Weekly Horoscope:ಈ ರಾಶಿಯವರಿಗೆ ರಾಜಯೋಗ, ಹೆಚ್ಚುವುದು ಅದೃಷ್ಟ, ಹಣಕಾಸಿನ ಲಾಭ, 12 ರಾಶಿಗಳ ವಾರ ಭವಿಷ್ಯ

Weekly Horoscope 1st June to 7 June: ಜ್ಯೋತಿಷ್ಯದ ಪ್ರಕಾರ, ಜೂನ್ ತಿಂಗಳು ಹಲವರ ಜೀವನದಲ್ಲಿ ಮಹತ್ವದ ತಿರುವು ನೀಡುತ್ತಿದೆ. ಜ್ಯೋತಿಷ್ಯದ ಪ್ರಕಾರ, ಈ ವಾರ ಹಲವರಿಗೆ ಪ್ರಗತಿಪರವಾಗಿರುತ್ತದೆ. ಈ ವಾರ ಗ್ರಹಗಳ ಸ್ಥಾನದ ಪ್ರಭಾವದಿಂದಾಗಿ, ಕೆಲವು ರಾಶಿಯವರಿಗೆ ವೃತ್ತಿಜೀವನದಲ್ಲಿ ಪ್ರಗತಿಯಾಗುವುದು. ಜೂನ್ ತಿಂಗಳ ಹೊಸ ವಾರ ಮೇಷದಿಂದ ಮೀನ ರಾಶಿಯವರೆಗಿನವರಿಗೆ ಹೇಗಿರುತ್ತದೆ ಎಂದು ನೋಡುವುದಾದರೆ....

ಮೇಷ ರಾಶಿ:

ಈ ವಾರ ಕಠಿಣ ಪರಿಶ್ರಮಕ್ಕೆ ಫಲ ಸಿಗುವು ಗಮನಕ್ಕೆ ಬರುತ್ತದೆ. ಹೊಸ ಜವಾಬ್ದಾರಿಗಳು ಸಿಗಬಹುದು. ಆರ್ಥಿಕವಾಗಿ ಈ ವಾರ ನಿಮಗೆ ಲಾಭವಾಗುವುದು.ಹೊರಗೆ ಉಳಿದಿರುವ ಹಣ ಮರಳಿ ಕೈ ಸೇರುವುದು. ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ.ಆರೋಗ್ಯದತ್ತ ಗಮನ ಇರಲಿ. ಈ ವಾರ ವಿಶೇಷವಾಗಿ ತಲೆನೋವು ಕಾಡಬಹುದು.

Weekly Horoscope

ವೃಷಭ ರಾಶಿ:

ವೃಷಭ ರಾಶಿಯವರು ಈ ವಾರ ವೃತ್ತಿಜೀವನದಲ್ಲಿ ಸ್ಥಿರತೆಯನ್ನು ಕಂಡುಕೊಳ್ಳಬಹುದು. ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಆತುರಪಡಬೇಡಿ. ವ್ಯವಹಾರದಲ್ಲಿ ಹೊಸ ಅವಕಾಶಗಳು ಉದ್ಭವಿಸಬಹುದು.ವೆಚ್ಚಗಳು ಹೆಚ್ಚಾಗುವುದು. ಸಂಬಂಧಿಕರೊಂದಿಗಿನ ಹಳೆಯ ಭಿನ್ನಾಭಿಪ್ರಾಯಗಳು ಬಗೆಹರಿಯುತ್ತವೆ. ಸಂಗಾತಿಯೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ.

ಮಿಥುನ ರಾಶಿ:

ಈ ವಾರ ಮಿಥುನ ರಾಶಿಯವರಿಗೆ ರೋಮಾಂಚಕಾರಿಯಾಗಿರುತ್ತದೆ. ಹೊಸಬರ ಭೇಟಿಯಿಂದ ಪ್ರಯೋಜನವಾಗುವುದು.ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರವಾಗಿದೆ. ಆರ್ಥಿಕ ಲಾಭದ ಸಾಧ್ಯತೆಗಳಿವೆ. ಪ್ರೇಮ ಜೀವನದಲ್ಲಿ ಸಂತೋಷ ಕಾಣುವಿರಿ.

