ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್: ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಸಾಧ್ಯತೆ

By Manjunatha
|
Google Oneindia Kannada News

ನವದೆಹಲಿ, ಫೆಬ್ರವರಿ 01: ಕೇಂದ್ರ ಹಣಕಾಸು ಮಂತ್ರಿ ಅರುಣ್ ಜೇಟ್ಲಿ ಅವರು ಇಂದು ಮಂಡಿಸಿದ ಬಜೆಟ್‌ ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ನ ಮೇಲಿನ ಅಬಕಾರಿ ಸುಂಕ ತಗ್ಗಿಸಿರುವ ಕಾರಣ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 2 ರೂಪಾಯಿ ಕಡಿಮೆ ಆಗುವ ಸಾಧ್ಯತೆ ಇದೆ.

Fuel price is to cut by 2 rupees

ಬಜೆಟ್‌ನಲ್ಲಿ ಬ್ರಾಂಡೆಡ್‌ ಮತ್ತು ಬ್ರಾಂಡ್‌ ರಹಿತ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಅಬಕಾರಿ ಸುಂಕವನ್ನು ಕಡಿಮೆಗೊಳಿಸಿದೆ. ಕಳೆದ ವರ್ಷದ ಅಕ್ಟೋಬರ್‌ ನಲ್ಲಿ ಅಬಕಾರಿ ಸುಂಕವನ್ನು ಕಡಿಮೆ ಮಾಡಲಾಗಿತ್ತು.

ಪ್ರಸ್ತುತ ಕಚ್ಚಾ ತೈಲದ ಅಂತರರಾಷ್ಟ್ರೀಯ ಬೆಲೆ, ಬ್ಯಾರೆಲ್ ಒಂದಕ್ಕೆ 67 ಡಾಲರ್ ಇದ್ದು ಇನ್ನೆರಡು ವಾರಗಳಲ್ಲಿ ಇದು 70 ಡಾಲರ್ ಆಗಲಿದೆ. ಕಚ್ಚಾ ತೈಲ ತಜ್ಞರ ಪ್ರಕಾರ ತೈಲ ಬೆಲೆಯು ಇನ್ನೂ ಹಲವು ತಿಂಗಳುಗಳ ಕಾಲ ಏರುಗತಿಯಲ್ಲೇ ಇರಲಿದ್ದು, ಬ್ಯಾರೆಲ್‌ ಒಂದಕ್ಕೆ 100 ಡಾಲರ್‌ ದಾಟಲಿದೆ.

ಕಳೆದ ಒಂದು ವರ್ಷದಿಂದ ಇಳಿಕೆ ಕಂಡಿದ್ದ ಕಚ್ಚಾ ತೈಲ ಬೆಲೆ ಈಗ ಏರಿಕೆ ಕಾಣುತ್ತಿದೆ. ಕಚ್ಚಾ ತೈಲ ಬೆಲೆ ಇಳಿಕೆಯಲ್ಲಿದ್ದಾಗ ಸರ್ಕಾರವು ಅಬಕಾರಿ ಸುಂಕವನ್ನು ಪೆಟ್ರೋಲ್‌ ಮೇಲೆ ಲೀಟರ್‌ಗೆ 12 ರೂಪಾಯಿ ಮತ್ತು ಡೀಸೆಲ್‌ ಮೇಲೆ 13.77 ಹೆಚ್ಚಿಸಿತ್ತು. ಹಣಕಾಸು ಇಳಿಜಾರು ತಪ್ಪಿಸಲೆಂದು ಕಚ್ಚಾ ತೈಲ ಬೆಲೆ ಕಡಿಮೆ ಇದ್ದರೂ ಸಹಿತ ಅಬಕಾರಿ ಸುಂಕ ಹೆಚ್ಚಿಸುವ ಮೂಲಕ ಸಮತೋಲನ ಕಾಯ್ದುಕೊಳ್ಳುವಂತೆ ಮಾಡಲಾಗಿತ್ತು.

ಇದೀಗ ಕಚ್ಚಾ ತೈಲ ಬೆಲೆ ಹೆಚ್ಚಿದ್ದು ಅಬಕಾರಿ ಸುಂಕವನ್ನು ಸರ್ಕಾರ ಕಡಿಮೆ ಗೊಳಿಸಿ ಮಧ್ಯಮ ವರ್ಗದ ಮೇಲೆ ಬೀಳುತ್ತಿರುವ ಹೊರೆ ತಪ್ಪಿಸಲು ಹೆಣಗಾಡುತ್ತಿದೆ.

ಇಂಧನವನ್ನು ಜಿಎಸ್‌ಟಿ ಅಧೀನಕ್ಕೆ ತರುವಂತೆ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಬಹು ಕಾಲದಿಂದ ಒತ್ತಾಯ ಮಾಡುತ್ತಿದ್ದು, ಜಿಎಸ್‌ಟಿ ಕೌನ್ಸಿಲ್‌ ಈ ಬಗ್ಗೆ ಮುಂದಿನ ತನ್ನ ಸಭೆಗಳಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದೆ. ಪೆಟ್ರೋಲ್ ಮತ್ತು ಡೀಸೆಲ್‌ಗಳು ಜಿಎಸ್‌ಟಿ ಅಧೀನಕ್ಕೆ ಬಂದರೆ ಅವುಗಳ ಈಗಿನ ಬೆಲೆಗಿಂತ ಶೇ40 ಪ್ರತಿಶತ ಕಡಿಮೆ ಬೆಲೆಗೆ ದೊರಕುತ್ತವೆ.

English summary
In Union Budget 2018-19 Finance Minister Arun Jaitley announced an excise duty cut on petrol and diesel by Rs 2 per litre.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X