ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ನೋ: 24 ದಿನಗಳಲ್ಲಿ 8 ಜನರನ್ನು ಕಳೆದುಕೊಂಡ ಕುಟುಂಬ

|
Google Oneindia Kannada News

ಲಕ್ನೋ ಏಪ್ರಿಲ್ 29: ಲಕ್ನೋದ ಹೊರವಲಯದಲ್ಲಿರುವ ಇಮಾಲಿಯಾ ಎಂಬ ಹಳ್ಳಿಯಲ್ಲಿ ವಿಸ್ತಾರವಾದ ಯಾದವ್ ಕುಟುಂಬದ 8 ಕೋಣೆಗಳ ಮನೆ ಖಾಲಿಯಾಗಿದೆ. ಕೇವಲ ಒಂದು ವರ್ಷದ ಹಿಂದೆ ಕೋವಿಡ್ ಸಾಂಕ್ರಾಮಿಕದ ಎರಡನೇ ಅಲೆಯು ಈ ಮನೆಯ ಎಂಟು ಜನರನ್ನು ಬಲಿ ಪಡೆದುಕೊಂಡಿದೆ. ಹೀಗಾಗಿ 24 ದಿನಗಳಲ್ಲಿ ಅವಿಭಕ್ತ ಕುಟುಂಬದ ಎಂಟು ಜನ ಸದಸ್ಯರು ಕೊರೊನಾ ವೈರಸ್ ತಗುಲಿ ಪ್ರಾಣಬಿಟ್ಟಿದ್ದಾರೆ. ಪ್ರತಿ ಮೂರು ದಿನಗಳಿಗೊಮ್ಮೆ ಈ ಮನೆಯಲ್ಲಿ ಒಂದು ಸಾವು ಸಂಭವಿಸಿದೆ.

ಸಾವನ್ನಪ್ಪಿದ ಕುಟುಂಬದ ಸದಸ್ಯರಲ್ಲಿ ಇಬ್ಬರು ಸಹೋದರಿಯರು, ಅವರ 4 ಸಹೋದರರು, ಅವರ ತಾಯಿ ಮತ್ತು ತಂದೆಯ ಚಿಕ್ಕಮ್ಮ ಒಟ್ಟು ಎಂಟು ಜನ ಒಂದೇ ಮನೆ ಕುಟುಂಬ ಸದಸ್ಯರು ಸಾವನ್ನಪ್ಪಿದ್ದಾರೆ. ಇವರಲ್ಲಿ ಕೆಲವರು ಖಾಸಗಿ ಆಸ್ಪತ್ರೆಯಲ್ಲಿ ಆಮ್ಲಜನಕಕ್ಕಾಗಿ ಹೋರಾಡಿ ಪ್ರಾಣ ಬಿಟ್ಟರೆ ಇನ್ನೂ ಕೆಲವರು ಮನೆಯಲ್ಲಿ ಅಸುನೀಗಿದ್ದಾರೆ.

ಈ ಮನೆಯ ಸದಸ್ಯ ರೈತನಾಗಿದ್ದ ಸೀಮಾ ಸಿಂಗ್ ಯಾದವ್ ಅವರ 45 ವರ್ಷದ ಪತಿ ನಿರಂಕರ್ ಸಿಂಗ್ ಕಳೆದ ವರ್ಷ ಏಪ್ರಿಲ್ 25 ರಂದು ಆಸ್ಪತ್ರೆಯಲ್ಲಿ ಆರು ದಿನಗಳನ್ನು ಕಳೆದ ನಂತರ ನಿಧನರಾದರು. ಇದಾದ ಬಳಿಕ ಇವರ ಮನೆಯಲ್ಲಿ ಏಳು ಜನ ಪ್ರಾಣ ಬಿಟ್ಟಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸೀಮಾ ತಮ್ಮ ಸಂಕಟವನ್ನು ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ.

