Get Updates
Get notified of breaking news, exclusive insights, and must-see stories!

New Year 2024 Wishes: ಹೊಸ ವರ್ಷಕ್ಕೆ ಪ್ರಧಾನಿ ಮೋದಿ ಸೇರಿದಂತೆ ಇತರ ರಾಜಕೀಯ ಗಣ್ಯರಿಂದ ಶುಭ ಹಾರೈಕೆ

ಹೊಸ ವರ್ಷ ಬಂದೇ ಬಿಡ್ತು. ಈ ಹೊಸ ವರ್ಷ ಎಲ್ಲರ ಜೀವನದಲ್ಲಿ ಸುಖ:, ಶಾಂತಿ, ನೆಮ್ಮದಿ, ಸಂತೋಷ, ಸಮೃದ್ಧಿ ತರಲಿ ಎಂದು ರಾಜಕೀಯ ಗಣ್ಯರು ಶುಭ ಹಾರೈಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ದೇಶದ ಜನರಿಗೆ ಹೊಸ ವರ್ಷದ ಶುಭ ಹಾರೈಯಿಸಿದ್ದಾರೆ.

'ಎಲ್ಲರಿಗೂ ಭವ್ಯವಾದ 2024ರ ಶುಭಾಶಯಗಳು! ಈ ವರ್ಷ ಎಲ್ಲರಿಗೂ ಸಮೃದ್ಧಿ, ಶಾಂತಿ ಮತ್ತು ಅದ್ಭುತ ಆರೋಗ್ಯವನ್ನು ತರಲಿ' ಎಂದು ಅವರು ಎಕ್ಸ್‌(ಹಿಂದಿನ ಟ್ವೀಟ್) ಮೂಲಕ ಶುಭ ಕೋರಿದ್ದಾರೆ.

Prime Minister Modi, other political dignitaries wished him a Happy New Year....

ಹೊಸ ವರ್ಷಕ್ಕೆ ಶುಭ ಹಾರೈಸಿದ ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ಅವರಲ್ಲದೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಹೊಸ ವರ್ಷದ ಸಂದರ್ಭದಲ್ಲಿ ವಿಶೇಷ ಸಂದೇಶವನ್ನು ಪೋಸ್ಟ್ ಮಾಡುವ ಮೂಲಕ ಇಡೀ ದೇಶಕ್ಕೆ ಶುಭ ಹಾರೈಸಿದ್ದಾರೆ. "ಹೊಸ ವರ್ಷವು ನಿಮ್ಮೆಲ್ಲರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರಲಿ. ಭಾರತದಲ್ಲಿ ನ್ಯಾಯ ಮತ್ತು ಪ್ರೀತಿಯ ಸಂದೇಶವನ್ನು ತರಲಿ" ಎಂದು ರಾಹುಲ್ ಗಾಂಧಿ X ನಲ್ಲಿ ಬರೆದಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಂದೇಶ

ಈ ವಿಶೇಷ ಸಂದರ್ಭದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೇಶವಾಸಿಗಳು. ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರಿಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿದರು. ಅವರು X ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ, "ಈ ಹೊಸ ವರ್ಷದಲ್ಲಿ ನಾನು ನಿಮಗೆ ಶುಭ ಹಾರೈಸುತ್ತೇನೆ. 2024ರ ವರ್ಷವು ಬಡ ಜನರಿಗೆ ಭರವಸೆ ಮತ್ತು ಶಕ್ತಿಯನ್ನು ನೀಡುವ ವರ್ಷವಾಗಬೇಕು. ಪ್ರತಿಯೊಬ್ಬ ನಾಗರಿಕನ ಹಕ್ಕುಗಳಿಗಾಗಿ ನಾವು ಒಗ್ಗಟ್ಟಿನಿಂದ ಹೋರಾಡುವುದು ಮತ್ತು ಸಾಮಾಜಿಕ ನ್ಯಾಯವನ್ನು ಒದಗಿಸುವುದು ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವುದು ನಮ್ಮ ಮುಖ್ಯ ಕರ್ತವ್ಯವಾಗಿದೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು" ಎಂದು ಬರೆದಿದ್ದಾರೆ.

