ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳ ಹಕ್ಕು ಆಯೋಗದಿಂದ ಪ್ರಿಯಾಂಕಾ ಗಾಂಧಿಗೆ ನೊಟೀಸ್

|
Google Oneindia Kannada News

ನವದೆಹಲಿ, ಮೇ 02: ಪ್ರಿಯಾಂಕಾ ಗಾಂಧಿ ಮುಂದೆ ಮಕ್ಕಳು 'ಚೌಕೀಧಾರ್ ಚೋರ್ ಹೇ' ಘೋಷಣೆ ಕೂಗುತ್ತಿದ್ದ ವಿಡಿಯೋ ವೈರಲ್ ಆದ ನಂತರ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣೆ ಆಯೋಗವು ಪ್ರಿಯಾಂಕಾ ಗಾಂಧಿಗೆ ನೊಟೀಸ್ ಜಾರಿ ಮಾಡಿದೆ.

ಪ್ರಿಯಾಂಕಾ ಗಾಂಧಿ ಅವರು ಅಮೇಥಿಯಲ್ಲಿ ಚುನಾವಣೆ ಪ್ರಚಾರಕ್ಕೆ ತೆರಳಿದ್ದಾಗ ಅಲ್ಲಿನ ಮಕ್ಕಳು ಪ್ರಿಯಾಂಕಾ ಗಾಂಧಿ ಎದುರು 'ಚೌಕೀಧಾರ್ ಚೋರ್ ಹೇ' ಘೋಷಣೆಗಳನ್ನು ಕೂಗಿದ್ದಾರೆ, ಆ ನಂತರ ಕೆಟ್ಟ ಪದವನ್ನೂ ಬಳಸಿದ್ದಾರೆ, ಆದರೆ ಆಗ ಪ್ರಿಯಾಂಕಾ ಗಾಂಧಿ ಮತ್ತು ಕೆಲವು ಮುಖಂಡರು ಮಕ್ಕಳನ್ನು ತಡೆದಿದ್ದಾರೆ.

ಪ್ರಿಯಾಂಕಾ ಎದುರೇ ಮೋದಿ ವಿರುದ್ಧ ಅಸಭ್ಯ ಪದ ಬಳಸಿದ ಮಕ್ಕಳುಪ್ರಿಯಾಂಕಾ ಎದುರೇ ಮೋದಿ ವಿರುದ್ಧ ಅಸಭ್ಯ ಪದ ಬಳಸಿದ ಮಕ್ಕಳು

ಪ್ರಿಯಾಂಕಾ ಗಾಂಧಿ ಅವರ ಈ ವಿಡಿಯೋ ಭಾರಿ ವೈರಲ್ ಆಗಿತ್ತು, ಈ ವಿಡಿಯೋದ ಕೊನೆಯ ಭಾಗವನ್ನು ಎಡಿಟ್ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೇರಿದಂತೆ ಹಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಪ್ರಿಯಾಂಕಾ ಗಾಂಧಿ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

NCPCR has issued a notice to Priyanka Gandhi

ಮಕ್ಕಳನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆಯೇ ಎಂಬ ಗುಮಾನಿಯಿಂದ ಈಗ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣೆ ಆಯೋಗವು ಪ್ರಿಯಾಂಕಾ ಗಾಂಧಿ ಅವರಿಗೆ ನೊಟೀಸ್ ನೀಡಿದ್ದು, ಪ್ರಚಾರ ನಡೆದ ಸ್ಥಳ, ಆ ಮಕ್ಕಳ ಬಗ್ಗೆ ಮಾಹಿತಿಯನ್ನು ನೀಡುವಂತೆ ಕೋರಿದೆ.

ಮೋದಿ ವಿರುದ್ದ ಕಣದಿಂದ ಹಿಂದಕ್ಕೆ: ಅಸಲಿ ಕಾರಣ ತೆರೆದಿಟ್ಟ ಪ್ರಿಯಾಂಕ ಗಾಂಧಿ ಮೋದಿ ವಿರುದ್ದ ಕಣದಿಂದ ಹಿಂದಕ್ಕೆ: ಅಸಲಿ ಕಾರಣ ತೆರೆದಿಟ್ಟ ಪ್ರಿಯಾಂಕ ಗಾಂಧಿ

ಮಕ್ಕಳನ್ನು ಆ ಸ್ಥಳಕ್ಕೆ ಕರೆದುಕೊಂಡು ಬಂದದ್ದು ಹೇಗೆ, ಅವರನ್ನು ಬಲವಂತದಿಂದ ಕರೆತರಲಾಗಿದೆಯೇ ಎಂಬಿತ್ಯಾದಿ ಮಾಹಿತಿ ಬಗ್ಗೆ ಮೂರು ದಿನಗಳ ಒಳಗಾಗಿ ಮಾಹಿತಿ ನೀಡುವಂತೆ ಆಯೋಗವು ಹೇಳಿದೆ.

ಬಿಜೆಪಿಗೆ ಲಾಭ ಮಾಡುವ ಬದಲು ಸಾಯುವುದು ಒಳಿತು: ಪ್ರಿಯಾಂಕಾ ಗಾಂಧಿ ಬಿಜೆಪಿಗೆ ಲಾಭ ಮಾಡುವ ಬದಲು ಸಾಯುವುದು ಒಳಿತು: ಪ್ರಿಯಾಂಕಾ ಗಾಂಧಿ

ಪ್ರಿಯಾಂಕಾ ಗಾಂಧಿ ಅವರ ವೈರಲ್ ಆಗಿರುವ ವಿಡಿಯೋ ಬಗ್ಗೆ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣೆ ಆಯೋಗವು ಕೇಂದ್ರ ಚುನಾವಣಾ ಆಯೋಗಕ್ಕೂ ದೂರು ನೀಡಿದೆ.

English summary
National Commission for Protection of Child Rights has issued a notice to Priyanka Gandhi Vadra stating 'a video in which it is seen that children are being involved in campaigning and can be seen shouting slogans using derogatory remarks and abusive language in your presence'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X