Anurag Maloo: ಆಕ್ಸಿಜನ್ ಇಲ್ಲದೆ 2 ದಿನ ಹಿಮದ ಅಡಿಯಲ್ಲಿ ಸಾವು ಬದುಕಿನ ಹೋರಾಟ- ಸಾವನ್ನೇ ಗೆದ್ದ ಪರ್ವತಾರೋಹಿ
ಕಠ್ಮಂಡು ಏಪ್ರಿಲ್ 26: ಕಿಶನ್‌ಗಢದ ವಾಣಿಜ್ಯೋದ್ಯಮಿ ಮತ್ತು ಪರ್ವತಾರೋಹಿ ಅನುರಾಗ್ ಮಾಲೂ ಅವರು ಅನ್ನಪೂರ್ಣ ಪರ್ವತದಿಂದ ಜೀವಂತವಾಗಿ ಮರಳಿದ ಮೂರು ಪವಾಡಗಳ ಕಥೆ ಇದು. ಮೊದಲನೆಯದಾಗಿ ಅವರು ಪತ್ತೆಯಾಗಿದ್ದು, ಎರಡನೆಯದಾಗಿ, ಅವರು ಜೀವಂತವಾಗಿ ಕಂಡಿದ್ದು ಮತ್ತು ಮೂರನೆಯದಾಗಿ ಅವರನ್ನು ರಕ್ಷಿಸಲಾಗಿದ್ದು. ನಿಜಕ್ಕೂ ಈ ಮೂರು ಸಂಗತಿಗಳು ಪವಾಡವೇ ಸರಿ.
ಐದು ಶೆರ್ಪಾಗಳು (ಪರ್ವತಾರೋಹಿಗಳಿಗೆ ಮಾರ್ಗದರ್ಶನ ನೀಡುವಲ್ಲಿ ಪ್ರಸಿದ್ಧವಾದ ನೆಪಾಳದ ಒಂದು ಜನಾಂಗ) ಮತ್ತು ಇಬ್ಬರು ವಿದೇಶಿ ಪರ್ವತಾರೋಹಿಗಳ ಏಳು ಸದಸ್ಯರ ತಂಡ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಅನುರಾಗ್ ಅವರನ್ನು ರಕ್ಷಣೆ ಮಾಡಿದೆ. ಇವರು ಪ್ರಜ್ಞಾಹೀನರಾಗಿದ್ದ ಅನುರಾಗ್ ದೇಹವನ್ನು ಆಳವಾದ ಹಿಮದ ಸೀಳಿನಿಂದ ಹೊರತೆಗೆದರು. ಸುತ್ತಲೂ ಯಾವುದೇ ಜೀವಿ ಇರಲಿಲ್ಲ. ಕಣ್ಣು ಹಾಸಿದಷ್ಟು ದೂರ ಬರೀ ಬಿಳಿ ಹಿಮ ಹೊರತುಪಡಿಸಿ ಬೇರೆ ಏನೂ ಕಾಣಿಸುತ್ತಿರಲಿಲ್ಲ.

ಸುಮಾರು 6 ಸಾವಿರ ಮೀಟರ್ ಎತ್ತರದಿಂದ ಕೆಳಗೆ ಬಿದ್ದಿದ್ದರು. ಅನ್ನಪೂರ್ಣ ಪರ್ವತವು ಸಮುದ್ರ ಮಟ್ಟಕ್ಕಿಂತ 8,091 ಮೀಟರ್ ಎತ್ತರದಲ್ಲಿದ್ದು, ಜಗತ್ತಿನ ಹತ್ತನೇ ಅತಿ ಎತ್ತರದ ಪರ್ವತವಾಗಿದೆ. ಕೆ2 ಮತ್ತು ನಂಗಾ ಪರ್ಬಾತ್ ಜತೆಗೆ ಈ ಪರ್ವತ ಕೂಡ ಏರಲು ಅತ್ಯಂತ ಕ್ಲಿಷ್ಟಕರವಾಗಿದೆ.