ಹೊಸ ವರ್ಷಕ್ಕೆ ಪ್ರಿಯಾಂಕಾ ಗಾಂಧಿಯಿಂದ ಜನರಿಗೆ ವಿಶೇಷ ಮನವಿ

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಈ ವಿಶೇಷ ಸಂದರ್ಭದಲ್ಲಿ ಜನರಿಗೆ ಮನವಿ ಮಾಡಿದ್ದಾರೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದ ಪರಿಸ್ಥಿತಿಯ ಬಗ್ಗೆ X ನಲ್ಲಿ ಅವರು ಬರೆದಿದ್ದಾರೆ, "ನಾವು ಹೊಸ ವರ್ಷದ ಆರಂಭವನ್ನು ಆಚರಿಸುವ ಮೂಲಕ ಪರಸ್ಪರ ಹಾರೈಸುತ್ತೇವೆ. ನಮ್ಮ ಜೀವನವು ಪ್ರೀತಿ, ಶಾಂತಿ, ನಗು ಮತ್ತು ಒಳ್ಳೆಯತನದಿಂದ ತುಂಬಿರಲಿ. ತಮ್ಮ ಬದುಕುವ ಹಕ್ಕಿನ ಮೇಲೆ ಅತ್ಯಂತ ಅನ್ಯಾಯ ಮತ್ತು ಅಮಾನವೀಯ ದಾಳಿಯನ್ನು ಎದುರಿಸುತ್ತಿರುವ ಗಾಜಾದಲ್ಲಿರುವ ನಮ್ಮ ಸಹೋದರ ಸಹೋದರಿಯರನ್ನು ಸ್ಮರಿಸೋಣ. ಒಂದೆಡೆ ನಮ್ಮ ಮಕ್ಕಳು ಸಂಭ್ರಮಿಸುತ್ತಿದ್ದರೆ, ಅವರ ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಲಾಗುತ್ತಿದೆ. ಇದನ್ನು ಪ್ರಪಂಚದ ನಾಯಕರು ಎಂದು ಕರೆಯಲ್ಪಡುವವರು ಮೌನವಾಗಿ ನೋಡುತ್ತಿದ್ದಾರೆ. ಅಧಿಕಾರ ಮತ್ತು ದುರಾಶೆಗಾಗಿ ಇವೆಲ್ಲವು ನಡೆಯುತ್ತಿವೆ'' ಎಂದು ಬರೆದಿದ್ದಾರೆ.

ಇನ್ನೂ ಕರ್ನಾಟಕ ಕಾಂಗ್ರೆಸ್ ಪಕ್ಷ ಹೊಸ ವರ್ಷದ ಶುಭ ಕೋರಿದೆ. ನಾಡಿನ ಸಮಸ್ತ ಜನತೆಗೆ 2024 ಹೊಸ ವರ್ಷದ ಶುಭಾಶಯಗಳು ಎಂದು X ನಲ್ಲಿ ಬರೆದು ಗ್ಯಾರಂಟಿಗಳನ್ನು ಹಂಚಿಕೊಂಡಿದೆ.

ಇನ್ನೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಅವರು ಹೊಸ ವರ್ಷಕ್ಕೆ X ನಲ್ಲಿ ಶುಭ ಕೋರಿದ್ದಾರೆ.

''2024 ರ ನಿರೀಕ್ಷೆ -ಕನಸು.

•ಭಾರತದ ಸಾರ್ವಭೌಮತ್ವ ಸುಭದ್ರಗೊಳಿಸುವ

ಚುನಾವಣಾ ಫಲಿತಾಂಶ ಕಮಲದಂತೆ ಅರಳಲಿ.

•ಕರ್ನಾಟದಲ್ಲಿ ಜಾತಿ, ಧರ್ಮಗಳನ್ನು ಒಡೆದು ಎತ್ತಿಕಟ್ಟುವ ರಾಜಕಾರಣ ಕೊನೆಯಾಗಲಿ.

•ಕುವೆಂಪು ಅವರು ಕಂಡ "ಸರ್ವ ಜನಾಂಗದ ಶಾಂತಿಯ ತೋಟ...." ನಿರ್ಮಾಣವಾಗಲಿ.

•ಬಾಧಿಸುವ ಬರಗಾಲ ಮತ್ತೆ ಬಾರದಿರಲಿ.

•ಜಲ ಸಂಪತ್ತು, ಸಸ್ಯ ಸಂಪತ್ತು, ಧಾನ್ಯ ಸಂಪತ್ತುಗಳು ವೃದ್ಧಿಸಿ ಸಮೃದ್ಧ ಕರ್ನಾಟಕ ಕಂಗೊಳಿಸಲಿ.

ನಾಡಿನ ಸಮಸ್ತ ಜನತೆಗೆ 2024 ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

HappyNewYear2024'' ಎಂದು ಅವರು ಬರೆದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+