ಅನ್ನು ಸ್ವೀಕರಿಸಿದೆ. ಮೂರನೇ ಆಕ್ಸಿಜನ್ ಎಕ್ಸ್‌ಪ್ರೆಸ್‌ ಈಗಾಗಲೇ ಅಂಗುಲ್‌ನಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದು, 30,86 ಮೆಟ್ರಿಕ್ ಟನ್ ಎಲ್.ಎಂ.ಒ ಕೊಂಡೊಯ್ಯುತ್ತಿದೆ.

ತೆಲಂಗಾಣ ರಾಜ್ಯ ಮೊದಲ ಆಕ್ಸಿಜನ್ ಎಕ್ಸ್ ಪ್ರೆಸ್ ಮೂಲಕ 63.6 ಮೆಟ್ರಿಕ್ ಟನ್ ದ್ರವ ಆಮ್ಲಜಕ ಸ್ವೀಕರಿಸಿದೆ. ಹರ್ಯಾಣ ಮತ್ತು ದೆಹಲಿಗೆ ಇನ್ನಷ್ಟು ಆಕ್ಸಿಜನ್ ಎಕ್ಸ್‌ಪ್ರೆಸ್‌ಗಳು 61.46 ಮೆಟ್ರಿಕ್ ಟನ್ ಎಲ್.ಎಂ.ಒ ಅನ್ನು ತೆಗೆದುಕೊಂಡು ಹೋಗುತ್ತಿದೆ.

ಈ ವರೆಗೆ ಭಾರತೀಯ ರೈಲ್ವೆ 1094 ಮೆಟ್ರಿಕ್ ಟನ್‌ಗಳಷ್ಟು ದ್ರವ ವೈದ್ಯಕೀಯ ಆಮ್ಲಜನಕ [ಎಲ್.ಎಂ.ಒ] ಪೂರೈಸಿದೆ. ಮಹಾರಾಷ್ಟ್ರ [174 ಮೆಟ್ರಿಕ್ ಟನ್]. ಉತ್ತರ ಪ್ರದೇಶ [430.51 ಮೆಟ್ರಿಕ್ ಟನ್], ಮಧ್ಯ ಪ್ರದೇಶ [156.96 ಮೆಟ್ರಿಕ್ ಟನ್], ದೆಹಲಿ [190 ಮೆಟ್ರಿಕ್ ಟನ್], ಹರ್ಯಾಣ [79 ಮೆಟ್ರಿಕ್ ಟನ್] ಮತ್ತು ತೆಲಂಗಾಣ [63.6 ಮೆಟ್ರಿಕ್ ಟನ್] ಸೇರಿದೆ.(ಆರೋಗ್ಯ ಸಚಿವಾಲಯ ಪ್ರಕಟಣೆ)

English summary
Indian Railways has now delivered 1094 MT of LMO in 74 tankers to various states across the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X