ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆ ಬಗ್ಗೆ ಆಧಾರ ರಹಿತ ಪೋಸ್ಟ್‌ ಮಾಡಿ ಮುಖಭಂಗಕ್ಕೊಳಗಾದ ಪ್ರಿಯಾಂಕಾ ಗಾಂಧಿ ವಾದ್ರಾ

|
Google Oneindia Kannada News

ನವದೆಹಲಿ, ಡಿಸೆಂಬರ್ 16:ಭಾರತೀಯ ರೈಲುಗಳ ಮೇಲೆ ಅದಾನಿ ಗ್ರೂಪ್‌ನ ಮುದ್ರೆ ಹಾಕಲಾಗಿದೆ. ರೈಲ್ವೆಯು ಬಿಲಿಯನೇರ್‌ಗಳ ಪಾಲಾಗಿದೆ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ ಮುಖಭಂಗಕ್ಕೊಳಗಾಗಿದ್ದಾರೆ.

ಭಾರತೀಯ ರೈಲ್ವೆಯ ಜಾಹೀರಾತಿನ ಭಾಗವಾಗಿ ಅದಾನಿ ಗ್ರೂಪ್‌ನ ಲಾಂಛನವನ್ನು ರೈಲ್ವೆ ಬೋಗಿಗಳ ಮೇಲೆ ಮುದ್ರಿಸಲಾಗಿದೆ. ಇದು ರೈಲ್ವೆಯ ಆದಾಯ ಹೆಚ್ಚಿಸುವ ಭಾಗವಾಗಿದೆ ಎಂದು ಪ್ರಿಯಾಂಕಾ ಬರೆದುಕೊಂಡಿದ್ದರು.

ಅಮೆರಿಕ ಈಗ ಮಹಿಳೆಯನ್ನು ಉಪಾಧ್ಯಕ್ಷೆಯನ್ನಾಗಿ ಮಾಡಿದೆ: ಪ್ರಿಯಾಂಕಾ ಗಾಂಧಿಅಮೆರಿಕ ಈಗ ಮಹಿಳೆಯನ್ನು ಉಪಾಧ್ಯಕ್ಷೆಯನ್ನಾಗಿ ಮಾಡಿದೆ: ಪ್ರಿಯಾಂಕಾ ಗಾಂಧಿ

ಪ್ರಿಯಾಂಕಾ ಗಾಂಧಿ ಪೋಸ್ಟ್ ಆಧಾರ ರಹಿತ ಹಾಗೂ ದಾರಿ ತಪ್ಪಿಸುವ ರೀತಿಯಲ್ಲಿದೆ ಎಂದು ಭಾರತೀಯ ರೈಲ್ವೆ ಸ್ಪಷ್ಟನೆ ನೀಡಿದೆ.

Misleading Claim Government On Video Shared By Priyanka Gandhi Vadra

ಈ ಬಗ್ಗೆ ಮೊದಲು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಪ್ರಿಯಾಂಕಾ ಕೋಟ್ಯಂತರ ಭಾರತೀಯರ ಮೂಲಕ ಭಾರತೀಯ ರೈಲ್ವೆ ನಡೆಯುತ್ತಿದೆ, ಆದರೆ ಬಿಜೆಪಿ ತನ್ನ ಬಿಲಿಯನೇರ್ ಸ್ನೇಹಿತನ ಮುದ್ರೆಯನ್ನು ಭಾರತೀಯ ರೈಲುಗಳ ಮೇಲೆ ಹಾಕಿದೆ, ಅದೇ ರೀತಿಯಲ್ಲಿ ಪ್ರಧಾನಿ ಮೋದಿಯ ಬಿಲಿಯನೇರ್ ಸ್ನೇಹಿತರು, ಕೃಷಿ ವಲಯವನ್ನು ಆಕ್ರಮಿಸಿಕೊಳ್ಳಲು ಮುಂದೆ ಹೊರಟಿದ್ದಾರೆ ಎಂದು ಟ್ವೀಟ್ ಮಾಡಿದ್ದರು.

ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರಿಯಾಂಕಾ ಹೇಳಿಕೆಗೆ ಪರೋಕ್ಷ ತರುಗೇಟು ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಸುತ್ತ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ದಾರಿ ತಪ್ಪಿಸಲಾಗಿದೆ. ಪ್ರತಿಪಕ್ಷಗಳು ಅವರಿಗೆ ತಪ್ಪು ಮಾಹಿತಿ ನೀಡಿ, ಪ್ರತಿಭಟಿಸಲು ಪ್ರಚೋದಿಸುತ್ತಿವೆ ಎಂದು ದೂರಿದ್ದಾರೆ.

ತಾವು ಅಧಿಕಾರದಲ್ಲಿ ಮಾಡಲಾಗದ ಐತಿಹಾಸಿಕ ನಿರ್ಣಯಗಳ ಬಗ್ಗೆ ಈಗ ಪ್ರತಿಪಕ್ಷಗಳು, ಪ್ರತಿಭಟನೆ ನಡೆಸುತ್ತಿವೆ. ಸರ್ಕಾರ ತೆಗೆದುಕೊಂಡ ಕೃಷಿ ಸುಧಾರಣಾ ನೀತಿಗಳಿಗೆ ಸಂಬಂಧಿಸಿ ರೈತ ಸಂಘಟನೆಗಳು ಹಾಗೂ ಪ್ರತಿಪಕ್ಷಗಳು ಈ ಹಿಂದೆ ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದವು, ಆದರೆ ಈಗ ಸುಳ್ಳು ಮಾಹಿತಿಗಳನ್ನು ಹರಿಬಿಡಲಾಗುತ್ತಿದೆ ಮೋದಿ ಹೇಳಿದ್ದರು.

ಕೋಟ್ಯಾಧಿಪತಿಯಾಗಲು ನಿಮಗೆ ಇಲ್ಲಿದೆ ಅವಕಾಶ!

English summary
The government today flagged a Facebook post shared by Congress leader Priyanka Gandhi Vadra and dismissed her "misleading claim" that "Railways has accepted a private firm's stamp".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X