ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಮ್ಲಜನಕ ಕೊರತೆಯಿಂದ ಸಾವು ಸಂಭವಿಸಿದೆ ಎಂದು ಒಪ್ಪಿಕೊಂಡ ಪ್ರಥಮ ರಾಜ್ಯ ಆಂಧ್ರ ಪ್ರದೇಶ

|
Google Oneindia Kannada News

ನವದೆಹಲಿ, ಆ.11: ಕೋವಿಡ್‌ ಸಾಂಕ್ರಾಮಿಕ ಸಂದರ್ಭದಲ್ಲಿ ಆಮ್ಲಜನಕದ ಕೊರತೆಯ ಒತ್ತಡದಿಂದಾಗಿ ಕೋವಿಡ್ -19 ಗೆ ಚಿಕಿತ್ಸೆ ಪಡೆಯುತ್ತಿರುವಾಗ ವೆಂಟಿಲೇಟರ್ ಬೆಂಬಲದಲ್ಲಿರುವ ಕೆಲವು ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಆಂಧ್ರ ಪ್ರದೇಶ ಬುಧವಾರ ಕೇಂದ್ರಕ್ಕೆ ತಿಳಿಸಿದೆ. ಈ ಮೂಲಕ ದೇಶದಲ್ಲಿ ಆಮ್ಲಜನಕ ಕೊರತೆಯಿಂದ ರಾಜ್ಯದಲ್ಲಿ ಸಾವು ಸಂಭವಿಸಿದೆ ಎಂದು ಒಪ್ಪಿಕೊಂಡ ಮೊದಲ ರಾಜ್ಯ ಆಂಧ್ರ ಪ್ರದೇಶವಾಗಿದೆ.

ಎರಡನೇ ಕೋವಿಡ್‌ ಅಲೆಯ ಸಂದರ್ಭದಲ್ಲಿ ಆಮ್ಲಜನಕ ಕೊರತೆಯಿಂದಾಗಿ ಸಂಭವಿಸಿದ ಸಾವುಗಳ ಬಗ್ಗೆ ಸಂಸತ್ತಿನಲ್ಲಿ ಭಾರೀ ಚರ್ಚೆ ಸೃಷ್ಟಿಸಿತ್ತು. "ಆಮ್ಲಜನಕದ ಕೊರತೆಯಿಂದ ಯಾವುದೇ ಸಾವು ಸಂಭವಿಸಿಲ್ಲ" ಎಂಬ ಕೇಂದ್ರದ ಹೇಳಿಕೆಯು ವಿರೋಧ ಪಕ್ಷಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಆಕ್ಸಿಜನ್‌ ಕೊರತೆಯಿಂದ ಸಾವು: ಮಹಾ ಸರ್ಕಾರದ ಹೇಳಿಕೆ ಉಲ್ಲೇಖಿಸಿ ರಾವತ್‌ಗೆ ಬಿಜೆಪಿ ತಿರುಗೇಟುಆಕ್ಸಿಜನ್‌ ಕೊರತೆಯಿಂದ ಸಾವು: ಮಹಾ ಸರ್ಕಾರದ ಹೇಳಿಕೆ ಉಲ್ಲೇಖಿಸಿ ರಾವತ್‌ಗೆ ಬಿಜೆಪಿ ತಿರುಗೇಟು

