MP Assembly Election Opinion Polls: ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯ ಗ್ರೌಂಡ್ ಜಿರೊ ಸಮೀಕ್ಷೆ- ಅಂಕಿಅಂಶ, ವಿವರ
ಭೋಪಾಲ್, ಜುಲೈ 24: ಈ ವರ್ಷದ ಕೊನೆಯಲ್ಲಿ ಮಧ್ಯಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಮಧ್ಯಪ್ರದೇಶದೊಂದಿಗೆ ರಾಜಸ್ಥಾನ, ತೆಲಂಗಾಣ, ಛತ್ತಿಸ್‌ಗಡದಲ್ಲೂ ವಿಧಾನಸಭೆ ಚುನಾವಣೆಗಳು ಘೋಷಣೆಯಾಗಲಿವೆ. ಎಂಪಿ, ರಾಜಸ್ಥಾನ ಹಾಗೂ ಛತ್ತಿಸ್‌ಗಡದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಮಧ್ಯಪ್ರದೇಶದ ಚುನಾವಣಾ ಪೂರ್ವ ಸಮೀಕ್ಷೆಯನ್ನು 'ಗ್ರೌಂಡ್ ಜಿರೊ ರಿಸರ್ಚ್' ಪ್ರಕಟಗೊಳಿಸಿದೆ.
ಕರ್ನಾಟಕ ಚುನಾವಣೆ ಸಮೀಕ್ಷೆ ನೀಡಿದ್ದ ಗ್ರೌಂಡ್ ಜಿರೊ ರಿಸರ್ಚ್
ಮೇ ತಿಂಗಳಲ್ಲಿ ನಡೆದಿದ್ದ ಕರ್ನಾಟಕ ವಿಧಾನಸಭಾ ಚುನಾವಣಾ ಸಮೀಕ್ಷೆಯನ್ನು ಗ್ರೌಂಡ್ ಜಿರೊ ರಿಸರ್ಚ್ ನೀಡಿತ್ತು. ಅದರ ಸಮೀಕ್ಷೆಯು ಬಹುತೇಕ ಸರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಸಮೀಕ್ಷೆಯನ್ನು ನೀಡಿರುವ ಗ್ರೌಂಡ್ ಜಿರೊ ರಿಸರ್ಚ್ ಕುತೂಹಲ ಕೆರಳಿಸಿದೆ.

ಕರ್ನಾಟಕ ಚುನಾವಣೆ ಸಮೀಕ್ಷೆ ಹೇಳಿದ್ದೇನು?
ಕರ್ನಾಟಕದಲ್ಲಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ್ದ ಗ್ರೌಂಡ್ ಜಿರೊ ರಿಸರ್ಚ್ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುವುದಾಗಿ ಹೇಳಿತ್ತು.
ಕಾಂಗ್ರೆಸ್- 125 ± 10 (42% ± 2%)
ಬಿಜೆಪಿ- 75 ± 10 (33% ± 2%)
ಜೆಡಿಎಸ್ - 24 ± 5 (16% ± 2%)
ಪಕ್ಷೇತರರು- 02 ± 2 (9% ± 2%)
ಎಂಪಿಯಲ್ಲಿ ಒಂದು ತಿಂಗಳು ನಡೆದ ಸಮೀಕ್ಷೆ
ಗ್ರೌಂಡ್ ಜಿರೊ ರಿಸರ್ಚ್ ತಂಡವು ಮಧ್ಯಪ್ರದೇಶದಲ್ಲಿ ಜೂನ್ 5 ರಿಂದ ಜುಲೈ 5 ರ ವರೆಗೆ ಸಮೀಕ್ಷೆ ನಡೆಸಿದೆ. ಮಧ್ಯಪ್ರದೇಶದ 80 ಕ್ಷೇತ್ರಗಳಲ್ಲಿ ಅಭಿಪ್ರಾಯ ಸಂಗ್ರಹವನ್ನು ನಡೆಸಿದೆ. ಸಮೀಕ್ಷೆಯು 40,000 ಮಾದರಿಯ ಗಾತ್ರವನ್ನು ಹೊಂದಿದೆ. ಎಲ್ಲಾ ಜಾತಿಗಳು, ಸಮುದಾಯಗಳು ಮತ್ತು ಸಮಸ್ಯೆಗಳನ್ನು ಈ ಸಮೀಕ್ಷೆ ಹೊಂದಿದೆ. ಮುಖಾಮುಖಿ ಸಂದರ್ಶನಗಳ ಮೂಲಕ ಸಮೀಕ್ಷೆ ನಡೆಸಲಾಗಿದೆ.

