CSK Vs SRH: ಅಬ್ಬರಿಸಿದ ಡೆವಾಲ್ಡ್ ಬ್ರೆವಿಸ್; ಎಸ್‌ಆರ್‌ಎಚ್‌ಗೆ 181 ರನ್‌ಗಳ ಗುರಿ ನೀಡಿದ ಸಿಎಸ್‌ಕೆ
CSK Vs SRH IPL 2026: ಚೆನ್ನೈನ ಎಂ.ಚಿದಂಬರಂ ಕ್ರೀಡಾಂಗಣದಲ್ಲಿ ಸೋಮವಾರ (ಮೇ 18) ನಡೆದ ಐಪಿಎಲ್ 2026ರ ಅತ್ಯಂತ ನಿರ್ಣಾಯಕ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 180 ರನ್ ಪೇರಿಸಿದೆ. ಈ ಪಂದ್ಯದಲ್ಲೂ ಕೂಡ ಎಂಎಸ್ ಧೋನಿ ಕಣಕ್ಕಿಳಿದಿಲ್ಲದಿರುವುದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ಟಾಸ್ ಗೆದ್ದ ಚೆನ್ನೂ ಸೂಪರ್ ಕಿಂಗ್ಸ್ ನಾಯಕ ಋತುರಾಜ್ ಗಾಯಕ್ವಾಡ್ ಅವರು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆಯೇ ಮೊದಲು ಬ್ಯಾಟ್ ಬೀಸಿದ ಸಿಎಸ್‌ಕೆ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 180 ರನ್‌ಗಳನ್ನು ಕಲೆಹಾಕಿ ಎಸ್‌ಆರ್‌ಎಚ್‌ಗೆ 181 ರನ್‌ಗಳ ಸಾಧಾರಣ ಗುರಿ ನೀಡಿದೆ.

ಅಬ್ಬರಿಸಿದ ಡೆವಾಲ್ಡ್ ಬ್ರೆವಿಸ್
ಚೆನ್ನೈ ಸೂಪರ್ ಕಿಂಗ್ಸ್ ಪರ ಡೆವಾಲ್ಡ್ ಬ್ರೆವಿಸ್ 44 ರನ್ ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಕಾರ್ತಿಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಅಬ್ಬರದ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಸರೆಯಾದರು. ಸಿಎಸ್‌ಕೆ ನಾಯಕ ಋತುರಾಜ್ ಗಾಯಕ್ವಾಡ್ ಬ್ಯಾಟಿಂಗ್‌ನಲ್ಲಿ ಲಯ ಕಂಡುಕೊಳ್ಳಲು ಪರದಾಡಿದರು. ಸುಮಾರು 12 ಓವರ್‌ಗಳ ಕಾಲ ಕ್ರೀಸ್‌ನಲ್ಲಿದ್ದರೂ ಅವರು ಒಂದು ಬೌಂಡರಿಯನ್ನೂ ಬಾರಿಸಲು ಸಾಧ್ಯವಾಗಲಿಲ್ಲ.
ಮಿಂಚಿದ ಪ್ಯಾಟ್ ಕಮ್ಮಿನ್ಸ್
ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಮಾರಕ ಬೌಲಿಂಗ್ ದಾಳಿ ನಡೆಸಿ 3 ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು. ಉಳಿದಂತೆ ಸಾಕಿಬ್ ಹುಸೇನ್ 2 ವಿಕೆಟ್ ಕಿತ್ತರೆ, ಪ್ರಫುಲ್ ಹಿಂಗೆ ಹಾಗೂ ಇಶಾನ್ ಮಾಲಿಂಗ ತಲಾ ಒಂದು ವಿಕೆಟ್ ಪಡೆದುಕೊಂಡು ಸಿಎಸ್‌ಕೆ ತಂಡವನ್ನು 180 ರನ್‌ಗಳಿಗೆ ಕಟ್ಟಿಹಾಕಿದರು.
ಸಿಎಸ್‌ಕೆ ಪರ ಯಾರು ಎಷ್ಟು ರನ್ ಗಳಿಸಿದರು?
ಚೆನ್ನೈ ಸೂಪರ್ ಕಿಂಗ್ಸ್ ಪರ ಬ್ಯಾಟ್ ಬೀಸಿದ ಡೆವಾಲ್ಡ್ ಬ್ರೆವಿಸ್ ಸ್ಫೋಟಕ ಬ್ಯಾಟಿಂಗ್ ಆಡಿ 27 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್‌ಗಳ ಸಹಿತ 44 ರನ್ ಕಲೆಹಾಕಿದರು. ಉಳಿದಂತೆ ಸಂಜು ಸ್ಯಾಮ್ಸನ್ 27(23), ನಾಯಕ ಋತುರಾಜ್ ಗಾಯಕ್ವಾಡ್ 15(21), ಉರ್ವಿಲ್ ಪಟೇಲ್ 13(8), ಕಾರ್ತಿಕ್ ಶರ್ಮಾ 32(19), ಶಿವಂ ದುಬೆ 26(23), ಪ್ರಶಾಂತ್ ವೀರ್ 11(9) ರನ್‌ಗಳನ್ನು ಕಲೆಹಾಕಿದರು.