ಅನುರಾಗ್ ಅವರು ಎರಡು ದಿನಗಳ ಕಾಲ ಹಿಮದ ಅಡಿಯಲ್ಲಿ ಮುಳುಗಿ ಹೋಗಿದ್ದರು. ಯಾವುದೇ ಹೆಚ್ಚುವರಿ ಆಮ್ಲಜನಕವಿಲ್ಲದೆ ಶೀತದ ಅಲೆಯನ್ನು ಎದುರಿಸಿದರು. ಏಪ್ರಿಲ್ 19 ರಂದು ಆದ ಹಿಮಪಾತ ಅವರನ್ನು ಇನ್ನಷ್ಟು ಅಪಾಯಕ್ಕೆ ತಳ್ಳಿತು. ರಕ್ಷಣ ಕಾರ್ಯವೂ ತಡವಾಯಿತು. ಇದೆಲ್ಲದರ ವಿರುದ್ಧ ಹೋರಾಡಿ ಸಾವನ್ನೇ ಗೆದ್ದು ಬಂದಿದ್ದಾರೆ ಅನುರಾಗ್ ಮಾಲೂ.
ಅನುರಾಗ್ ಕೊರಕಲಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡ ರಕ್ಷಣಾ ತಂಡ ತಡಮಾಡದೇ ಆಸ್ಪತ್ರೆಗೆ ದಾಖಲಿಸಿದೆ. ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುತ್ತಿರುವ ಅವರಿಗೆ ಇನ್ನೂ ಪ್ರಜ್ಞೆ ಬಂದಿಲ್ಲ. ಆದರೆ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.

ಮಹಿಳಾ ಪರ್ವತಾರೋಹಿ ಪತ್ತೆ
ಈ ವಾರ ಅನ್ನಪೂರ್ಣ ಪರ್ವತದಿಂದ ರಕ್ಷಿಸಲ್ಪಟ್ಟ ಎರಡನೇ ಭಾರತೀಯ ಅನುರಾಗ್. ಹೌದು.. ಇವರು ಕಾಣೆಯಾದ ದಿನವೇ ಪರ್ವತಾರೋಹಿ ಬಲ್ಜೀತ್ ಕೌರ್ ಕೂಡ ಕಾಣೆಯಾಗಿದ್ದರು. ಏಪ್ರಿಲ್ 18 ರಂದು ಬೆಳಿಗ್ಗೆ 7:56ಕ್ಕೆ ಬಲ್ಜೀತ್ ಕೌರ್ ತುರ್ತು ಎಚ್ಚರಿಕೆಯ ಸಂದೇಶ ಕಳುಹಿಸಿದ್ದರು. ಆದಾದ ಬಳಿಕ ಆಕೆ ಸಂಪರ್ಕಕ್ಕೆ ಸಿಕ್ಕೆ ಇರಲಿಲ್ಲ. ಇದರಿಂದ ಏಪ್ರಿಲ್ 18 ರಂದು ಸಂತಾಪ ಸಂದೇಶ ವೈರಲ್ ಆಗುವುದರೊಂದಿಗೆ ಅವರು ಸಾವನ್ನಪ್ಪಿದ್ದಾರೆ ಎಂದು ಭಾವಿಸಲಾಗಿತ್ತು.
ಕೆಲವು ಗಂಟೆಗಳ ನಂತರ ಅದೇ ದಿನ ಆಕೆಯನ್ನು ಸಾವಿನ ಕೂಪದಿಂದ ರಕ್ಷಣಾ ಕಾರ್ಯಾಚರಣೆಯಲ್ಲಿ ರಕ್ಷಿಸಲಾಯಿತು. ಬಳಿಕ ಆಕೆಯನ್ನು ಸುರಕ್ಷಿತವಾಗಿ ವಿಮಾನದಲ್ಲಿ ಸಾಗಿಸಲಾಯಿತು. ಅನುರಾಗ್ ನಂತೆ ಇವರೂ ಕೂಡ ಪುನರ್‌ಜನ್ಮ ಪಡೆದು ಬದುಕುಳಿದಿದ್ದಾರೆ.
