ರಾಷ್ಟ್ರಗೀತೆಗೆ ಅಗೌರವ: ಹಮೀದ್ ಅನ್ಸಾರಿ ಕಚೇರಿ ಸ್ಪಷ್ಟನೆ
ನವದೆಹಲಿ, ಜ. 27: ಗಣರಾಜ್ಯೋತ್ಸವ ಸಂದರ್ಭ ರಾಷ್ಟ್ರಗೀತೆಗೆ ಸೆಲ್ಯೂಟ್ ನೀಡದ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ವರ್ತನೆ ಬಗ್ಗೆ ಉಪರಾಷ್ಟ್ರಪತಿ ಕಚೇರಿ ಸ್ಪಷ್ಟನೆ ನೀಡಿದೆ.
ರಾಷ್ಟ್ರಗೀತೆ ನಡೆಯುತ್ತಿರುಯವ ವೇಳೆ ಕಾರ್ಯಕ್ರಮದಲ್ಲಿ ಹಾಜರಿರುವ ಗಣ್ಯರು ಸಮವಸ್ತ್ರ ಧರಿಸಿದ್ದರೆ ಮಾತ್ರ ಸೆಲ್ಯೂಟ್ ನೀಡಬೇಕು ಎಂದು ಪ್ರೊಟೊಕಾಲ್ ಹೇಳುತ್ತದೆ. ಗಣರಾಜ್ಯೋತ್ಸವ ಸಮಯದಲ್ಲಿ ಅನ್ಸಾರಿ ಸಿವಿಲ್ ಡ್ರೆಸ್ ನಲ್ಲಿದ್ದರು. ಹಾಗಾಗಿ ಅವರು ಸೆಲ್ಯೂಟ್ ನೀಡದಿರುವುದನ್ನು ದೊಡ್ಡ ವಿವಾದ ಮಾಡುವ ಅಗತ್ಯವಿಲ್ಲ ಎಂದು ಹೇಳಿದೆ.[ಒಬಾಮಾ ಕಾರ್ಯಕ್ರಮಕ್ಕೂ ಬೀದಿ ನಾಯಿ ನುಗ್ತವೆ!]

ರಾಷ್ಟ್ರಗೀತೆ ವೇಳೆ ಶಿಸ್ತಿನಿಂದ ನಿಂತುಕೊಳ್ಳುವುದು ಮುಖ್ಯ. ಅನ್ಸಾರಿ ಅದನ್ನು ಮಾಡಿದ್ದಾರೆ. ಸುಮ್ಮನೆ ಗೊಂದಲ ಸೃಷ್ಟಿಸುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದೆ. ಗಣರಾಜ್ಯೋತ್ಸವ ನಂತರ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ರಾಷ್ಟ್ರಗೀತೆಗೆ ಸೆಲ್ಯೂಟ್ ನೀಡುವ ಫೋಟೋದೊಂದಿಗೆ ಅನ್ಸಾರಿ ಹಾಗೆ ನಿಂತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದೊಂದು ದೇಶಕ್ಕೆ ಅಗೌರವ ಸೂಚಿಸುವ ಕ್ರಮ, ಬೇಜವಾಬ್ದಾರಿ ವರ್ತನೆ ಎಂಬ ಆಕ್ರೋಶಗಳು ಕೇಳಿ ಬಂದಿದ್ದವು.[ಗಣತಂತ್ರ ದಿನದ ಅತಿಥಿ ಒಬಾಮಾ ಚ್ಯೂಯಿಂಗ್ ಗಮ್ ಯಾಕಮ್ಮ?]
ದೆಹಲಿ ರಾಜಪಥದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.
“@Shaelesh: Hamid Ansari holding the 2nd highest Constitutional office refuses to salute symbol of National Honor! pic.twitter.com/0cvL6RGYXi”
— b k chowla (@bchowla) January 26, 2015 











Click it and Unblock the Notifications