SBI Shares: ಚುನಾವಣಾ ಬಾಂಡ್ ಪ್ರಕರಣ: ಸುಪ್ರೀಂಕೋರ್ಟ್ ಛೀಮಾರಿ; ಎಸ್‌ಬಿಐ ಷೇರುಗಳ ಬೆಲೆ ಕುಸಿತ
ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ಬಹಿರಂಗಪಡಿಸಲು ಗಡುವನ್ನು ವಿಸ್ತರಿಸುವಂತೆ ಕೋರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ. ಸುಪ್ರೀಂ ಕೋರ್ಟ್‌ನ ತೀರ್ಪಿನ ನಂತರ, ಎಸ್‌ಬಿಐ ಷೇರುಗಳ ಕುಸಿತ ಕಂಡಿವೆ.
ಸುಪ್ರೀಂ ಕೋರ್ಟ್ ಎಸ್‌ಬಿಐ ಮಾಡಿದ್ದ ಮನವಿಯನ್ನು ವಜಾಗೊಳಿಸಿದ ನಂತರ ಎಸ್‌ಬಿಐ ಷೇರುಗಳು ಸುಮಾರು 2 ಪ್ರತಿಶತದಷ್ಟು ಕುಸಿತವನ್ನು ಕಂಡವು ಮತ್ತು ಮಾರ್ಚ್ 12 ರೊಳಗೆ ಚುನಾವಣಾ ಬಾಂಡ್‌ಗಳ ಮಾಹಿತಿಯನ್ನು ಪ್ರಸ್ತುತಪಡಿಸಲು ಬ್ಯಾಂಕ್‌ಗೆ ಕೋರ್ಟ್ ಆದೇಶ ನೀಡಿತು.

ಸೋಮವಾರ ಷೇರು ಮಾರುಕಟ್ಟೆ ಮುಕ್ತಾಯದ ವೇಳೆಗೆ ಎಸ್‌ಬಿಐ ಷೇರುಗಳು ₹14.10 ಕುಸಿತವನ್ನು ಅನುಭವಿಸಿವೆ. ಸೋಮವಾರ ಮಾರುಕಟ್ಟೆ ಆರಂಭದ ವೇಳೆಗೆ ₹791 ಇದ್ದ ಎಸ್‌ಬಿಐ ಷೇರು ಮೌಲ್ಯ ಕನಿಷ್ಠ ₹771ಕ್ಕೆ ಕುಸಿತ ಕಂಡಿತ್ತು, ಸಂಜೆ ವೇಳೆಗೆ ಅಲ್ಪ ಚೇತರಿಸಿಕೊಂಡ ಷೇರುಗಳು ₹774 ರಲ್ಲಿ ದಿನದ ವಹಿವಾಟನ್ನು ಅಂತ್ಯಗೊಳಿಸಿದೆ.
ಎಸ್‌ಬಿಐನ ಇಂಟ್ರಾಡೇ ಕನಿಷ್ಠ ಮೌಲ್ಯವು ₹771 ರಲ್ಲಿ ದಾಖಲಾಗಿದೆ, ಇದು ಹಿಂದಿನ ದಿನಕ್ಕಿಂತ 2 ಶೇಕಡಾ ಕಡಿಮೆಯಾಗಿದೆ. ಎಸ್‌ಬಿಐ ಷೇರುಗಳ ಕುಸಿತಕ್ಕೆ ಸುಪ್ರೀಂ ಕೋರ್ಟ್ ತೀರ್ಪು ಕಾರಣ ಎಂದು ತಜ್ಞರು ಹೇಳಿದ್ದಾರೆ.
ಎಸ್‌ಬಿಐ ಷೇರುಗಳ ಬೆಲೆಯಲ್ಲಿನ ಕುಸಿತವು ಪಿಎಸ್‌ಯು ಬ್ಯಾಂಕಿಂಗ್ ವಲಯದ ಮೇಲೆ ಶಾಶ್ವತ ಪರಿಣಾಮ ಬೀರಬಾರದು ಮತ್ತು ಮಧ್ಯಮ ಮತ್ತು ದೀರ್ಘಾವಧಿಯ ಹೂಡಿಕೆದಾರರಿಗೆ ಅವಕಾಶವಾಗಿ ಪರಿಗಣಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಸುಪ್ರೀಂ ಕೋರ್ಟ್ ಹೇಳಿದ್ದೇನು?
ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿಆರ್ ಗವಾಯಿ, ಜೆಬಿ ಪರ್ದಿವಾಲಾ, ಮನೋಜ್ ಮಿಶ್ರಾ ಅವರನ್ನೊಳಗೊಂಡ ಐದು ನ್ಯಾಯಾಧೀಶರ ಸಂವಿಧಾನ ಪೀಠವು ಸೋಮವಾರದಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಮಾರ್ಚ್‌ನಲ್ಲಿ 12ರಂದು ಬಹಿರಂಗಪಡಿಸುವಂತೆ ಆದೇಶಿಸಿದೆ.
ಜೂನ್ 30 ರವರೆಗೆ ಚುನಾವಣಾ ಬಾಂಡ್‌ಗಳ ಡೇಟಾವನ್ನು ಘೋಷಿಸಲು ಗಡುವನ್ನು ವಿಸ್ತರಿಸಲು ಎಸ್‌ಬಿಐ ಮಾಡಿದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಹಿಂದಿನ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಮಾರ್ಚ್ 6 ಕ್ಕೆ ಗಡುವನ್ನು ನಿಗದಿಪಡಿಸಿತ್ತು ಮತ್ತು ಇಸಿಐಗೆ ಮಾರ್ಚ್ 13ರಂದು ಅಂಕಿ ಅಂಶಗಳನ್ನು ಪ್ರಕಟಿಸಲು ಆದೇಶಿಸಿದೆ.
ಸೋಮವಾರ ಎಸ್‌ಬಿಐ ಅರ್ಜಿಯ ಆದೇಶವನ್ನು ಅಂಗೀಕರಿಸಿದ ಪೀಠ, "ಅರ್ಜಿಯಲ್ಲಿ ಎಸ್‌ಬಿಐ ಸಲ್ಲಿಸಿದ ಮಾಹಿತಿಯು ಕೋರಿದ ಮಾಹಿತಿಯು ಸುಲಭವಾಗಿ ಲಭ್ಯವಿದೆ ಎಂದು ಸೂಚಿಸುತ್ತದೆ. ಹೀಗಾಗಿ, ಜೂನ್ 30 ರವರೆಗೆ ಕಾಲಾವಕಾಶವನ್ನು ಕೋರಿ ಎಸ್‌ಬಿಐ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಲಾಗಿದೆ. ಮಾರ್ಚ್ 12, 2024 ರ ಕೆಲಸದ ಸಮಯದ ಮುಕ್ತಾಯದ ವೇಳೆಗೆ ಎಸ್‌ಬಿಐಗೆ ವಿವರಗಳನ್ನು ಬಹಿರಂಗಪಡಿಸಲು ಸೂಚಿಸಲಾಗಿದೆ. " ಎಂದು ಆದೇಶ ನೀಡಿದೆ.
ಇತ್ತೀಚಿನ ನಿರ್ದೇಶನಗಳನ್ನು ಅನುಸರಿಸದಿದ್ದಲ್ಲಿ ಉದ್ದೇಶಪೂರ್ವಕವಾಗಿ ತನ್ನ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ಸಂವಿಧಾನದ ಪೀಠವು ಎಸ್‌ಬಿಐ ವಿರುದ್ಧ ನ್ಯಾಯಾಲಯದ ನಿಂದನೆ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದೆ.
"ನಾವು ನ್ಯಾಯಾಂಗ ನಿಂದನೆಯ ಅಧಿಕಾರವನ್ನು ಚಲಾಯಿಸುತ್ತಿಲ್ಲವಾದರೂ, ಈ ಆದೇಶದಲ್ಲಿ ಸೂಚಿಸಲಾದ ಸಮಯಾವಧಿಯನ್ನು ಅನುಸರಿಸದಿದ್ದಲ್ಲಿ ಈ ನ್ಯಾಯಾಲಯವು ಉದ್ದೇಶಪೂರ್ವಕ ಅಸಹಕಾರಕ್ಕಾಗಿ ಅದರ ವಿರುದ್ಧ ಮುಂದುವರಿಯುತ್ತದೆ ಎಂದು ನಾವು ಎಸ್‌ಬಿಐಗೆ ಸೂಚನೆ ನೀಡುತ್ತೇವೆ" ಎಂದು ಪೀಠವು ಆದೇಶಿಸಿದೆ.












Click it and Unblock the Notifications