Baba Ramdev: ನೀವೇನೂ ಅಮಾಯಕರಲ್ಲ; ಬಾಬಾ ರಾಮ್‌ದೇವ್‌ಗೆ ಮತ್ತೆ ಛೀಮಾರಿ ಹಾಕಿದ ಸುಪ್ರೀಂಕೋರ್ಟ್
ಸುಪ್ರೀಂ ಕೋರ್ಟ್ ಎರಡನೇ ಬಾರಿ ಬಾಬಾ ರಾಮ್‌ದೇವ್ ಅವರಿಗೆ ಛೀಮಾರಿ ಹಾಕಿದೆ. ಅವರ ಬೇಜವಬ್ದಾರಿ ವರ್ತನೆಯನ್ನು ಟೀಕಿಸಿರುವ ಸುಪ್ರೀಂ ಕೋರ್ಟ್ "ನೀವೇನೂ ಮುಗ್ದರಲ್ಲ" ಎಂದು ಹೇಳಿದೆ. ಪತಂಜಲಿ ಆಯುರ್ವೇದ ಔಷಧೀಯ ಉತ್ಪನ್ನಗಳ ತಪ್ಪುದಾರಿಗೆಳೆಯುವ ಜಾಹೀರಾತುಗಳಿಗೆ ಸಂಬಂಧಿಸಿದಂತೆ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯ ಬಾಬಾ ರಾಮ್‌ದೇವ್‌ರನ್ನು ಟೀಕಿಸಿತು.
ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಮುಂದಿನ ವಿಚಾರಣೆ ಏಪ್ರಿಲ್ 23 ರಂದು ನಡೆಯಲಿದೆ ಎಂದು ಹೇಳಿದೆ.

ನ್ಯಾಯಾಲಯದಲ್ಲಿ ಹಾಜರಿದ್ದ ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಲು ಒಂದು ವಾರದ ಸಮಯವನ್ನು ನೀಡಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಬಾಬಾ ರಾಮ್‌ದೇವ್ ತಮ್ಮ ತಪ್ಪುಗಳಿಗೆ ಬೇಷರತ್ ಕ್ಷಮೆಯಾಚಿಸುವುದಾಗಿ ನ್ಯಾಯಾಲಕ್ಕೆ ತಿಳಿಸಿದರು.
ತಪ್ಪೊಪ್ಪಿಕೊಂಡ ಬಾಬಾ ರಾಮ್‌ದೇವ್
ಆ ಸಂದರ್ಭದಲ್ಲಿ ನಾವು ಮಾಡಿದ್ದು ಸರಿಯಲ್ಲ, ಇನ್ನು ಮುಂದೆ ನಾವು ಅದನ್ನು ನೆನಪಿಟ್ಟುಕೊಳ್ಳುತ್ತೇವೆ ಎಂದು ಹೇಳಿದರು.
ರಾಮ್‌ದೇವ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ನ್ಯಾಯಾಲಯ "ಕಾನೂನು ಎಲ್ಲರಿಗೂ ಸಮಾನವಾಗಿದೆ, ನೀವು ಏನು ಮಾಡಿದರೂ, ನಿಮ್ಮ ಕಾರ್ಯ ಮತ್ತು ನಮ್ಮ ಆದೇಶವನ್ನು ಅನುಸರಿಸಿ ಇದೆಲ್ಲವನ್ನೂ ಮಾಡಿದ್ದೀರಿ. ನೀವು ಗುಣಪಡಿಸಲಾಗದ ಕಾಯಿಲೆಗಳ ಬಗ್ಗೆ ಜಾಹೀರಾತು ನೀಡಲು ಸಾಧ್ಯವಿಲ್ಲ ಎಂದು ನಿಮಗೆ ತಿಳಿದಿದೆಯೇ?" ಎಂದು ಪ್ರಶ್ನೆ ಮಾಡಿತು.
ಇದಕ್ಕೆ ಉತ್ತರ ಕೊಟ್ಟ ರಾಮ್‌ದೇವ್ ಹಲವು ಪರೀಕ್ಷೆಗಳನ್ನು ನಡೆಸಿರುವುದಾಗಿ ಹೇಳಿದರು.
ಇದಕ್ಕೆ ಸಿಟ್ಟಾದ ಪೀಠವು, "ಇದು ಬೇಜವಾಬ್ದಾರಿ ವರ್ತನೆ. ನಿಮ್ಮ ಇತಿಹಾಸವು ಸರಿಯಾಗಿಲ್ಲ, ನಿಮ್ಮ ಕ್ಷಮೆಯನ್ನು ಸ್ವೀಕರಿಸಬೇಕೆ ಅಥವಾ ಬೇಡವೇ ಎಂದು ನಾವು ಯೋಚಿಸುತ್ತೇವೆ. ಹಲವು ಬಾರಿ ನೀವು ನಿಯಮಗಳನ್ನು ಉಲ್ಲಂಘಿಸಿದ್ದೀರಿ, ನ್ಯಾಯಾಲಯದಲ್ಲಿ ಏನು ನಡೆಯುತ್ತಿದೆ ಎಂದು ಏನೂ ಗೊತ್ತಿಲ್ಲದೇ ಇರುವುದಷ್ಟು ಮುಗ್ಧರಲ್ಲ ಎಂದು ಹೇಳಿದೆ.
ನ್ಯಾಯಮೂರ್ತಿ ಅಮಾನುಲ್ಲಾ ಖಾನ್ ಅವರು, ನೀವು ಮನಸಾರೆ ಕ್ಷಮೆಯನ್ನು ಕೇಳುತ್ತಿಲ್ಲ ಎಂದು ರಾಮ್‌ದೇವ್ ಅವರಿಗೆ ಹೇಳಿದರು.
ಏಪ್ರಿಲ್ 10 ರಂದು, ಸುಪ್ರೀಂ ಕೋರ್ಟ್ ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರ "ಬೇಷರತ್ ಕ್ಷಮೆ" ಯನ್ನು ವಜಾಗೊಳಿಸಿತು, ಅವರ ಕ್ರಮಗಳು ಉದ್ದೇಶಪೂರ್ವಕವಾಗಿದ್ದು, ಹಲವು ಬಾರಿ ನಿಯಮಗಳ ಉಲ್ಲಂಘೆಯಾಗಿದೆ ಎಂದು ಆದೇಶಗಳಲ್ಲಿ ತಿಳಿಸಿತು.
ಏಪ್ರಿಲ್ 10 ರಂದು ನಡೆದ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಮೂರ್ತಿಗಳಾದ ಕೊಹ್ಲಿ ಮತ್ತು ಅಮಾನುಲ್ಲಾ ಅವರ ಅದೇ ಪೀಠವು ಪತಂಜಲಿ ಆಯುರ್ವೇದವನ್ನು ತೀವ್ರವಾಗಿ ಟೀಕಿಸಿತು ಮತ್ತು "ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳನ್ನು ಲಘುವಾಗಿ ಪರಿಗಣಿಸಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿತ್ತು.
ಪತಂಜಲಿ ಉತ್ಪನ್ನಗಳಿಗೆ ಲೈಸೆನ್ಸ್ ನೀಡಿದ್ದಕ್ಕಾಗಿ ಉತ್ತರಾಖಂಡ ಸರ್ಕಾರಕ್ಕೂ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ. "ನೀವು ಅಂಚೆ ಕಚೇರಿಯಂತೆ ಕೆಲಸ ಮಾಡುತ್ತಿದ್ದೀರಾ" ಎಂದು ಹೇಳಿದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ












Click it and Unblock the Notifications