ರಕ್ಷಿಸುವ ಸಮಯದಲ್ಲಿ ಅವಳು ಕನಿಷ್ಟ 36 ಗಂಟೆಗಳ ಕಾಲ ಆಮ್ಲಜನಕವಿಲ್ಲದೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು. ಅನ್ನಪೂರ್ಣ ಪರ್ವತದ 4ನೇ ಶಿಬಿರದಿಂದ 27 ವರ್ಷದ ಬಲ್ಜೀತ್ ನಾಪತ್ತೆಯಾಗಿದ್ದರು. ಅವರನ್ನು 7,363 ಅಡಿ ಎತ್ತರದಿಂದ ರಕ್ಷಣೆ ಮಾಡಲಾಗಿತ್ತು. ಆಕೆ ಪರ್ವತದ ಮೇಲೆ ಸಂಪೂರ್ಣವಾಗಿ ಒಂಟಿಯಾಗಿದ್ದಳು. ಆಕೆಯನ್ನು ಕಂಡ ರಕ್ಷಣಾ ಸಿಬ್ಬಂದಿಗಳಿಗೆ ಆ ಕ್ಷಣ ಅವಳ ಮೆದುಳಿನ ಒಂದು ಭಾಗವು ಅವಳನ್ನು ಕೊಲ್ಲಲು ಪ್ರಯತ್ನಿಸುತ್ತಿದೆ, ಇನ್ನೊಂದು ಭಾಗವು ಅವಳನ್ನು ಉಳಿಸಲು ಪ್ರಯತ್ನಿಸುತ್ತಿದೆ ಎಂದೆನಿಸಿತ್ತು.

''ಎದ್ದೇಳು, ಹೊರಡು, ಎದ್ದೇಳು, ಸೋಲಬೇಡ, ಎದ್ದೇಳು" ಎಂದು ಹೇಳುತ್ತಾ ರಕ್ಷಣಾ ಸಿಬ್ಬಂದಿ ಆಕೆಯನ್ನು ಎಚ್ಚರಗೊಳಿಸುತ್ತಾ ವಿಮಾನದಲ್ಲಿ ಸಾಗಿಸಿದ್ದಾರೆ. ಯಾರು ಏನೇ ಹೇಳಿದರೂ ಆಕೆಯ ಕಿವಿಗೆ ಬೀಳುತ್ತಿರಲಿಲ್ಲ. ಆದರೂ ಸಿಬ್ಬಂದಿಗಳ ಮಾತು ಕಾಣದಂತೆ ಆಕೆಯ ಮುಖ ಲಕ್ಷಣದಿಂದ ಕಾಣಿಸುತ್ತಿತ್ತು.
ಬಲ್ಜೀತ್ ಕೌರ್ ಅವರನ್ನು ಕರೆದುಕೊಂಡು ಮತ್ತೆ ಅನ್ನಪೂರ್ಣ ಬೇಸ್ ಕ್ಯಾಂಪ್‌ಗೆ ಬಂದಾಗಲೇ ಆಕೆಯ ಆಪ್ತ ಸ್ನೇಹಿತ ಅನುರಾಗ್ ನಾಪತ್ತೆಯಾಗಿರುವ ಸುದ್ದಿ ತಿಳಿಯಿತು. ಇಲ್ಲಿ ಭಯ ಮತ್ತೆ ಶುರುವಾಯಿತು.
ಬಲ್ಜೀತ್ ಕೌರ್ ಪರ್ವತಾರೋಹಣ ಮಾಡುವಾಗ ಅನುರಾಗ್ ಮಾಲೂ ಮುಖಾಮುಖಿಯಾಗಿದ್ದರು. ಬಲ್ಜಿತ್ ಕೊನೆಯ ಬಾರಿಗೆ ಅನುರಾಗ್ ಅವರನ್ನು ಪ್ರಜ್ಞಾಪೂರ್ವಕವಾಗಿ ನೋಡಿದ ವ್ಯಕ್ತಿಗಳಲ್ಲಿ ಒಬ್ಬರು. ಏಪ್ರಿಲ್ 16 ರಂದು ಮಧ್ಯಾಹ್ನ 3 ಗಂಟೆಗೆ ಇಬ್ಬರೂ ಪರ್ವತ ಶಿಖರ ಮತ್ತು ಕ್ಯಾಂಪ್ 4 ರ ನಡುವಿನ ಮಾರ್ಗವನ್ನು ದಾಟಿದ್ದರು. ಅವರು ಆರೋಹಣ ಮಾಡುವಾಗ ಇವರು ಇಳಿಯುತ್ತಿದ್ದರು.