ಎಂಎಸ್ ಧೋನಿ ಅಭಿಮಾನಿಗಳಿಗೆ ನಿರಾಸೆ
ಪಂದ್ಯಕ್ಕೂ ಮುನ್ನವೇ ಸಿಎಸ್‌ಕೆ ದಿಗ್ಗಜ ಎಂ.ಎಸ್. ಧೋನಿ ಮತ್ತೊಮ್ಮೆ ಗಾಯಗೊಂಡ ಕಾರಣ ಈ ಪಂದ್ಯದಿಂದ ಹೊರಗುಳಿದಿರುವುದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಇನ್ನೂ ಪ್ಲೇ-ಆಫ್ ರೇಸ್‌ನಲ್ಲಿ ಜೀವಂತವಾಗಿರಲು ಸಿಎಸ್‌ಕೆ ತಂಡಕ್ಕೆ ಈ ಗೆಲುವು ಅತ್ಯಗತ್ಯವಾಗಿದೆ. ಮತ್ತೊಂದೆಡೆ ಸನ್ ರೈಸರ್ಸ್ ಹೈದರಾಬಾದ್ ಈ ಪಂದ್ಯವನ್ನು ಗೆದ್ದರೆ ಅಧಿಕೃತವಾಗಿ ಪ್ಲೇ-ಆಫ್ ಹಂತಕ್ಕೆ ಅರ್ಹತೆ ಪಡೆಯಲಿದೆ. 181 ರನ್‌ಗಳ ಗುರಿಯನ್ನು ಎಸ್‌ಆರ್‌ಹೆಚ್ ತಲುಪುತ್ತದೆಯೇ ಎಂಬುದನ್ನ ಕಾದುನೋಡಬೇಕಿದೆ.
ಸಿಎಸ್‌ಕೆ, ಎಸ್‌ಆರ್‌ಎಚ್ ಪ್ಲೇಯಿಂಗ್ 11
ಸಿಎಸ್‌ಕೆ ಪ್ಲೇಯಿಂಗ್ 11: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಋತುರಾಜ್ ಗಾಯಕ್ವಾಡ್ (ನಾಯಕ), ಉರ್ವಿಲ್ ಪಟೇಲ್, ಕಾರ್ತಿಕ್ ಶರ್ಮಾ, ಡೆವಾಲ್ಡ್ ಬ್ರೆವಿಸ್, ಶಿವಂ ದುಬೆ, ಪ್ರಶಾಂತ್ ವೀರ್, ಅಕೀಲ್ ಹೊಸೈನ್, ನೂರ್ ಅಹ್ಮದ್, ಅನ್ಶುಲ್ ಕಾಂಬೋಜ್, ಸ್ಪೆನ್ಸರ್ ಜಾನ್ಸನ್. ಇಂಪ್ಯಾಕ್ಟ್ ಪ್ಲೇಯರ್‌ಗಳು: ಮುಕೇಶ್ ಚೌಧರಿ, ಮ್ಯಾಥ್ಯೂ ಶಾರ್ಟ್, ಸರ್ಫರಾಜ್ ಖಾನ್, ಅಮನ್ ಖಾನ್, ಗುರ್ಜಪನೀತ್ ಸಿಂಗ್.
ಎಸ್‌ಆರ್‌ಎಚ್ ಪ್ಲೇಯಿಂಗ್ 11: ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಹೆನ್ರಿಚ್ ಕ್ಲಾಸೆನ್, ಸಲೀಲ್ ಅರೋರಾ, ರವಿಚಂದ್ರನ್ ಸ್ಮರಣ್, ನಿತೀಶ್ ಕುಮಾರ್ ರೆಡ್ಡಿ, ಪ್ಯಾಟ್ ಕಮ್ಮಿನ್ಸ್ (ನಾಯಕ), ಶಿವಾಂಗ್ ಕುಮಾರ್, ಇಶಾನ್ ಮಾಲಿಂಗ, ಸಾಕಿಬ್ ಹುಸೇನ್, ಪ್ರಫುಲ್ ಹಿಂಗೆ. ಇಂಪ್ಯಾಕ್ಟ್ ಪ್ಲೇಯರ್‌ಗಳು: ಟ್ರಾವಿಸ್ ಹೆಡ್, ಲಿಯಾಮ್ ಲಿವಿಂಗ್‌ಸ್ಟೋನ್, ಅನಿಕೇತ್ ವರ್ಮಾ, ಹರ್ಷಲ್ ಪಟೇಲ್, ಹರ್ಷ್ ದುಬೆ.












Click it and Unblock the Notifications