ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಹಸ್ಯ ದಾಖಲೆಗಳು ಟ್ವಿಟ್ಟರ್‌ನಲ್ಲಿ ಲಭ್ಯ: ಸುಬ್ರಮಣಿಯನ್ ಸ್ವಾಮಿ

|
Google Oneindia Kannada News

Recommended Video

ರಹಸ್ಯ ದಾಖಲೆಗಳು ಟ್ವಿಟ್ಟರ್ ನಲ್ಲಿ ಲಭ್ಯ ಎಂಬ ಹೇಳಿಕೆ ಕೊಟ್ಟ ಸುಬ್ರಮಣಿಯನ್ ಸ್ವಾಮಿ | Oneindia Kannada

ನವದೆಹಲಿ, ಜೂನ್ 27: ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ, ಮುಚ್ಚಿದ ಲಕೋಟೆಯಲ್ಲಿರುವ ದಾಖಲೆಗಳು ಟ್ವಿಟ್ಟರ್‌ನಲ್ಲಿ ಲಭ್ಯವಾಗುತ್ತವೆ ಎಂದು ಸುಪ್ರೀಂಕೋರ್ಟ್‌ಗೆ ತಿಳಿಸಿದ್ದಾರೆ.

ಜಾರಿ ನಿರ್ದೇಶನಾಲಯದ ಹಿರಿಯ ಅಧಿಕಾರಿ ರಾಜೇಶ್ವರ್ ಸಿಂಗ್ ಅವರಿಗೆ ಸಂಬಂಧಿಸಿದ ಮಾಹಿತಿಯು ಟ್ವಿಟ್ಟರ್‌ನಲ್ಲಿ ಲಭ್ಯವಿದ್ದಿದ್ದನ್ನು ಉಲ್ಲೇಖಿಸಿ ಅವರು ಈ ಹೇಳಿಕೆ ನೀಡಿದ್ದಾರೆ.

'ಭಾವ ವಾದ್ರಾ ಆದಾಯದ ವಿಚಾರಕ್ಕೆ ರಾಹುಲ್ ಏಕೆ ಬಾಯಿ ತೆರೆಯಲ್ಲ?''ಭಾವ ವಾದ್ರಾ ಆದಾಯದ ವಿಚಾರಕ್ಕೆ ರಾಹುಲ್ ಏಕೆ ಬಾಯಿ ತೆರೆಯಲ್ಲ?'

ಪ್ರಕರಣದ ವಿಚಾರಣೆ ನಡೆಸಿ ಆದೇಶ ನೀಡಿದ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ಸಂಜಯ್ ಕಿಶಾನ್ ಕೌಲ್ ಅವರನ್ನು ಒಳಗೊಂಡ ರಜಾಪೀಠವು, ಸಿಂಗ್ ಅವರ ವಿರುದ್ಧದ ಗಂಭೀರ ಆರೋಪಗಳ ಕುರಿತು ಗಮನ ಹರಿಸಲು ಸರ್ಕಾರ ಸ್ವತಂತ್ರವಾಗಿದೆ ಎಂದು ತಿಳಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಯನ್ನು ಟ್ವಿಟ್ಟರ್‌ನಲ್ಲಿ ಪ್ರಕಟಿಸಲಾಗಿದೆ ಎಂದು ಸ್ವಾಮಿ ಕೋರ್ಟ್ ಗಮನಕ್ಕೆ ತಂದಿದ್ದಾರೆ.

governments report in sealed cover available on twitter

'ಅದನ್ನು ಟ್ವಿಟ್ಟರ್‌ನಲ್ಲಿ ಹಾಕಬಾರದಿತ್ತು. ಸಾರ್ವಜನಿಕ ಮಾಧ್ಯಮಗಳಲ್ಲಿ ಅದನ್ನು ಪ್ರಕಟಿಸುವಂತಿಲ್ಲ. ಇಂದಿನ ದಿನಗಳಲ್ಲಿ ಎಲ್ಲವನ್ನೂ ಟ್ವಿಟ್ಟರ್‌ನಲ್ಲಿ ಹಾಕಲಾಗುತ್ತಿದೆ' ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.

ಆದೇಶದ ಕುರಿತು ಸಂತೋಷವಾಗಿದೆ ಎಂದು ಸುಬ್ರಮಣಿಯನ್ ಸ್ವಾಮಿ ಪ್ರತಿಕ್ರಿಯೆ ನೀಡಿದರು.

ಕೆಲಸದ ಒತ್ತಡದಿಂದ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡರೆ ಬಾಸ್ ಹೊಣೆಯಲ್ಲ!ಕೆಲಸದ ಒತ್ತಡದಿಂದ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡರೆ ಬಾಸ್ ಹೊಣೆಯಲ್ಲ!

ಏರ್‌ಸೆಲ್‌-ಮ್ಯಾಕ್ಸಿಸ್ ಹಗರಣಕ್ಕೆ ಸಂಬಂಧಿಸಿದಂತೆ ಸಿಂಗ್ ಅವರ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ಕುರಿತು ಗಂಭೀರ ತನಿಖೆ ನಡೆಸುವ ಅಗತ್ಯವಿದೆ. ಇದು ಸೂಕ್ಷ್ಮ ಪ್ರಕರಣವಾಗಿರುವುದರಿಂದ ಯಾವ ಅಧಿಕಾರಿಯೂ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶಿಸಿತ್ತು.

English summary
BJP leader Subramanian Swamy said Supreme court that the document related to ED officer Rajeshwar singh is avaliable on twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X