ಈ ನಡುವೆ ಕೆಲವು ರಾಜ್ಯಗಳು ಕೇಂದ್ರ ಸರ್ಕಾರ ಕೋವಿಡ್‌ಗೆ ಸಂಬಂಧಿಸಿದ ಡೇಟಾ ಕೇಳಿದಾಗ ಅದರಲ್ಲಿ ಆಕ್ಸಿಜನ್‌ ಸಾವಿನ ಬಗ್ಗೆ ಉಲ್ಲೇಖ ಮಾಡಲು ಯಾವುದೇ ಕಾಲಮ್‌ ಮೀಸಲು ಇರಿಸಿಲ್ಲ. ಕೇಂದ್ರ ಸರ್ಕಾರವೇ ಯಾವುದೇ ಮಾಹಿತಿಯನ್ನು ಕೇಳಿಲ್ಲ ಎಂದು ವಾಗ್ದಾಳಿ ನಡೆಸಿತ್ತು. ಇನ್ನು ಮಹಾರಾಷ್ಟ್ರದಲ್ಲಿ ಆಕ್ಸಿಜನ್‌ ಇಲ್ಲದೇ ಸಾವು ಸಂಭವಿಸಿರುವ ಬಗ್ಗೆ ವರದಿಯಾಗಿದ್ದರೂ ಮಹಾರಾಷ್ಟ್ರ ಸರ್ಕಾರ ಮಾತ್ರ ಯಾವುದೇ ಕೊರೊನಾ ಸಾವು ಸಂಭವಿಸಿಲ್ಲ ಎಂದು ಹೇಳಿತ್ತು.

 Andhra Pradesh is 1st State to Admit Covid Patients Died Due to Oxygen Shortage

ಇವೆಲ್ಲ ಬೆಳವಣಿಗೆಯ ಬೆನ್ನಲ್ಲೇ ಕೇಂದ್ರವು ಇತ್ತೀಚೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಈ ವರ್ಷದ ಆರಂಭದಲ್ಲಿ ಕೋವಿಡ್ -19 ರ ಎರಡನೇ ಅಲೆಯ ಸಮಯದಲ್ಲಿ ಆಮ್ಲಜನಕದ ಕೊರತೆಗೆ ಸಂಬಂಧಿಸಿದ ಸಾವುಗಳ ಡೇಟಾವನ್ನು ಕೋರಿತ್ತು.

ಅರುಣಾಚಲ ಪ್ರದೇಶ, ಅಸ್ಸಾಂ, ಒಡಿಶಾ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಜಾರ್ಖಂಡ್, ಹಿಮಾಚಲ ಪ್ರದೇಶ ಮತ್ತು ಪಂಜಾಬ್ ಸೇರಿದಂತೆ 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರತಿಕ್ರಿಯಿಸಿವೆ ಎಂದು ಸುದ್ದಿ ಮೂಲ ಪಿಟಿಐ ತನ್ನ ಮೂಲಗಳನ್ನು ಉಲ್ಲೇಖಿಸಿದೆ. ಪಂಜಾಬ್ ಮಾತ್ರ ಆಮ್ಲಜನಕದ ಕೊರತೆಯಿಂದ ನಾಲ್ಕು "ಶಂಕಿತ" ಸಾವುಗಳನ್ನು ವರದಿ ಮಾಡಿದೆ ಎಂದು ಹೇಳಿದೆ. ಆದರೆ ಆಕ್ಸಿಜನ್‌ ಕೊರತೆಯಿಂದ ಕೋವಿಡ್‌ ಸಾವು ಸಂಭವಿಸಿದೆ ಎಂದು ಒಪ್ಪಿಕೊಂಡ ಮೊದಲ ರಾಜ್ಯ ಆಂಧ್ರ ಪ್ರದೇಶವಾಗಿದೆ.

'ಆಕ್ಸಿಜನ್‌ ಕೊರತೆಯಿಂದ ಸಾವಿನ ಬಗ್ಗೆ ಕೇಂದ್ರ ಮಾಹಿತಿಯೇ ಕೇಳಿಲ್ಲ': ಛತ್ತೀಸ್‌ಗಢ ಆರೋಗ್ಯ ಸಚಿವ'ಆಕ್ಸಿಜನ್‌ ಕೊರತೆಯಿಂದ ಸಾವಿನ ಬಗ್ಗೆ ಕೇಂದ್ರ ಮಾಹಿತಿಯೇ ಕೇಳಿಲ್ಲ': ಛತ್ತೀಸ್‌ಗಢ ಆರೋಗ್ಯ ಸಚಿವ

