ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ರಾಜೀವ್ ಗಾಂಧಿ 18ನೇ ಪುಣ್ಯತಿಥಿ

By Nation pays homage to Rajiv Gandhi on his 18th death anniversary
|
Google Oneindia Kannada News

Rajiv Gandhi
ನವದೆಹಲಿ, ಮೇ. 21 : 18 ವರ್ಷಗಳ ( 21.05.1991) ಹಿಂದೆ ತಮಿಳುನಾಡಿನ ಶ್ರೀಪೆರಂಬೂದೂರು ನಲ್ಲಿ ಎಲ್ ಟಿಟಿಇ ಆತ್ಮಹತ್ಯಾ ದಾಳಿಗೆ ಬಲಿಯಾಗಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ 18ನೇ ಪುಣ್ಯತಿಥಿಯನ್ನು ಇಂದು ದೇಶಾದ್ಯಂತ ಆಚರಿಸಲಾಗುತ್ತಿದೆ. ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ರಾಜೀವ್ ಗಾಂಧಿ ಪತ್ನಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರುಗಳು ಮುಂಜಾನೆ ವೀರಭೂಮಿಗೆ ತೆರಳಿ ರಾಜೀವ್ ಸಮಾಧಿಗೆ ಪುಷ್ಪಾಂಜಲಿ ಸಲ್ಲಿಸಿದರು.

ದಿವಂಗತ ಪ್ರಧಾನಿ ಸ್ಮರಣಾರ್ಥ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ಮಕ್ಕಳಾದ ರಾಹುಲ್ ಗಾಂಧಿ, ಪ್ರಿಯಾಂಕ ಮತ್ತು ಅಳಿಯ ರಾಬರ್ಟ್ ವಾಧ್ರಾ ಪಾಲ್ಗೊಂಡಿದ್ದರು. ರಾಜೀವ್ ಗಾಂಧಿ ಸಮಾಧಿಯನ್ನು ವಿಶೇಷವಾಗಿ ಬಿಳಿ ಹೂವುಗಳಿಂದ ಅಲಂಕರಿಸಲಾಗಿತ್ತು. ಕಾಂಗ್ರೆಸ್ ನಾಯಕರುಗಳಾದ ಎ ಕೆ ಆಂಟನಿ, ಗುಲಾಂ ನಬಿ ಆಜಾದ್, ಪ್ರಣವ್ ಮುಖರ್ಜಿ, ಕಮಲ್ ನಾಥ್, ಚಿದಂಬರಂ ಸೇರಿದಂತೆ ಮುಂತಾದವರು ಸಮಾಧಿ ಬಳಿ ತೆರಳಿ ಪುಷ್ಪಾಂಜಲಿ ಸಲ್ಲಿಸಿದರು.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X