ಕರ್ಕಾಟಕ ರಾಶಿ:

ಈ ವಾರ ಕಟಕ ರಾಶಿಯವರ ಕೆಲಸದ ಹೊರೆ ಹೆಚ್ಚಾಗಬಹುದು. ತಾಳ್ಮೆಯಿಂದಿದ್ದರೆ ಯಶಸ್ಸು ಸಿಗುತ್ತದೆ. ಮನೆಯಲ್ಲಿ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು. ಹಣಕಾಸಿನ ವಿಷಯದಲ್ಲಿ ಜಾಗರೂಕರಾಗಿರಿ. ಉತ್ತಮ ಆರೋಗ್ಯಕ್ಕೆ ಸರಿಯಾದ ಆಹಾರ ಮತ್ತು ನಿದ್ರೆ ಅತ್ಯಗತ್ಯ.

ಸಿಂಹ ರಾಶಿ:

ಈ ವಾರ ಸಿಂಹ ರಾಶಿಯವರಿಗೆ ಅದೃಷ್ಟದ ಬೆಂಬಲ ಇರುವುದು. ಎದುರಾಗಿರುವ ಅಡೆತಡೆಗಳು ದೂರವಾಗುವುದು. ಕೆಲಸ ಕಾರ್ಯಗಳಲ್ಲಿ ಪ್ರಗತಿಯಾಗುವುದು. ನಿಮ್ಮ ಕೆಲಸಕ್ಕೆ ಮೇಲಾಧಿಕಾರಿಗಳಿಂದ ಮೆಚ್ಚುಗೆ ಸಿಗುವುದು. ಪ್ರೇಮ ಸಂಬಂಧಗಳು ಬಲಗೊಳ್ಳುತ್ತವೆ. ಸ್ನೇಹಿತರ ಸಹಾಯದಿಂದ ಒಂದು ಪ್ರಮುಖ ಕೆಲಸ ಪೂರ್ಣಗೊಳ್ಳುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.

ಕನ್ಯಾ ರಾಶಿ:

ಈ ವಾರ ಕನ್ಯಾ ರಾಶಿಯವರು ತಾಳ್ಮೆಯಿಂದಿರುವುದು ಮುಖ್ಯ. ಕೆಲಸದ ಮೇಲೆ ಹೆಚ್ಚು ಗಮನ ಹರಿಸುವುದು ಪ್ರಯೋಜನಕಾರಿಯಾಗಿರುವುದು.ಕುಟುಂಬದ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಹೂಡಿಕೆ ಮಾಡಲು ಸಮಯ ಮಧ್ಯಮವಾಗಿರುತ್ತದೆ. ಸಣ್ಣ ವಿಷಯಗಳಿಗೆ ನಿಮ್ಮ ಸಂಗಾತಿಯೊಂದಿಗೆ ವಾದಗಳು ಉಂಟಾಗಬಹುದು.

ತುಲಾ ರಾಶಿ:

ಈ ವಾರ ತುಲಾ ರಾಶಿಯವರಿಗೆ ಹೊಸ ಯೋಜನೆಗಳನ್ನು ಪ್ರಾರಂಭಿಸಲು ಉತ್ತಮ ಸಮಯ. ವ್ಯವಹಾರದಲ್ಲಿ ಪ್ರಗತಿ ಕಂಡುಬರುತ್ತದೆ. ಉದ್ಯೋಗಗಳನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿರುವವರಿಗೆ ಉತ್ತಮ ಅವಕಾಶಗಳು ಸಿಗಬಹುದು. ಪ್ರೇಮ ಜೀವನ ಉತ್ತಮವಾಗಿರುವುದು. ಸಾಮಾಜಿಕ ಕ್ಷೇತ್ರದಲ್ಲಿ ಗೌರವ ಹೆಚ್ಚಾಗುತ್ತದೆ.