ಎರಡನೇ ಕೋವಿಡ್‌ ಅಲೆಯ ತೀವ್ರ ಪ್ರಮಾಣದ ಆಮ್ಲಜನಕದ ಕೊರತೆಯಿಂದಾಗಿ ಹೆಚ್ಚಿನ ಸಂಖ್ಯೆಯ ಕೋವಿಡ್ -19 ರೋಗಿಗಳು ರಸ್ತೆಗಳು ಮತ್ತು ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಜ್ಯ ಆರೋಗ್ಯ ಸಚಿವೆ ಭಾರತಿ ಪ್ರವೀಣ್ ಪವಾರ್ ಜುಲೈ 20 ರಂದು ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ಆರೋಗ್ಯವು ರಾಜ್ಯದ ವಿಷಯವಾಗಿದೆ ಎಂದು ಹೇಳಿದ್ದರು.

"ಸಾವಿನ ವರದಿಗಾಗಿ ವಿವರವಾದ ಮಾರ್ಗಸೂಚಿಗಳನ್ನು ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಿದೆ. ಅಂತೆಯೇ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರಕರಣಗಳು ಮತ್ತು ಸಾವುಗಳನ್ನು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ನಿಯಮಿತವಾಗಿ ವರದಿ ಮಾಡುತ್ತವೆ. ಆದಾಗ್ಯೂ, ಆಮ್ಲಜನಕದ ಕೊರತೆಯಿಂದ ಯಾವುದೇ ಸಾವುಗಳು ನಿರ್ದಿಷ್ಟವಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ವರದಿಯಾಗಿಲ್ಲ," ಎಂದಿದ್ದರು.

ಮಾನ್ಸೂನ್‌ ಅಧಿವೇಶನ ಆರಂಭವಾದ ಬಳಿಕ ಆಮ್ಲಜನಕ ಕೊರತೆಯಿಂದ ಸಾವನ್ನಪ್ಪಿದ ಜನರ ಸಂಖ್ಯೆಯ ಬಗ್ಗೆ ಭಾರೀ ಚರ್ಚೆಯಾಗಿದೆ. ಈ ಹಿಂದೆ ಎರಡನೇ ಅಲೆಯ ಪ್ರಾರಂಭದಲ್ಲಿ ಹಲವಾರು ರಾಜ್ಯಗಳಲ್ಲಿ ಆಮ್ಲಜನಕ ಕೊರತೆಯಿಂದ ಜನರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಆದರೆ ಮಾನ್ಸೂನ್‌ ಅಧಿವೇಶನದಲ್ಲಿ ಈ ಸಾವಿನ ಬಗ್ಗೆ ಚರ್ಚೆಯಾದಾಗ ಈ ಲೆಕ್ಕಾಚಾರದ ಬಗ್ಗೆ ಯಾವುದೇ ರಾಜ್ಯಗಳು ಮಾಹಿತಿ ನೀಡಿಲ್ಲ ಎಂದು ಸರ್ಕಾರ ಹೇಳಿಕೊಂಡಿದೆ. ಈ ಹಿನ್ನೆಲೆ ಇನ್ನು ಛತ್ತೀಸ್‌ಗಢ ಮಾತ್ರವಲ್ಲದೇ, ರಾಜಸ್ತಾನ ಸರ್ಕಾರವೂ ಕೂಡಾ ''ಆಕ್ಸಿಜನ್‌ ಕೊರತೆಯಿಂದ ಉಂಟಾಗಿರುವ ಸಾವಿನ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಮಾಹಿತಿ ಕೇಳಿಲ್ಲ,'' ಎಂದು ಹೇಳಿಕೊಂಡಿದೆ.

(ಒನ್‌ಇಂಡಿಯಾ ಸುದ್ದಿ)

English summary
Andhra Pradesh told the Centre that some patients on ventilator support died while undergoing treatment for Covid-19 because of low oxygen pressure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X