Vijayalakshmi Darshan: ಚೂರಾದ ಹೃದಯದೊಂದಿಗೆ ಪತಿ ದರ್ಶನ್‌ ಫೋಟೋ ಹಂಚಿಕೊಂಡ ವಿಜಯಲಕ್ಷ್ಮಿ

Vijayalakshmi Darshan: ರೇಣುಕಾಸ್ವಾಮಿ ಕೊಲೆ ಪ್ರಕರಣದ ಗಂಭೀರ ಆರೋಪ ಹೊತ್ತು ಸದ್ಯ ಜೈಲು ವಾಸ ಅನುಭವಿಸುತ್ತಿರುವ ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಅವರಿಗೆ ಸುಪ್ರೀಂಕೋರ್ಟ್‌ನಲ್ಲಿ ತೀವ್ರ ಹಿನ್ನಡೆಯಾಗಿದೆ. ಇನ್ನು ಒಂದು ವರ್ಷದವರೆಗೆ ಅವರಿಗೆ ಜಾಮೀನು ಸಿಗುವುದು ಅನುಮಾನ ಎಂಬಂತಾಗಿದೆ. ಈ ಕಾನೂನು ಹೋರಾಟದಲ್ಲಿ ಸತತ ಹಿನ್ನಡೆ ಉಂಟಾದ ಬೆನ್ನಲ್ಲೇ, ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಒಂದು ವಿಶೇಷ ಪೋಸ್ಟ್ ಈಗ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಚೂರಾದ ಹೃದಯದ ಇಮೋಜಿ.. ಪೋಸ್ಟ್‌ನಲ್ಲಿ ಏನಿದೆ?

ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ವಿಜಯಲಕ್ಷ್ಮಿ ಅವರು ಪತಿಯ ಭಾವಚಿತ್ರವೊಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ನೋವನ್ನು ಹೊರಹಾಕಿದ್ದಾರೆ. ವಿಜಯಲಕ್ಷ್ಮಿ ಅವರು ಹಂಚಿಕೊಂಡಿರುವ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪತಿ ದರ್ಶನ್ ಅವರು ಮುಗುಳ್ನಗುತ್ತಿರುವ ಹಳೆಯ ಫೋಟೋ ಒಂದನ್ನು ಹಾಕಿದ್ದಾರೆ. ಆದರೆ, ಈ ಫೋಟೋದೊಂದಿಗೆ ಅವರು ಯಾವುದೇ ದೀರ್ಘವಾದ ಬರಹ ಅಥವಾ ಸಂದೇಶವನ್ನು ಬರೆದುಕೊಂಡಿಲ್ಲ. ಬದಲಿಗೆ, ಕೇವಲ ಒಂದು 'ಚೂರಾದ ಹೃದಯದ' (Broken Heart) ಇಮೋಜಿಯನ್ನು ಮಾತ್ರ ಬಳಸಿದ್ದಾರೆ.

Vijayalakshmi Darshan

ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಜಾಗೊಂಡಿರುವ ಈ ಕಠಿಣ ಸಮಯದಲ್ಲಿ, ತಮಗಾಗುತ್ತಿರುವ ಭರಿಸಲಾಗದ ಬೇಸರ, ನಿರಾಸೆ ಮತ್ತು ತೀವ್ರ ನೋವನ್ನು ವಿಜಯಲಕ್ಷ್ಮಿ ಅವರು ಈ ಒಂದು ಇಮೋಜಿ ಮೂಲಕ ತೋಡಿಕೊಂಡಿದ್ದಾರೆ. ಪತಿಯ ಬಿಡುಗಡೆಗಾಗಿ ಸತತವಾಗಿ ದೇವಸ್ಥಾನಗಳಿಗೆ ಅಲೆದಾಡಿ, ಕಾನೂನು ಹೋರಾಟ ನಡೆಸುತ್ತಿದ್ದ ಅವರಿಗೆ ನ್ಯಾಯಾಲಯದ ಈ ನಿರ್ಧಾರ ತೀವ್ರ ಆಘಾತ ನೀಡಿದೆ.

