• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಭಾವ ವಾದ್ರಾ ಆದಾಯದ ವಿಚಾರಕ್ಕೆ ರಾಹುಲ್ ಏಕೆ ಬಾಯಿ ತೆರೆಯಲ್ಲ?'

|

ನವದೆಹಲಿ, ಜೂನ್ 27: ತಂಗಿಯ ಗಂಡನಿಗೆ (ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ) ಆದಾಯ ತೆರಿಗೆ ಇಲಾಖೆ ನೀಡಿರುವ ನೋಟಿಸ್ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಏಕೆ ಮೌನವಾಗಿದ್ದಾರೆ ಎಂದು ಬುಧವಾರ ಬಿಜೆಪಿಯು ರಾಹುಲ್ ರನ್ನು ತಡವಿಕೊಂಡಿದೆ. ಈ ಬಗ್ಗೆ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ನವದೆಹಲಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ತರಾಟೆಗೆ ತೆಗೆದುಕೊಂಡರು.

ರಾಬರ್ಟ್ ವಾದ್ರಾರನ್ನು ವಿಜಯ್ ಮಲ್ಯರಿಗೆ ಹೋಲಿಸಿದ ಸಂಬಿತ್ ಪಾತ್ರ, ಈ ಪ್ರಕರಣದಲ್ಲಿ ತಾವು ಶುದ್ಧ ಎಂದು ಸಾಬೀತು ಪಡಿಸುವಂತೆ ಹೇಳಿದರು. ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರಕ್ಕೆ ವಿಜಯ್ ಮಲ್ಯ ಹಾಗೂ ರಾಬರ್ಟ್ ವಾದ್ರಾ ಇಬ್ಬರೂ ಸರಿಯಾದ ಉದಾಹರಣೆಗಳು. ಈಗ ಕಾನೂನಿನ ಬಿಸಿ ತಾಗಿತು. ತಾವು ಸುರಕ್ಷಿತರಲ್ಲ ಎಂಬ ಆತಂಕ ಕಾಡಿದೆ ಎಂದಿದ್ದಾರೆ.

ಅನನುಭವಿ ರಾಹುಲ್ ಗಾಂಧಿಯಿಂದ ಸಂಸತ್ ಕಲಾಪ ಹಾಳು: ಅನಂತ್ ಕುಮಾರ್

2010-11ನೇ ಸಾಲಿನಲ್ಲಿ ಬಾಕಿ ಉಳಿಸಿಕೊಂಡ 25 ಕೋಟಿ ರುಪಾಯಿಗೆ ರಾಬರ್ಟ್ ವಾದ್ರಾ ಹಾಗೂ ಅವರ ಕಂಪೆನಿ ಸ್ಕೈಲೈಟ್ ಹಾಸ್ಪಿಟಾಲಿಟಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. ದೇಶದ ಭ್ರಷ್ಟರನ್ನು ಈಗ ಹಿಡಿಯಲಾಗುತ್ತಿದೆ ಎಂದು ಸಂಬಿತ್ ಪಾತ್ರ ಹೇಳಿದ್ದಾರೆ.

BJP questions Rahul Gandhis silence on Income Tax notice to Robert Vadra

2010-11ನೇ ಸಾಲಿನಲ್ಲಿ ರಾಬರ್ಟ್ ವಾದ್ರಾ ತಮ್ಮ ಆದಾಯ ಕೇವಲ 37 ಲಕ್ಷ ಅಂತ ತೋರಿಸಿದ್ದಾರೆ. ಆದರೆ ಆದಾಯ ತೆರಿಗೆ ಇಲಾಖೆ ಮೌಲ್ಯಮಾಪನ ಮಾಡಿದಂತೆ ಅವರ ಆದಾಯ 43 ಕೋಟಿ ಇತ್ತು. ಅಂದಹಾಗೆ ವಾದ್ರಾ ಏನೂ ಸಾಮಾನ್ಯ ವ್ಯಕ್ತಿ ಅಲ್ಲ. ರಾಹುಲ್ ಗಾಂಧಿಗೆ ಸಂಬಂಧಿಕರಾಗಬೇಕು. ವಾದ್ರಾ ಕಂಪೆನಿ ಇಷ್ಟೆಲ್ಲ ದೊಡ್ಡ ಪ್ರಮಾಣದ ಲಾಭ ಮಾಡುವಾಗ ಯುಪಿಎ ಸರಕಾರ ಏಕೆ ಮೌನವಾಗಿತ್ತು ಎಂದು ಸಂಬಿತ್ ಪಾತ್ರ ಪ್ರಶ್ನಿಸಿದ್ದಾರೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The BJP on Wednesday questioned Congress president Rahul Gandhi's silence over Income Tax notice to his brother in law Robert Vadra. Speaking during a press conference in New Delhi, BJP spokesperson Sambit Patra likened Vadra with Vijay Mallya.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more