ಈ ವೇಳೆ ಪರ್ವತವನ್ನು ಏರಲು ಸಾಧ್ಯವಾಗದಿದ್ದಕ್ಕಾಗಿ ಅನುರಾಗ್ ಹತಾಶೆ ಮತ್ತು ಅಸಮಾಧಾನವನ್ನು ಚೇತರಿಸಿಕೊಂಡ ಬಲ್ಜೀತ್ ಕೌರ್ ಅವರು ವಿವರಿಸಿದ್ದಾರೆ.
ಅನುರಾಗ್ ಜಾಗರೂಕರಾಗಿರಲು, ಎಚ್ಚರಿಕೆಯಿಂದ ಹೆಜ್ಜೆಯಿಡಲು ಮತ್ತು ಅವರ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಲು ಬಲ್ಜೀತ್ ಅವರು ಧೈರ್ಯ ತುಂಬಿರುವುದನ್ನು ನೆನಪಿಸಿಕೊಂಡರು. ಮಾರ್ಗ ಮಧ್ಯೆ "ಗಮನ ಕೊಡು, ಅನುರಾಗ್, ಹುಷಾರಾಗಿರು," ಎಂದು ಅವರು ಹೇಳುತ್ತಲೇ ಇದ್ದರು. ಆ ವೇಳೆ ಅವನ ಪ್ರತಿಕ್ರಿಯೆಯು ಅಸ್ಪಷ್ಟವಾಗಿತ್ತು. ಈ ವೇಳೆ ಆತನ ಅಸ್ವಸ್ಥನಾಗಿದ್ದನೆಂದು ಬಲ್ಜೀತ್ ಅವರು ನೆನಪಿಸಿಕೊಳ್ಳುತ್ತಾರೆ.
ಏಪ್ರಿಲ್ 22 ರಂದು ಕಠ್ಮಂಡು ಆಸ್ಪತ್ರೆಯಿಂದ ಬಿಡುಗಡೆಯಾದ ನಂತರದ ದಿನಗಳಲ್ಲಿ ತನ್ನ ಮೊದಲ ಸರಿಯಾದ ಊಟವನ್ನು ಸೇವಿಸುತ್ತಿರುವಾಗ ಬಲ್ಜೀತ್ ಮಾತನಾಡಿದರು. "ನನಗೆ ಇದನ್ನು ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ" ಎಂದು ಬಲ್ಜೀತ್ ಹೇಳಿದರು. ಅವಳ ಕಾಲ್ಬೆರಳುಗಳಿಗೆ ಬ್ಯಾಂಡೇಜ್ ಕೂಡ ಮಾಡಲಾಗಿತ್ತು. ಅನುರಾಗ್ನ ಚೇತರಿಕೆಗಾಗಿ ಪಶುಪತಿನಾಥ ದೇವಸ್ಥಾನಕ್ಕೆ ತೆರಳಿ ಬಲ್ಜೀತ್ ಪ್ರಾರ್ಥಿಸಿದರು.
ಒಟ್ಟಿನಲ್ಲಿ ಈ ಪರ್ವತಾರೋಹಿಗಳು ಕಷ್ಟದ ನಡುವೆ ಸಾವನ್ನೇ ಗೆದ್ದು ಬಂದಿದ್ದಾರೆ. ಅನುರಾಗ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ವೈದ್ಯರು ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ತುರ್ತು ಘಟಕದಲ್ಲಿರುವ ಅನುರಾಗ್ ಇನ್ನೂ ಚೇತರಿಸಿಕೊಳ್ಳಬೇಕಿದೆ. ಅವರಿಗೆ ಪ್ರಜ್ಞೆಬರಲಿ ಎಂದು ನಾವೂ ಕೂಡ ಪ್ರಾರ್ಥಿಸೋಣ.












Click it and Unblock the Notifications