BMTC: ಬಸ್‌ನಲ್ಲಿ ಹಣ ಕಡಿತವಾಗಿ ಟಿಕೆಟ್ ಬರಲಿಲ್ಲವೇ?: ಹೀಗಾದ್ರೂ ಹಣ ವಾಪಸ್ ಗ್ಯಾರಂಟಿ ಎಂದ ಬಿಎಂಟಿಸಿ
ಬೆಂಗಳೂರು: ಗಾರ್ಡನ್ ಸಿಟಿ ಬೆಂಗಳೂರಿಗರು ನಮ್ಮ ಮೆಟ್ರೋ ಜೊತೆಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ಗಳನ್ನು ಅವಲಂಬಿಸಿದ್ದಾರೆ. ಸಂಚಾರ ವೇಳೆ ಕಂಡಕ್ಟರ್ ಬಳಿ ಇರುವ ಇವಿಎಂ ಮಷಿನ್‌ನಲ್ಲಿ ಟಿಕೆಟ್ ಪ್ರಿಂಟ್ ಆಗದಿದ್ದಲ್ಲಿ, ಹಣ ಸ್ವೀಕರಿಸದಂತಹ ಸಂದರ್ಭಗಳಲ್ಲಿ ಪ್ರಯಾಣಿಕರು ಚಿಂತಿಸಬೇಕಿಲ್ಲ ಎಂದು ಸಾರಿಗೆ ಸಂಸ್ಥೆ ತಿಳಿಸಿದೆ. ಕಡಿತಗೊಂಡ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಮರು ಪಾವತಿ ಆಗಲಿದೆ ಎಂದು ಭರವಸೆ ನೀಡಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಚಿಲ್ಲರೆ ಸಮಸ್ಯೆ ಆಗದಂತೆ ಈ ಮೊದಲು ಸಾಮಾನ್ಯ ಕ್ಯೂರ್ ಕೋಡ್ ಪರಿಚಯಿಸಲಾಯಿತು. ನಂತರ ನಿರ್ವಾಹಕರು (ಕಂಡಕ್ಟರ್) ಇವಿಎಂ ಮಷಿನ್ ಪರಿಚಯಿಸಲಾಗಿದೆ. ಕಂಡಕ್ಟರ್ ಮಷಿನ್‌ನಲ್ಲಿ ಪ್ರಯಾಣಿಕರು ಇಳಿಯಬೇಕಾದ ಮತ್ತು ಬಸ್ ಹತ್ತಿದ ಸ್ಥಳ ವಿವರ ಹಾಕುತ್ತಿದ್ದಂತೆ ಮಷಿನ್‌ನಲ್ಲಿ ಕಿಲೋ ಮೀಟರ್ ದೂರದ ಆಧಾರದಲ್ಲಿ ಟಿಕೆಟ್ ಶುಲ್ಕ ಸಹಿತ ಕ್ಯೂಆರ್ ಕೋಡ್ ಜನರೇಟ್ ಆಗುತ್ತಿತ್ತು. ನೀವು ಯಾವುದೇ ಡಿಜಿಟಲ್ ಆಪ್ ಮೂಲಕ ಆ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿಸುತ್ತಿದ್ದಂತೆ ಮಷಿನ್ ಟಿಕೆಟ್ ಪ್ರಿಂಟ್ ಮಾಡುತ್ತಿತ್ತು. ಇದು ಸದ್ಯ ಚಾಲ್ತಿಯಲ್ಲಿರುವ ಡಿಜಿಟಲ್ ವ್ಯವಸ್ಥೆಯಾಗಿದೆ. ನಗದು ಹಣ ಕೊಟ್ಟು ಟಿಕೆಟ್ ಪಡೆಯುವ ವ್ಯವಸ್ಥೆಯು ಮುಂದುವರಿಸಲಾಗಿದೆ.

ಆದರೆ ಕೆಲವು ಸಂದರ್ಭಗಳಲ್ಲಿ ಬಿಎಂಟಿಸಿ ಪ್ರಯಾಣಿಕರ ಬಳಿ ಇರುವ ಇವಿಎಂ ಮಷಿನ್‌ನಲ್ಲಿ ತಾಂತ್ರಿಕ ಲೋಪದೋಷಗಳು ಕಂಡು ಬರುತ್ತಿವೆ. ಈ ವೇಳೆ ಹಣ, ಇಲ್ಲವೇ ಟಿಕೆಟ್ ಸಹ ಬರಲಿಲ್ಲ ಎಂದು ಪ್ರಯಾಣಿಕರು ಆತಂಕಗೊಳ್ಳುತ್ತಾರೆ. ಈ ರೀತಿ ಆದಾಗ ಚಿಂತಿಸಬೇಕಿಲ್ಲ. ನಿಮ್ಮ ಹಣ ಎಲ್ಲಿಯೂ ಹೋಗದೇ ಮರಳಿ ನಿಮ್ಮ ಖಾತೆಗೆ ಜಮೇ ಆಗಲಿದೆ. ಆದರೆ ಅದಕ್ಕಾಗಿ ಎರಡು ಮೂರು ದಿನ ಕಾಯಬೇಕಾಗುತ್ತದೆ ಎಂದು ಬಿಎಂಟಿಸಿ ತಿಳಿಸಿದೆ.
