ಅನ್ಸಾರಿಗೆ ಮೋದಿಯೊಬ್ಬರಿಂದಲ್ಲ, ಟ್ವಿಟ್ಟಿಗರಿಂದಲೂ ಮಾತಿನ ಚಾಟಿ!

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 11: "ಭಾರತ ಅಸಹಿಷ್ಣು ರಾಷ್ಟ್ರ. ಈ ದೇಶ ಕೆಲವರ ಪಾಲಿಗೆ ಅಭದ್ರ ದೇಶವೆನ್ನಿಸಿದೆ" ಎಂಬ ಉಪರಾಷ್ಟ್ರಪತಿ ಹಮಿದ್ ಅನ್ಸಾರಿ ಮಾತಿಗೆ ಪ್ರಧಾನಿ ನರೇಂದ್ರ ಮೋದಿ ಬೀಸಿದ ಮಾತಿನ ಚಾಟಿಯೊಂದಿಗೆ ಟ್ವಿಟ್ಟಿಗರೂ ಜತೆಯಾಗಿದ್ದಾರೆ.

ಆಗಸ್ಟ್ 10 ರಂದು ತಮ್ಮ ಹತ್ತು ವರ್ಷಗಳ ಉಪರಾಷ್ಟ್ರಪತಿ ಗಾದಿಗೆ ವಿದಾಯ ಹಾಡಿದ ಹಮಿದ್ ಅನ್ಸಾರಿಯವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ,"ನಿಮ್ಮ ಮನಸ್ಸಿನಲ್ಲಿ ಕೆಲವು ಕಳವಳಗಳು ಇರಬಹುದು. ಇವತ್ತಿನಿಂದ ಅಂಥ ಸಂಕಟವನ್ನು ನೀವು ಎದುರಿಸಲಾರಿರಿ. ಏಕೆಂದರೆ ಇವತ್ತಿನಿಂದ ನೀವು ಸ್ವತಂತ್ರ. ನಿಮ್ಮ ನಂಬಿಕೆಗೆ ತಕ್ಕಂತೆ ಬದುಕುವುದಕ್ಕೆ, ಅದಕ್ಕೆ ತಕ್ಕಂತೆ ಕೆಲಸ ಮಾಡುವುದಕ್ಕೆ ಇನ್ನು ಮುಂದೆ ನಿಮಗೆ ಸಾಕಷ್ಟು ಅವಕಾಶವಿದೆ" ಎಂದು ಮೋದಿ ಪರೋಕ್ಷವಾಗಿ ಮಾತಿನ ಚಾಟಿ ಏಟು ನೀಡಿದ್ದರು.

ಅಸಹಿಷ್ಣುತೆ ವಿವಾದ: ಅನ್ಸಾರಿಗೆ ಮಾತಿನಲ್ಲೇ ಚಾಟಿ ಬೀಸಿದ ಪ್ರಧಾನಿ ಮೋದಿ

ನಿನ್ನೆಯಿಂದಲೂ ಹಮಿದ್ ಅನ್ಸಾರಿಯವರ ವಿವಾದಾತ್ಮಕ ಹೇಳಿಕೆಯ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಹತ್ತು ವರ್ಷಗಳಿಂದ ಈ ದೇಶದ ಉನ್ನತ ಹುದ್ದೆ ಅಲಂಕರಿಸಿದ ವ್ಯಕ್ತಿಯೊಬ್ಬರು ನಿರ್ಗಮಿಸುವ ಸಮಯದಲ್ಲಿ ಇಂಥ ಹೇಳಿಕೆ ನೀಡುವುದು ತರವೇ ಎಂಬ ಬಗ್ಗೆ ಹಲವರು ಪ್ರಶ್ನಿಸಿದ್ದರು. ಇದರೊಂದಿಗೆ ರಾಷ್ಟ್ರಗೀತೆಗೇ ಗೌರವ ನೀಡದ ಇಂಥವ ರು ಅಸಹಿಷ್ಣುತೆಯ ಬಗ್ಗೆ ಮಾತನಾಡುತ್ತಾರೆ ಎಂದು ಹಲವರು ವ್ಯಂಗ್ಯವಾಡಿದ್ದರು.

ಅನ್ಸಾರಿಯಿಂದ ಅಸಹಿಷ್ಣುತೆಯ ಭಜನೆ: ತರಾಟೆಗೆ ತೆಗೆದುಕೊಂಡ ಟ್ವಿಟ್ಟಿಗರು

ಆದರೆ ಹಮಿದ್ ಅನ್ಸಾರಿ ಮೇಲಿನ ಟ್ವಿಟ್ಟಿಗರ ಕೋಪ ಇನ್ನೂ ತಣ್ಣಗಾಗಿಲ್ಲ. ಇವತ್ತು ಸಹ ಟಾಪ್ ಟ್ರೆಂಡಿಂಗ್ ಆಗಿರುವುದು ಹಮಿದ್ ಅನ್ಸಾರಿ ವಿವಾದವೇ.

