ಲೋಕಸಭಾ ಚುನಾವಣೆಗೆ ಇಂದಿರಾ ಮೊಮ್ಮಗಳ ಸ್ಪರ್ಧೆ!? ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ಹೇಳಿದ್ದೇನು?
ನವದೆಹಲಿ, ಆಗಸ್ಟ್ 14: 2024 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧೆ ಕುರಿತ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಈ ನಡುವೆ, ಪ್ರಿಯಾಂಕಾ ಅವರನ್ನು ರಾಜ್ಯಸಭೆಗೆ ಕಳುಹಿಸಬಹುದು ಎಂಬ ವರದಿಯಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ಸುಳಿವು ನೀಡಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು 2024ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂಬ ಸುಳಿವನ್ನು ಅವರ ಪತಿ ರಾಬರ್ಟ್ ವಾದ್ರಾ ಸಂದರ್ಶನವೊಂದರಲ್ಲಿ ನೀಡಿದ್ದಾರೆ. ಪ್ರಿಯಾಂಕಾ ಗಾಂಧಿ ಅವರು ಸಂಸತ್ತಿನಲ್ಲಿ ತುಂಬಾ ಉತ್ತಮ ಪಟು ಆಗಬಹುದು. ಪಕ್ಷವು ಅವರಿಗಾಗಿ ಉತ್ತಮವಾದದ್ದನ್ನು ನೀಡಲು ಯೋಜಿಸುತ್ತಿದೆ. ಅವರು ಲೋಕಸಭೆಯಲ್ಲಿ ಖಂಡಿತ ಇರಬೇಕು. ಆ ಎಲ್ಲ ಅರ್ಹತೆಗಳು ಅವರಿಗಿವೆ ಎಂದು ಹೇಳಿದ್ದಾರೆ.

ಆಕೆಗೆ ಎಲ್ಲಾ ಅರ್ಹತೆಗಳಿವೆ. ಅವರು ಸಂಸತ್ತಿನಲ್ಲಿ ತುಂಬಾ ಚೆನ್ನಾಗಿರುತ್ತಾರೆ ಮತ್ತು ಅವರು ಅಲ್ಲಿಗೆ ಅರ್ಹರು. ಕಾಂಗ್ರೆಸ್ ಪಕ್ಷವು ಅವಳನ್ನು ಸ್ವೀಕರಿಸುತ್ತದೆ ಮತ್ತು ಉತ್ತಮವಾಗಿ ಯೋಜಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ರಾಬರ್ಟ್ ವಾದ್ರಾ ತಿಳಿಸಿದ್ದಾರೆ.
ಇನ್ನೂ 2024 ರ ಲೋಕಸಭಾ ಚುನಾವಣೆಗೆ ಎನ್ ಡಿ ಎ ವಿರುದ್ದ ಕಾಂಗ್ರೆಸ್ ನೇತೃತ್ವದ ವಿಪಕ್ಷ ಮೈತ್ರಿಕೂಟ ಇಂಡಿಯಾ ಎಂಬ ಹೆಸರಿನಲ್ಲಿ ಮುಂದಿನ ಚುನಾವಣೆಗೆ ಸಜ್ಜಾಗುತ್ತಿರುವ ವೇಳೆ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ಅವರು ನೀಡಿರುವ ಹೇಳಿಕೆ ಸಾಧ್ಯ ಎಲ್ಲಾರ ಗಮನ ಸೆಳೆಯುವಂತೆ ಮಾಡಿದೆ. ಅಲ್ಲದೇ ಹೊಸದಾಗಿ ರಚನೆಯಾದ ʻಇಂಡಿಯಾʼ ಮೈತ್ರಿ ಕೂಟವನ್ನು ಶ್ಲಾಘಿಸಿದ ರಾಬರ್ಟ್ ವಾದ್ರಾ, ಇದು ಬಿಜೆಪಿ ನೇತೃತ್ವದ ಎನ್‌ಡಿಎಗೆ ಉತ್ತಮ ಹೋರಾಟವನ್ನು ನೀಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications