ಸಿನಿಮಾ ಪ್ರಿಯರಿಗೆ ಸುವರ್ಣಾವಕಾಶ: ಊಟ, ವಸತಿಯೊಂದಿಗೆ 6 ತಿಂಗಳ ಉಚಿತ ಫಿಲ್ಮ್ ಮೇಕಿಂಗ್ ಕೋರ್ಸ್‌ಗೆ ಅರ್ಜಿ ಆಹ್ವಾನ

ಸಿನಿಮಾ ರಂಗದಲ್ಲಿ ಸಾಧನೆ ಮಾಡಬೇಕು, ಉತ್ತಮ ನಿರ್ದೇಶಕ, ಎಡಿಟರ್ ಅಥವಾ ಯೂಟ್ಯೂಬರ್ ಆಗಬೇಕು ಎಂದು ಕನಸು ಕಾಣುತ್ತಿರುವ ಯುವಜನರಿಗೆ ಇಲ್ಲೊಂದು ಅದ್ಭುತ ಅವಕಾಶ ಒದಗಿಬಂದಿದೆ. ಆರ್ಥಿಕ ಸಮಸ್ಯೆಯಿಂದಾಗಿ ದುಬಾರಿ ಫಿಲ್ಮ್ ಮೇಕಿಂಗ್ ಕೋರ್ಸ್ ಸೇರಲು ಸಾಧ್ಯವಾಗದ ಪ್ರತಿಭಾವಂತ ಯುವಜನರಿಗೆ ನೆರವಾಗುವ ಉದ್ದೇಶದಿಂದ, ಬೆಂಗಳೂರಿನ 'ಸಂವಾದ ಬದುಕು - ಸೆಂಟರ್ ಫಾರ್ ಲೈವ್ಲಿಹುಡ್ಸ್ ಲರ್ನಿಂಗ್' ಸಂಸ್ಥೆಯು ಆರು ತಿಂಗಳ ಉಚಿತ ಫಿಲ್ಮ್ ಮೇಕಿಂಗ್ ಕೋರ್ಸ್ ಆಯೋಜಿಸಿದೆ.

ಸಿನಿಮಾ, ಡಾಕ್ಯುಮೆಂಟರಿ, ವೆಬ್‌ ಸೀರೀಸ್‌, ಯೂಟ್ಯೂಬ್‌ ವಿಷಯ ನಿರ್ಮಾಣ ಮತ್ತು ದೃಶ್ಯ ಮಾಧ್ಯಮ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಯುವಕ-ಯುವತಿಯರಿಂದ ಇದೀಗ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಾರ್ಯಕ್ರಮ ನಿರ್ದೇಶಕರಾದ ಡಾ. ಮುರಳಿ ಮೋಹನ್ ಕಾಟಿ ತಿಳಿಸಿದ್ದಾರೆ.

Samvada Baduku

ಫಿಲ್ಮ್ ಮೇಕಿಂಗ್ ಕೋರ್ಸ್‌ನಲ್ಲಿ ಏನೇನಿದೆ?

ಈ ಆರು ತಿಂಗಳ ವಿಶೇಷ ತರಬೇತಿ ಶಿಬಿರದಲ್ಲಿ ಸಿನಿಮಾ ಮತ್ತು ದೃಶ್ಯಮಾಧ್ಯಮ ಕ್ಷೇತ್ರದ ವಿವಿಧ ಆಯಾಮಗಳ ಕುರಿತು ಕೇವಲ ಸೈದ್ಧಾಂತಿಕ ಮಾತ್ರವಲ್ಲದೆ, ಪ್ರಾಯೋಗಿಕ ತರಬೇತಿಯನ್ನೂ ನೀಡಲಾಗುತ್ತದೆ. ಪ್ರಮುಖವಾಗಿ ಸಿನಿಮಾ ನಿರ್ಮಾಣಕ್ಕೆ ಅಗತ್ಯವಾದ ಸಿನಿಮಾ ಭಾಷೆ, ಸ್ಕ್ರೀನ್‌ ರೈಟಿಂಗ್‌ , ಡೈರೆಕ್ಷನ್‌, ಕಂಪ್ಯೂಟರ್ ಎಡಿಟಿಂಗ್‌, ಗ್ರಾಫಿಕ್ ಡಿಸೈನಿಂಗ್‌, ವಿಡಿಯೋ ಎಡಿಟಿಂಗ್‌, ಕ್ಯಾಮೆರಾ ನಿರ್ವಹಣೆ, ಲೈಟಿಂಗ್‌, ಸೌಂಡ್ ಡಿಸೈನ್‌, ಪೋಸ್ಟ್ ಪ್ರೊಡಕ್ಷನ್ ಮತ್ತು ಫಿಲ್ಮ್ ಮಾರ್ಕೆಟಿಂಗ್‌ನಂತಹ ಅತ್ಯಂತ ಪ್ರಮುಖ ವಿಷಯಗಳಲ್ಲಿ ಪರಿಣಿತರಿಂದ ತರಬೇತಿ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಯಾರು ಅರ್ಹರು?