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿಯವರಿಗೆ ಕಠಿಣ ಪರಿಶ್ರಮದ ಫಲ ಸಿಗುವುದು. ಆರ್ಥಿಕ ಲಾಭವಾಗುವ ಸಾಧ್ಯತೆಗಳಿವೆ. ಕೆಲವು ಪ್ರಮುಖ ಜನರನ್ನು ಭೇಟಿಯಾಗಬಹುದು. ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ. ಆರೋಗ್ಯದ ಬಗ್ಗೆ ನೋಡುವುದಾದರೆ ಜೀರ್ಣಕ್ರಿಯೆಯ ಸಮಸ್ಯೆಗಳಾಗುವ ಸಾಧ್ಯತೆ ಇದೆ.

ಧನು ರಾಶಿ:

ಈ ವಾರ ಧನು ರಾಶಿಯವರಿಗೆ ಅದೃಷ್ಟ ಒಲಿಯುವುದು. ಕಠಿಣ ಪರಿಶ್ರಮವೂ ಪಡಬೇಕಾಗುತ್ತದೆ. ವೃತ್ತಿಜೀವನ ಹೊಸ ದಿಕ್ಕಿನತ್ತ ಸಾಗಬಹುದು. ವಿದೇಶಗಳಿಗೆ ಸಂಬಂಧಿಸಿದ ಕೆಲಸದಲ್ಲಿ ಯಶಸ್ಸು ಸಿಗುವುದು. ಪ್ರೇಮ ಸಂಬಂಧಗಳು ಬಲಗೊಳ್ಳುತ್ತವೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ.

ಮಕರ ರಾಶಿ:

ಈ ವಾರ ಮಕರ ರಾಶಿಯವರು ಹಣಕಾಸಿನ ವ್ಯವಹಾರಗಳಲ್ಲಿ ಜಾಗರೂಕರಾಗಿರಬೇಕು. ಕೆಲಸ ಕಾರ್ಯಗಳಲ್ಲಿ ಕೆಲವು ಅಡೆತಡೆಗಳು ಉಂಟಾಗಬಹುದು. ತಾಳ್ಮೆಯಿಂದ ಇದ್ದರೆ ಸಮಸ್ಯೆಗಳಿಗೆ ಪರಿಹಾರವೂ ಸಿಗುವುದು. ಕುಟುಂಬದ ಹಿರಿಯರ ಸಲಹೆಯಿಂದ ಪ್ರಯೋಜನವಾಗಲಿದೆ. ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸಿ.

ಕುಂಭ ರಾಶಿ:

ಹೊಸ ಸಂಪರ್ಕಗಳು ಮತ್ತು ಪರಿಚಯದಿಂದ ವೃತ್ತಿಜೀವನದಲ್ಲಿ ಪ್ರಯೋಜನವಾಗುವುದು. ವ್ಯಾಪಾರ ವ್ಯವಹಾರ ವಿಸ್ತರಣೆಯಾಗುವುದು. ಪ್ರೇಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳಾಗುವುದು. ಸ್ನೇಹಿತರೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುವಿರಿ.

ಮೀನ ರಾಶಿ:

ಕೆಲಸದಲ್ಲಿ ನಿರೀಕ್ಷಿತ ಯಶಸ್ಸನ್ನು ಪಡೆಯುವಿರಿ. ಆರ್ಥಿಕ ಪರಿಸ್ಥಿತಿ ಬಲವಾಗಿರುತ್ತದೆ. ಕುಟುಂಬ ವಾತಾವರಣವು ಸಂತೋಷವಾಗಿರುತ್ತದೆ. ಆಧ್ಯಾತ್ಮಿಕ ವಿಷಯಗಳ ಕಡೆಗೆ ಒಲವು ಹೆಚ್ಚಾಗುತ್ತದೆ. ಆರೋಗ್ಯವು ಉತ್ತಮವಾಗಿರುತ್ತದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+