ಅಬ್ದುಲ್ ಕಲಾಂ ಮೇಲೆ ಗೌರವ ಹೆಚ್ಚುತ್ತದೆ!

'ಹಮಿದ್ ಅನ್ಸಾರಿ, ಅಜರುದ್ದಿನ್, ಇಮ್ರಾನ್ ಹಷ್ಮಿ ಇಂಥವರ ಕೆಲವು ಮಾತುಗಳನ್ನು ಕೇಳಿದಾಗೆಲ್ಲ ನನಗೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಮೇಲೆ ಗೌರವ ಹೆಚ್ಚುತ್ತದೆ. ಅವರೇ ನಿಜವಾದ ಭಾರತೀಯ ಮುಸ್ಲಿಂ' ಎಂದು ಕಿರಣ್ ಕುಮಾರ್ ಎಸ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ಸಿಗರೆಂದರೆ ಕಾಂಗ್ರೆಸ್ಸಿಗರೇ!

ಅವರಿಗೆ ಎಷ್ಟೇ ಗೌರವ ಇದ್ದಿರಲಿ, ಯಾವುದೇ ಸಾಂವಿಧಾನಿಕ ಹುದ್ದೆಯಲ್ಲೇ ಇದ್ದಿರಲಿ, ಆತ ಒಮ್ಮೆ ಕಾಂಗ್ರೆಸ್ಸಿಗನಾದರೆ ಯಾವಾಗಲೂ ಕಾಂಗ್ರೆಸ್ಸಿಗನೇ ಆಗಿರುತ್ತಾನೆ ಎಂಬುದನ್ನು ಹಮಿದ್ ಅನ್ಸಾರಿ ಸಾಬೀತುಪಡಿಸಿದ್ದಾರೆ ಎಂದು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಟ್ವೀಟ್ ಮಾಡಿದ್ದಾರೆ.

ಅನ್ಸಾರಿ ಉಪರಾಷ್ಟ್ರಪತಿಯಾದಗ ನನಗೂ ಕಳವಳವಾಗಿತ್ತು!

ಹಮಿದ್ ಅನ್ಸಾರಿಯಂಥವರಿಗೆ ದೇಶದ ಉನ್ನತ ಹುದ್ದೆ ನೀಡಿದಾಗ ಒಬ್ಬ ಹಿಂದುವಾಗಿ ನನಗೂ ನನ್ನ ದೇಶದ ಭದ್ರತೆಯ ಬಗ್ಗೆ ಕಳವಳವಾಗಿತ್ತು ಎಂದು ವಿನಯ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಮುಸ್ಲಿಮರು ಯಾವದೇಶದಲ್ಲಿ ಸುರಕ್ಷಿತವಾಗಿದ್ದಾರೆ?

ಹಮಿದ್ ಅನ್ಸಾರಿ ಅವರಿಗೆ ಇದ್ದಕ್ಕಿದ್ದಂತೆಯೇ ಭಾರತದಲ್ಲಿ ಮುಸ್ಲಿಮರು ಅಭದ್ರರು ಅನ್ನಿಸಿದೆ. ಆದರೆ ಜಗತ್ತಿನ ಯಾವ ದೇಶದಲ್ಲಿ ಮುಸ್ಲಿಮರು ಸುರಕ್ಷಿತವಾಗಿದ್ದಾರೆ ಎಂದು ಮಾತ್ರ ಅವರು ಹೇಳಲೇ ಇಲ್ಲ ಎಂದು ಅಂಶುಲ್ ಸಕ್ಸೇನಾ ಅವರು ಟ್ವೀಟ್ ಮಾಡಿದ್ದಾರೆ.

Ramya takes a dig at Karnataka BJP, by posting a photo of crater In Ahmedabad Road On Twitter

ಅಜರುದ್ದಿನ್-ಅನ್ಸಾರಿ ಹೋಲಿಕೆ

ಅಜರುದ್ದಿನ್ 10 ವರ್ಷಗಳ ಕಾಲ ಭಾರತ ಕ್ರಿಕೆಟ್ ತಂಡದ ನಾಯಕರಾಗಿದ್ದರು. ಆದರೆ ಯಾವಾಗ ಅವರನ್ನು ಬೆಟ್ಟಿಂಗ್ ಹಗರಣದ ಆರೋಪದ ಮೇಲೆ ವಶಪಡಿಸಿಕೊಳ್ಳಲಾಯ್ತೋ ಆಗ ಅವರಿಗೂ ಭಾರತ ಅಸಹಿಷ್ಣು ರಾಷ್ಟ್ರ ಎನ್ನಿಸಿತು. ಹಮಿದ್ ಅನ್ಸಾರಿ ಅವರ ಹಾಗೇ! ಎಂದು ರಿಷಿ ಬಾಗ್ರಿ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
“It is possible that there was some restlessness within you as well but from today you will not face that crisis. You now have the joy of being liberated, and the opportunity to work, think and speak according to your core beliefs” Prime minister Narendra Modi told to Hamid Ansari for his statement on intolerance. Here are some more twitter statements on Hamid Ansari's intolerance.
Please Wait while comments are loading...