Toxic: ಟಾಕ್ಸಿಕ್ ಸಿನಿಮಾ ರಿಲೀಸ್ ಪದೇ ಪದೇ ಮುಂದೂಡಲು ಅಸಲಿ ಕಾರಣ ಬಿಚ್ವಿಟ್ಟ ನಟ ಯಶ್
Toxic: ಟಾಕ್ಸಿಕ್ ಸಿನಿಮಾ ರಿಲೀಸ್ ಪದೇ ಪದೇ ಮುಂದೂಡಲು ಅಸಲಿ ಕಾರಣ ಬಿಚ್ವಿಟ್ಟ ನಟ ಯಶ್

ಸುಪ್ರೀಂಕೋರ್ಟ್‌ನಲ್ಲಿ ದರ್ಶನ್‌ಗೆ ಬಿಗ್ ಶಾಕ್

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ತೂಗುದೀಪ, ತನಗೆ ಜಾಮೀನು ನೀಡುವಂತೆ ಕೋರಿ ದೇಶದ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಸುಪ್ರೀಂಕೋರ್ಟ್‌ನಲ್ಲೂ ದರ್ಶನ್‌ಗೆ ಸತತ ಹಿನ್ನಡೆಯಾಗಿದ್ದು, ಸದ್ಯಕ್ಕಂತೂ ಅವರಿಗೆ ಜೈಲಿನಿಂದ ಹೊರಬರಲು ದಾರಿ ಇಲ್ಲದಂತಾಗಿದೆ. ಕಾನೂನು ತಜ್ಞರ ಪ್ರಕಾರ, ಇನ್ನೂ ಕನಿಷ್ಠ ಒಂದು ವರ್ಷದವರೆಗೆ ದರ್ಶನ್ ಅವರಿಗೆ ಜಾಮೀನು ಭಾಗ್ಯ ಸಿಗುವುದು ಅಸಾಧ್ಯ ಎನ್ನಲಾಗುತ್ತಿದೆ.

ಕಣ್ಣೀರಿಟ್ಟ ಅಭಿಮಾನಿಗಳು

ವಿಜಯಲಕ್ಷ್ಮಿ ಅವರು ಈ ನೋವಿನ ಪೋಸ್ಟ್ ಹಂಚಿಕೊಳ್ಳುತ್ತಿದ್ದಂತೆ, ದರ್ಶನ್ ಅಭಿಮಾನಿಗಳುಇದನ್ನು ಸೋಶಿಯಲ್ ಮೀಡಿಯಾದ ವಿವಿಧ ವೇದಿಕೆಗಳಲ್ಲಿ ತೀವ್ರವಾಗಿ ಶೇರ್ ಮಾಡುತ್ತಿದ್ದಾರೆ. ನೆಚ್ಚಿನ ನಟನ ನಗುತ್ತಿರುವ ಮುಖ ಹಾಗೂ ಪತ್ನಿಯ ಕಡೆಯಿಂದ ವ್ಯಕ್ತವಾಗಿರುವ ಈ ಭಾವುಕ ಪೋಸ್ಟ್ ನೋಡಿ ಅಭಿಮಾನಿಗಳು ಕೂಡ ಕಣ್ಣೀರಿಟ್ಟಿದ್ದಾರೆ. "ಈ ಕಷ್ಟದ ದಿನಗಳು ಬೇಗ ಕಳೆಯಲಿ, ನಮ್ಮ ಬಾಸ್ ಶೀಘ್ರದಲ್ಲೇ ಹೊರಬರಲಿ" ಎಂದು ಅಭಿಮಾನಿಗಳು ಕಮೆಂಟ್‌ಗಳ ಮೂಲಕ ವಿಜಯಲಕ್ಷ್ಮಿ ಅವರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡುತ್ತಿದ್ದಾರೆ. ಮತ್ತೊಂದೆಡೆ ಈ ಪೋಸ್ಟ್ ಸ್ಯಾಂಡಲ್‌ವುಡ್ ವಲಯದಲ್ಲೂ ಭಾರೀ ಸಂಚಲನ ಮೂಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+