ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಸ್ ಎಂದರೇನು? ಸರ್ ಚಾರ್ಜ್ ವಿಧಿಸುವುದು ಏಕೆ?

By ನ್ಯೂಸ್ ಡೆಸ್ಕ್
|
Google Oneindia Kannada News

ಸೇವಾ ಆಧಾರಿತ ಕ್ಷೇತ್ರಗಳ ಮೇಲೆ ವಿಧಿಸಲಾಗುವ ಸೇವಾ ತೆರಿಗೆ ಜೊತೆಗೆ ವಿತ್ತ ಕಾಯ್ದೆ 2015ರ ನಾಲ್ಕನೇ ಅಧ್ಯಾಯದ ಪ್ರಕಾರ ಹೆಚ್ಚುವರಿಯಾಗಿ ಮೇಲ್ತೆರಿಗೆ ವಿಧಿಸುವ ಪ್ರಕ್ರಿಯೆ ಬಜೆಟ್ ನಿಂದ ಬಜೆಟ್ ಗೆ ಮುಂದುವರೆಯುತ್ತಲೇ ಇದೆ. ಜಿಎಸ್ ಟಿ ಜಾರಿಯಾದ ಬಳಿಕವೂ ಸೆಸ್, ಸರ್ ಚಾರ್ಜ್ ಹೇಗೆ ಹಾಕಲಾಗುತ್ತಿದೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ತೆರಿಗೆ ವಿನಾಯತಿ ಪಡೆದ ಅಥವಾ ಸೇವಾ ತೆರಿಗೆ ಒಳಪಡದ ಕ್ಷೇತ್ರಗಳಲ್ಲಿ ಮಾತ್ರ ಈ ಹೆಚ್ಚುವರಿ ಸೆಸ್ ನಿಂದ ವಿನಾಯತಿ ಸಿಗಲಿದೆ. ಇದೇ ರೀತಿ, ಜಿಎಸ್ ಟಿಗೆ ಒಳಪಡದ ಕ್ಷೇತ್ರಗಳ ಮೇಲೆ ಸೆಸ್, ಸರ್ ಚಾರ್ಜ್ ವಿಧಿಸಬಹುದಾಗಿದೆ. ಉದಾಹರಣೆ, ಪೆಟ್ರೋಲ್ ಉತ್ಪನ್ನಗಳು, ಆದಾಯ ತೆರಿಗೆ ಇತ್ಯಾದಿ.

Union Budget 2018: What is Surcharge? What is Cess?

ಮೇಲ್ತೆರಿಗೆಯಿಂದಾಗಿ ಸಂಗ್ರಹವಾಗುವ ಆದಾಯವು ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯಾದ ಸ್ವಚ್ಛ ಭಾರತ ಅಭಿಯಾನಕ್ಕೆ ಆರ್ಥಿಕ ನಿಧಿಯಾಗಿ ಬಳಸಿಕೊಳ್ಳಲಾಗುವುದು.

ಉದಾಹರಣೆಗೆ: ತೆರಿಗೆ ಕಟ್ಟಬೇಕಾದ ಸೇವೆಗಳ ಮೇಲೆ ಸ್ವಚ್ಛ ಭಾರತ ಯೋಜನೆಯ ಅಂಗವಾಗಿ ಶೇ.0.5 ಮೇಲ್ತೆರಿಗೆ (ಸೆಸ್) ಯನ್ನು ಕೇಂದ್ರ ಸರಕಾರ ವಿಧಿಸಲಾಗಿತ್ತು. ಇದರಿಂದ ಸಂಗ್ರಹವಾದ ಮೊತ್ತವನ್ನು ಆ ಯೋಜನೆಗೆ ಬಳಸಲಾಯಿತು.

ಆದಾಯದಲ್ಲಿ ವ್ಯತ್ಯಾಸ ಕಂಡು ಬಂದಿರುವುದರಿಂದ ಸೇವಾ ತೆರಿಗೆ ಹೆಚ್ಚಳ ಅನಿವಾರ್ಯ ಎಂದು ಜೇಟ್ಲಿ ಅವರು ತೆರಿಗೆ ವಿಧಿಸುವ ಹೇಳುವ ಕಾಮನ್ ಡೈಲಾಗ್.

ಜೇಟ್ಲಿ ಬಜೆಟ್ ನಂತರ ತೆರಿಗೆ ಲೆಕ್ಕಾಚಾರ ಮಾಡುವುದು ಹೇಗೆಜೇಟ್ಲಿ ಬಜೆಟ್ ನಂತರ ತೆರಿಗೆ ಲೆಕ್ಕಾಚಾರ ಮಾಡುವುದು ಹೇಗೆ

ಸೇವಾ ತೆರಿಗೆಯನ್ನು ಶೇ 12ರಿಂದ ಶೇ 14ರಷ್ಟು ಹೆಚ್ಚಳ ಮಾಡಲಾಯಿತು. ನಂತರ. ಜಿಎಸ್ ಟಿ ಬಂದಿತು. ಜಿಎಸ್ ಟಿ ಈಗ ಶೇ 5 ರಿಂದ 28ರಷ್ಟು ನಷ್ಟಿದೆ.

ಸರ್ ಚಾರ್ಜ್ ಎಂದರೇನು? : ಇದು ಕೂಡಾ ಹೆಚ್ಚುವರಿ ತೆರಿಗೆಯಾಗಿದ್ದು, ಪ್ರಗತಿ ಪರ ತೆರಿಗೆ ವ್ಯವಸ್ಥೆ ಹೊಂದಿರುವ ಭಾರತದಲ್ಲಿ ಬಳಕೆಯಲ್ಲಿದೆ. ಹೆಚ್ಚುವರಿ ಆದಾಯ ಹೊಂದಿರುವವರು ಹೆಚ್ಚುವರಿಯಾಗಿ ತೆರಿಗೆ ಪಾವತಿಸುವುದನ್ನು ಇದು ಪ್ರೋತ್ಸಾಹಿಸುತ್ತದೆ.

English summary
Surcharge is an additional tax charged over taxable income. Surcharge is a part of the progressive tax system followed in India. Cess or health and education cess is an additional tax deduction on taxable income.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X