ಸಮೀಕ್ಷೆ ಹೇಳುತ್ತಿರುವುದೇನು?
ಕರ್ನಾಟಕದಂತೆ ಮಧ್ಯಪ್ರದೇಶದಲ್ಲೂ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಲಿದೆ ಎಂದು ಸಮೀಕ್ಷೆ ಹೇಳಿದೆ. ಮಧ್ಯಪ್ರದೇಶದಲ್ಲಿ ಒಟ್ಟು 230 ವಿಧಾನಸಭೆ ಕ್ಷೇತ್ರಗಳಿವೆ. ಮಾಜಿ ಸಿಎಂ ಕಮಲ್‌ನಾಥ್ ನೇತೃತ್ವದ ಕಾಂಗ್ರೆಸ್‌ಗೆ 127 ರಿಂದ 132 ಸ್ಥಾನಗಳು ಸಿಗಲಿವೆ.
ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚವ್ಹಾನ್ ನೇತೃತ್ವದ ಬಿಜೆಪಿಗೆ 98 ರಿಂದ 103 ಸ್ಥಾನಗಳು ದೊರೆಯಲಿವೆ ಎಂದು ಸಮೀಕ್ಷೆ ಹೇಳಿದೆ.
5 ರಿಂದ ಪಕ್ಷೇತರರು ಜಯಗಳಿಸಬಹುದು ಎಂಬ ಅಭಿಪ್ರಾಯವನ್ನು ಸಮೀಕ್ಷೆ ಹೊಂದಿದೆ.

ಈಗಿರುವ ವಿಧಾನಸಭೆ ಬಲಾಬಲವೆಷ್ಟು?
ಮಧ್ಯಪ್ರದೇಶದಲ್ಲಿ ಪ್ರಸ್ತುತ ಶಿವರಾಜ್‌ಸಿಂಗ್ ಚವ್ಹಾನ್ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದೆ. ಬಿಜೆಪಿಯು 130 ಸ್ಥಾನಗಳನ್ನು ಹೊಂದಿದೆ. ಕಮಲ್‌ನಾಥ್ ನೇತೃತ್ವದ ಕಾಂಗ್ರೆಸ್ 96 ಶಾಸಕರನ್ನು ಹೊಂದಿದೆ. ಬಿಎಸ್‌ಪಿ ಒಬ್ಬ ಶಾಸಕನನ್ನು ಹೊಂದಿದೆ.
ಶಿವರಾಜ್‌ಸಿಂಗ್ ನೇತೃತ್ವದ ಬಿಜೆಪಿ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದೆ ಎಂಬ ವರದಿಗಳು ಕೇಳಿಬಂದಿವೆ. ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತವಿರಲಿಲ್ಲ. ಆಗ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಅಂಧಿನ ಕಾಂಗ್ರೆಸ್ ನಾಯಕರಾಗಿದ್ದ ಜ್ಯೋತಿರಾದಿತ್ಯ ಸಿಂದಿಯಾ ಅವರು ತಮ್ಮ ಕೆಲ ಬೆಂಬಲಿಗ ಶಾಸಕರನ್ನು ಕರೆದುಕೊಂಡು ಬಿಜೆಪಿಗೆ ಸೇರ್ಪಡೆಗೊಂಡರು. ಆ ಬಳಿಕ ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು.
ಬೆಲೆ ಏರಿಕೆ, ಭ್ರಷ್ಟಾಚಾರ, ಆಡಳಿತ ವಿರೋಧಿ ಅಲೆ, ಬುಡಕಟ್ಟು ಸಮುದಾಯದವರ ಮೇಲೆ ದೌರ್ಜನ್ಯ ಸೇರಿದಂತೆ ಹಲವು ಸಮಸ್ಯೆಗಳನ್ನು ಬಿಜೆಪಿ ಸರ್ಕಾರ ಎದುರಿಸುತ್ತಿದೆ.
Ground Zero Exit Poll
— Ground Zero Research (@GroundZResearch) May 11, 2023
INC- 125 ± 10 (42% ± 2%)
BJP- 75 ± 10 (33% ± 2%)
JD (S)- 24 ± 5 (16% ± 2%)
Others- 02 ± 2 (9% ± 2%) #KarnatakaElections2023 #KarnatakaElections #ExitPolls2023
ಕರ್ನಾಟಕದಂತೆಯೇ ಕಾಂಗ್ರೆಸ್ ಈಗಾಗಲೇ ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ಮಹಿಳೆಯರಿಗೆ ಹಣ, ಉಚಿತ ವಿದ್ಯುತ್ ಘೋಷಣೆ ಮಾಡಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಮಧ್ಯಪ್ರದೇಶದಲ್ಲಿ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.
The GZR Team conducted a qualitative report and opinion poll in #MadhyaPradesh from June 5th to July 5th in 80 constituencies. The survey had a sample size of 40,000 and covered all castes, cohorts, and issues through face-to-face interviews. pic.twitter.com/x87a1YCssy
— Ground Zero Research (@GroundZResearch) July 24, 2023












Click it and Unblock the Notifications