ಈ ಕೋರ್ಸ್‌ಗೆ ಸಿನಿಮಾ, ದೃಶ್ಯ ಮಾಧ್ಯಮ, ಯೂಟ್ಯೂಬ್‌, ಡಾಕ್ಯುಮೆಂಟರಿ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಕನಿಷ್ಠ ಪದವಿ, ಸ್ನಾತಕೋತ್ತರ, ಅಥವಾ ವೃತ್ತಿಪರ ಶಿಕ್ಷಣ ಪಡೆದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಗ್ರಾಮೀಣ ಭಾಗದ ಹಾಗೂ ಹಿಂದುಳಿದ ಹಿನ್ನೆಲೆಯಿಂದ ಬಂದ ಯುವಜನರಿಗೆ ಪ್ರವೇಶಾತಿಯಲ್ಲಿ ವಿಶೇಷ ಆದ್ಯತೆ ನೀಡಲಾಗುತ್ತದೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ಕೋರ್ಸ್ ಮುಗಿಯುವವರೆಗೆ ಉಚಿತ ಆಹಾರ ಮತ್ತು ವಸತಿ ವ್ಯವಸ್ಥೆಯನ್ನು ಸಂಸ್ಥೆಯೇ ಕಲ್ಪಿಸಲಿದೆ. ಜೊತೆಗೆ ಸಿನಿಮಾ ಉದ್ಯಮದ ಪರಿಣಿತ ನಿರ್ದೇಶಕರು, ಪ್ರಖ್ಯಾತ ಬರಹಗಾರರು ಮತ್ತು ತಾಂತ್ರಿಕ ತಜ್ಞರೊಂದಿಗೆ ನೇರ ಸಂವಾದ ಹಾಗೂ ಮಾರ್ಗದರ್ಶನ ಪಡೆಯುವ ಸುವರ್ಣಾವಕಾಶವೂ ಲಭ್ಯವಿರುತ್ತದೆ. ತರಬೇತಿ ಮುಗಿದ ಬಳಿಕ ಉದ್ಯಮ ಸಂಬಂಧಿತ ಕ್ಷೇತ್ರಗಳಲ್ಲಿ ಇಂಟರ್ನ್‌ಶಿಪ್‌ ಅವಕಾಶಗಳೂ ದೊರೆಯಲಿವೆ.

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ತಮ್ಮ ಆಸಕ್ತಿ ಹಾಗೂ ಈವರೆಗಿನ ಅನುಭವದ ಬಗ್ಗೆ ಕನಿಷ್ಠ 300 ರಿಂದ 500 ಪದಗಳಲ್ಲಿ ಬರೆದು ಗೂಗಲ್‌ ಫಾರ್ಮ್ ಮೂಲಕ ಅರ್ಜಿ ಸಲ್ಲಿಸಬೇಕಿರುತ್ತದೆ. ಕೋರ್ಸ್‌ ಜೂನ್ 25ರಿಂದ ಆರಂಭವಾಗಲಿದ್ದು, ತಕ್ಷಣವೇ ಅರ್ಜಿ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ಸಂಪರ್ಕ ಸಂಖ್ಯೆಗಳಾದ 99720 89471 ಅಥವಾ 99450 65060 ಗೆ ಕರೆ ಮಾಡಬಹುದು. ಅಲ್ಲದೆ, [email protected] ಇಮೇಲ್ ವಿಳಾಸಕ್ಕೂ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು. ತಡಮಾಡದೇ ಇಂದೇ ಅರ್ಜಿ ಸಲ್ಲಿಸಿ , ನಿಮ್ಮ ಕನಸನ್ನು ನನಸು ಮಾಡಿಕೊಳ್ಳಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+