ಭಾರತ ಅಸಹಿಷ್ಣು ರಾಷ್ಟ್ರ: ನಿರ್ಗಮಿಸುವ ಮುನ್ನ ಅನ್ಸಾರಿ ವಿವಾದಾತ್ಮಕ ಹೇಳಿಕೆ!

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಆಗಸ್ಟ್ 10: ಭಾರತ ಅಸಹಿಷ್ಣುವಾಗುತ್ತಿದೆ, ಇಲ್ಲಿ ಭಾರತೀಯ ಮೌಲ್ಯಗಳಿಗೆ ಬೆಲೆ ಇಲ್ಲದಂತಾಗಿದೆ ಎಂದು ಇಂದು(ಆಗಸ್ಟ್ 10) ಹುದ್ದೆಯಿಂದ ನಿರ್ಗಮಿಸಲಿರುವ ಭಾರತದ ಉಪರಾಷ್ಟ್ರಪತಿ ಹಮಿದ್ ಅನ್ಸಾರಿ ಹೇಳಿದ್ದಾರೆ. ಖಾಸಗಿ ಚಾನೆಲ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಭಾರತದ ಇಂದಿನ ಸ್ಥಿತಿಯ ಕುರಿತು ಆತಂಕ ವ್ಯಕ್ತಪಡಿಸಿದರು.

ಆಗಸ್ಟ್ 5ರಂದು ಉಪರಾಷ್ಟ್ರಪತಿ ಚುನಾವಣೆ, ಅಂದೇ ಫಲಿತಾಂಶ

ಗೋ ರಕ್ಷಣೆಯ ಹೆಸರಿನಲ್ಲಿ ಹಿಂಸೆ, 'ಭಾರತ್ ಮಾತಾ ಕೀ ಜೈ' ಎನ್ನದವರನ್ನು ಭಾರತ ಬಿಟ್ಟು ಹೋಗಿ ಎನ್ನುವುದು... ಮುಂತಾದ ವಿಷಯಗಳನ್ನು ಅವರು ಉಲ್ಲೇಖಿಸಿದರು.

India is becoming an intolerant society: Hamid Ansari

ದೇಶದಲ್ಲಿ, ಅದರಲ್ಲೂ ಬಹುಮುಖ್ಯವಾಗಿ ಉತ್ತರ ಭಾರತದ ಜನರಲ್ಲಿ ಇಂದು ಅಭದ್ರತೆ, ಕಳವಳ ಹೆಚ್ಚಾಗಿ ಕಂಡುಬರುತ್ತಿದೆ. ಯುವಕ-ಯುವತಿಯರು ಬೀದಿಗಿಳಿದು ಒಂದಲ್ಲ ಎರಡಲ್ಲ, ತಿಂಗಳಾನುಗಟ್ಟಲೆ ಕಲ್ಲುಹೊಡೆಯುತ್ತಿದ್ದರೆ ಅದು ಸುಮ್ಮನೆ ಬಿಟ್ಟುಬಿಡುವ ವಿಷಯವಲ್ಲ. ಏಕೆಂದರೆ ಅವರೆಲ್ಲ ನಮ್ಮ ದೇಶದ ಭವಿಷ್ಯದ ಪ್ರಜೆಗಳು, ದೇಶಕಟ್ಟಬೇಕಾದವರೇ ಅವರು ಎಂದು ಜಮ್ಮು-ಕಾಶ್ಮೀರದಲ್ಲಿ ತಾಂಡವಾಡುತ್ತಿರುವ ಹಿಂಸೆಯನ್ನು ನೆನಪಿಸಿಕೊಂಡರು.

Narendra Modi on Twitter requested people to build New India

ಹಮಿದ್ ಅನ್ಸಾರಿ ಅವರ ಅಧಿಕಾರಾವಧಿ ಇಂದು ಕೊನೆಗೊಳ್ಳಲಿದ್ದು, ಆಗಸ್ಟ್ 11 ರಂದು ನೂತನ ಉಪರಾಷ್ಟ್ರಪತಿಯಾಗಿ ವೆಂಕಯ್ಯ ನಾಯ್ಡು ಅವರು ಅಧಿಕಾರ ಸ್ವೀಕರಿಸಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India is becoming an intolerant society and there has been a breakdown of Indian values, outgoing vice-president Hamid Ansari said. “Breakdown of Indian values, breakdown of the ability of the authorities at different levels in different places to be able to enforce what should be normal law enforcing work and overall the very fact that the Indianness of any citizen is being questioned is a disturbing thought,” he said in an interview to a television channel.
Please Wait while comments are loading...