ನಗದು ಹಣ ನೀಡಿ ಟಿಕೆಟ್ ಕೊಳ್ಳುವುದೇ ಕಿರಿಕಿರಿ
ಕ್ಯೂಆರ್ ಕೋಡ್ ಮೂಲಕ ನೀವು ಹಣ ಪಾವತಿಸುವ ವೇಳೆ ಹಣ ಯಶಸ್ವಿಯಾಗಿ ಕಡಿತಗೊಂಡರೂ ಸಹಿತ ತಾಂತ್ರಿಕ ಸಮಸ್ಯೆಯಿಂದ ಟಿಕೆಟ್ ಬಾರದಿದ್ದಲ್ಲಿ ನೀವು ನಗದು ನೀಡಿ ಟೀಕೆಟ್ ಕೊಳ್ಳಬೇಕಿದೆ. ಇದೆಷ್ಟೋ ಬಾರಿ ಪ್ರಯಾಣಿಕರಿಗೆ ಕಿರಿ ಕಿರಿ ಸಹ ಉಂಟು ಮಾಡುತ್ತದೆ. ಒಬ್ಬರಿಗೆ ಟಿಕೆಟ್ ನೀಡಲು ಸುಮಾರು 30-40 ಸೆಕಂಡ್‌ಗಳ ಸಮಯ ಹಿಡಿಯುತ್ತದೆ. ಸರ್ವರ್ ಸಮಸ್ಯೆ, ಇಂಟರ್‌ನೆಟ್ ಇನ್ನಿತರ ಸಮಸ್ಯೆಯಿಂದ ಹಣ ಯಶಸ್ವಿಯಾಗಿ ಕಡಿತಗೊಂಡರೂ ಟಿಕೆಟ್ ಸಿಗದೇ ಜನ ಪರದಾಡುತ್ತಾರೆ. ಬಳಿಕ ಕಂಡಕ್ಟರ್ ಸೂಚನೆ ಮೇರೆಗೆ ಕ್ಯಾಶ್ ನೀಡಿ ಟಿಕೆಟ್ ಪಡೆಯಬೇಕಿದೆ. ಡಿಜಿಟಲ್ ಯುಗದಲ್ಲಿ ಅದೆಷ್ಟೋ ಮಂದಿ ಜೇಬಿನಲ್ಲಿ ಕ್ಯಾಶ್ ಇಟ್ಟುಕೊಳ್ಳುವುದಿಲ್ಲ. ಇಂತವರು ಬಸ್ ಹತ್ತಿದಾಗ ಸಾಕಷ್ಟು ಕಿರಿ ಕಿರಿ ಅನುಭವಸಬೇಕಾಗುತ್ತದೆ.
ಇನ್ನೂ ಕಡಿತಗೊಂಡ ಹಣ ಮುಂದಿನ 2-3ದಿನಗಳಲ್ಲಿ ಮರಳಿ ಖಾತೆಗೆ ಜಮೆ ಆಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ನೀವು 080 22483777 ಗೆ ಕರೆ ಮಾಡಿ ತಿಳಿಸಬಹುದು. ವಾರದ ಏಳು ದಿನವು 24 ಗಂಟೆಗಳ ಕಾಲ ಸೇವೆ ಲಭ್ಯವಿರುತ್ತದೆ ಎಂದು ಬಿಎಂಟಿಸಿ ತಿಳಿಸಿದೆ.
ಕಡಿತದ ಹಣ ಮರಳಿ ಬರುವುದೇಗೆ?
ಪ್ರಯಾಣಿಕರಿಂದ ಟಿಕೆಟ್ ಹಣ ಯಶಸ್ವಿಯಾಗಿ ಕಡಿತಗೊಂಡು ಟಿಕೆಟ್ ಬರದಿದ್ದ ಸಂದರ್ಭದಲ್ಲಿ ನೀವು ಮೂರು ದಿನ ಕಾಯಬೇಕು. ಅಷ್ಟರಲ್ಲಿ ತಾಂತ್ರಿಕ ಕಾರಣದಿಂದ ದೃಢೀಕರಣ ಎಟಿಎಂ ಸಾಧನದಲ್ಲಿ ಸ್ವೀಕರಿಸಲಾಗಿಲ್ಲ ಮತ್ತು ಟಿಕೆಟ್ ಪ್ರಿಂಟ್ ಆಗಿಲ್ಲ ಎಂಬುದು ಖಚಿತವಾಗುತ್ತಿದ್ದಂತೆ ಕಡಿತಗೊಂಡ ನಿಮ್ಮ ಮೊತ್ತ ಮರಳಿ ನಿಮ್ಮ ಖಾತೆಗೆ ಜಮೆ ಆಗುತ್ತದೆ. ಶನಿವಾರ ಭಾನುವಾರ ಇದ್ದ ಸಂದರ್ಭದಲ್ಲಿ ಮರಳಿ ಹಣ ಜಮೆ ತಡವಾಗುವ ಸಾಧ್ಯತೆ ಇದೆ.













Click it and Unblock the Notifications