Lucknow: A family that lost 8 people in 24 days

"ಅವರು (ನಿರಂಕರ್ ಸಿಂಗ್) ಆಮ್ಲಜನಕ ಸಿಗದೆ ಪ್ರಾಣ ಬಿಟ್ಟರು. ಅವರನ್ನು ಆಸ್ಪತ್ರೆಗೆ ದಾಖಲಿಸಿದಾಗ ನಾನು ವೈದ್ಯರ ಬಳಿಗೆ ಹೋಗಿ ಹೆಚ್ಚಿನ ಆಮ್ಲಜನಕದ ವ್ಯವಸ್ಥೆ ಮಾಡುವಂತೆ ಕೇಳಿದ್ದೇ. ನಾನು ಅವನ ಆಮ್ಲಜನಕದ ಹರಿವನ್ನು ಹೆಚ್ಚಿಸಲು ವೈದ್ಯರಲ್ಲಿ ಬೇಡುತ್ತಿದ್ದೆ. ವೈದ್ಯರು ಒಮ್ಮೆ ಹೆಚ್ಚು ಆಮ್ಲಜನಕ ನೀಡಿದರು. ಆದರೂ ನನ್ನ ಪತಿಗೆ ಉಸಿರಾಡಲು ಸಾಧ್ಯವಾಗಲಿಲ್ಲ. ನಾನು ಇನ್ನೂ ಹೆಚ್ಚಿಸಿ ಎಂದು ಡಾಕ್ಟರರನ್ನು ಕೇಳಿದೆ. ಆದರೆ ನನಗೆ ಅವರು ಇದಕ್ಕಿಂತ ಹೆಚ್ಚಿಸಲು ಬರುವುದಿಲ್ಲ ಎಂದರು. ಇದನ್ನು ಕೇಳಿದ ನನ್ನ ಪತಿ ಡಾಕ್ಟರು ಯಾಕೆ ಹೀಗೆ ಹೇಳುತ್ತಿದ್ದಾರೆ ಎಂದು ಕೇಳಿದರು. ಡಾಕ್ಟರ್ ಬೇರೆಯವರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಸುಳ್ಳು ಹೇಳಬೇಕಾಗಿ ಬಂತು. ನಂತರ ಅವರು ನನ್ನ ಮುಂದೆ ಆಮ್ಲಜನಕ ಬೇಡಿಕೊಳ್ಳುತ್ತಾ ಏದುಸಿರು ಬಿಡುತ್ತಾ ಸಾವನ್ನಪ್ಪಿದರು" ಎಂದು ಸೀಮಾ ಯಾದವ್ ಕಣ್ಣೀರು ಸುರಿಸುತ್ತಾ ವಿವರಿಸುತ್ತಾರೆ.

ಸದ್ಯ ಅವರಿಗೆ ತಮ್ಮ 19 ಮತ್ತು 21 ವರ್ಷದ ಪುತ್ರರಿಗೆ ಶಿಕ್ಷಣ ಕೊಡಿಸುವುದು ಕಷ್ಟವಾಗಿದೆ. ಆಕೆಯ ಹಿರಿಯ ಮಗ ಹೈದರಾಬಾದ್‌ನಲ್ಲಿ ಫ್ಯಾಷನ್ ಡಿಸೈನರ್ ವಿದ್ಯಾರ್ಥಿಯಾಗಿದ್ದು, ಕಿರಿಯವನು 12 ನೇ ತರಗತಿ ಪರೀಕ್ಷೆಗೆ ಹಾಜರಾಗಿದ್ದಾನೆ ಮತ್ತು ಸೀಮಾ ಅವರಿಗೆ ಜಮೀನಿನಲ್ಲಿ ಸಹಾಯ ಮಾಡುತ್ತಾನೆ. ತನ್ನ ಪತಿ ಸಾವಿನ ಬಳಿಕ ತಮ್ಮ ಜೀವನದ ಬಗ್ಗೆ ವಿವರಿಸಿದ ಅವರು ತಮ್ಮ ಕಷ್ಟ ಯಾರಿಗೂ ಬರಬಾರದೆಂದು ಕಣ್ಣೀರು ಹಾಕಿದ್ದಾರೆ.

"ನನಗೆ ಒಂದು ದಿನ ಕಳೆಯುವುದು ತುಂಬಾ ಕಷ್ಟವಾಗುತ್ತಿದೆ. ನಾನು ನನ್ನ ಮಕ್ಕಳಿಂದ ಮಾತ್ರ ಬದುಕಿದ್ದೇನೆ. ನಾನು ತುಂಬಾ ಅನಾರೋಗ್ಯಕ್ಕೆ ಒಳಗಾಗಿದ್ದೇ ಮತ್ತು ನನಗೆ ಏನಾದರೂ ಸಂಭವಿಸಿದರೆ ನನ್ನ ಮಕ್ಕಳು ಏನು ಮಾಡುತ್ತಾರೆ" ಎಂದು ಸೀಮಾ ಆತಂಕ ವ್ಯಕ್ತಪಡಿಸಿದ್ದಾರೆ. ನಾನು ಅವರಿಂದ ಮಾತ್ರ ಬದುಕಿದ್ದೇನೆ. ನಾನು ನನ್ನ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತೇನೆ. ಏಕೆಂದರೆ ನನ್ನ ಜೀವನ ಹಾಳಾಯಿತು. ಆದರೆ ಅವರ ಜೀವನ ಮಾತ್ರ ಹಾಳಾಗಬಾರದು ಎಂದು ನಾನು ಭಾವಿಸುತ್ತೇನೆ" ಎಂದು ಸೀಮಾ ಯಾದವ್ ಹೇಳುತ್ತಾರೆ.

Lucknow: A family that lost 8 people in 24 days

ಈ ಮನೆಯ ಮತ್ತೊಬ್ಬ ಸದಸ್ಯೆ ಕುಸ್ಮಾ ದೇವಿಯ 61 ವರ್ಷದ ಪತಿ ವಿಜಯ್ ಕುಮಾರ್ ಸಿಂಗ್ ಕೂಡ ಕೃಷಿಕ ಮತ್ತು ಸೀಮಾ ಯಾದವ್ ಅವರ ಹಿರಿಯ ಸಹೋದರ. ಮೇ 1 ರಂದು ಖಾಸಗಿ ಆಸ್ಪತ್ರೆಯಲ್ಲಿ 10 ದಿನಗಳ ಹೋರಾಟದ ನಂತರ ಸಿಂಗ್ ನಿಧನರಾದರು. ಕುಸ್ಮಾ ದೇವಿ ಅವರು ಈಗ ಮನೆಯ ಉಸ್ತುವಾರಿ ವಹಿಸಿದ್ದಾರೆ. ಸರ್ಕಾರ ಪರಿಹಾರವನ್ನು ನೀಡಿದೆ. ಆದರೆ ಅವರ ಭವಿಷ್ಯವು ಅವಳನ್ನು ಚಿಂತೆಗೀಡು ಮಾಡಿದೆ ಎಂದು ಹೇಳುತ್ತಾರೆ.

"ಕಳೆದ ವರ್ಷ ನಾವು ಎದುರಿಸಿದ್ದ ಸಂದರ್ಭ ಯಾರಿಗೂ ಬರಬಾರದು ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ, ಯಾರಾದರೂ ಬಡವರಾಗಿದ್ದರೆ ಪರವಾಗಿಲ್ಲ, ದಿನಕ್ಕೆ ಒಂದು ಹೊತ್ತಿನ ಊಟವನ್ನಾದರೂ ತಿನ್ನುತ್ತಾರೆ, ಆದರೆ ಇಂತಹ ದುಃಖದಲ್ಲಿ ನಾವು ಒಂದು ತಿಂಗಲೂ ಸಿರಿಯಾಗಿ ನಿದ್ದೆ ಮಾಡಿಲ್ಲ, ಊಟ ಮಾಡಿಲ್ಲ ಎಂದು ಹೇಳುತ್ತಾರೆ. ನಾವು ಎಂದು ಇಂಥಹ ಜೀವನವನ್ನು ನೋಡಿಲ್ಲ. ಮನೆಯನ್ನು ಹೇಗೆ ನಡೆಸುವುದು ಮತ್ತು ಮಕ್ಕಳು ಹೇಗೆ ಓದುತ್ತಾರೆ ಎಂದು ನಾನು ಚಿಂತೆ ಮಾಡುತ್ತೇನೆ. ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದೇವೆ" ಎಂದು ಕುಸ್ಮಾ ದೇವಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

English summary
Eight members of the same family were killed by Corona last year in Lucknow, Uttar Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X