ನಿಮ್ಮ ಮನೆ ಬಾಗಿಲಿಗೇ ಬರಲಿವೆ ತಾಜಾ ಹಣ್ಣು, ತರಕಾರಿ: ಹಾಪ್‌ಕಾಮ್ಸ್‌ ಹೊರತಂದಿದೆ ರೈತರ ಅಂಚೆ ಯೋಜನೆ

ಬೆಂಗಳೂರು: ನಗರದ ನಿವಾಸಿಗಳಿಗೆ ನಿಗದಿತ ದರದಲ್ಲಿ ತಾಜಾ ಹಣ್ಣು ಮತ್ತು ತರಕಾರಿಗಳನ್ನು ತಲುಪಿಸುತ್ತಾ, ಕಳೆದ 67 ವರ್ಷಗಳಿಂದ ರೈತರು ಹಾಗೂ ಗ್ರಾಹಕರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿರುವ ಹಾಪ್‌ಕಾಮ್ಸ್ (HOPCOMS) ಸಂಸ್ಥೆಯು ಈಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನ ಎಲ್ಲಾ ಬಡಾವಣೆಗಳಿಗೂ ತನ್ನ ಸೇವೆಯನ್ನು ವಿಸ್ತರಿಸುವ ಉದ್ದೇಶದಿಂದ, ಭಾರತೀಯ ಅಂಚೆ ಇಲಾಖೆಯ ಸಹಯೋಗದೊಂದಿಗೆ ಹಾಪ್‌ಕಾಮ್ಸ್ ಒಕ್ಕೂಟವು "ರೈತರ ಅಂಚೆ" ಎಂಬ ವಿನೂತನ ಆನ್‌ಲೈನ್ ಮಾರಾಟ ಜಾಲ ವಿಸ್ತರಣಾ ಯೋಜನೆಯನ್ನು ಪರಿಚಯಿಸುತ್ತಿದೆ.

ಈ ವಿಶೇಷ ಯೋಜನೆಯ ಅಧಿಕೃತ ಉದ್ಘಾಟನಾ ಕಾರ್ಯಕ್ರಮವು ನಾಳೆ (ಮೇ 30) ಮಧ್ಯಾಹ್ನ 11 ಗಂಟೆಗೆ ಬೆಂಗಳೂರಿನ ರಾಜಭವನ ರಸ್ತೆಯ ಜಿಪಿಒ ಅಂಚೆ ಇಲಾಖೆಯ ಸಭಾಂಗಣದ 6ನೇ ಮಹಡಿಯಲ್ಲಿ ಜರುಗಲಿದೆ. ಕಾರ್ಯಕ್ರಮದ ನೇತೃತ್ವವನ್ನು ಹಾಪ್‌ಕಾಮ್ಸ್ ಅಧ್ಯಕ್ಷರಾದ ಎ.ಎಸ್.ಚಂದ್ರೇಗೌಡ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಮಿರ್ಜಿ ಉಮೇಶ ಶಂಕರ ಅವರು ವಹಿಸಲಿದ್ದಾರೆ.

HOPCOMS

ಏನಿದು "ರೈತರ ಅಂಚೆ" ಯೋಜನೆ?

ಬೆಂಗಳೂರಿನ ಎಲ್ಲ ಬಡಾವಣೆಗಳಲ್ಲಿ ಹಾಪ್‌ಕಾಮ್ಸ್ ಮಳಿಗೆಗಳು ಲಭ್ಯವಿಲ್ಲದ ಕಾರಣ, ಗ್ರಾಹಕರು ತಾವು ಇದ್ದ ಜಾಗದಿಂದಲೇ ತಮಗೆ ಬೇಕಾದ ಹಣ್ಣು ಮತ್ತು ತರಕಾರಿಗಳನ್ನು ಆನ್‌ಲೈನ್ ಮೂಲಕ ಆರ್ಡರ್ ಮಾಡಬಹುದು. ಆರ್ಡರ್ ಮಾಡಿದ 24 ಗಂಟೆಗಳ ಒಳಗಾಗಿ ಭಾರತೀಯ ಅಂಚೆ ಇಲಾಖೆಯು ಆ ಉತ್ಪನ್ನಗಳನ್ನು ಗ್ರಾಹಕರ ಮನೆ ಬಾಗಿಲಿಗೆ ಸುರಕ್ಷಿತವಾಗಿ ತಲುಪಿಸಲಿದೆ. ಪ್ರತಿನಿತ್ಯ ನೇರವಾಗಿ ರೈತರಿಂದ ಖರೀದಿಸಿದ ತಾಜಾ ತರಕಾರಿ ಹಾಗೂ ಹಣ್ಣುಗಳು ಗ್ರಾಹಕರಿಗೆ ಸಿಗಲಿವೆ.

ಮಾವುಪ್ರಿಯರಿಗೂ ಸಿಹಿಸುದ್ದಿ

ಪ್ರಸ್ತುತ ಮಾವು ಮೇಳ ಚಾಲ್ತಿಯಲ್ಲಿದ್ದು, ನೈಸರ್ಗಿಕವಾಗಿ ಮಾಗಿಸಿದ ವಿವಿಧ ತಳಿಗಳ ಉತ್ಕೃಷ್ಟ ಮಾವಿನ ಹಣ್ಣುಗಳು 3 ಕೆ.ಜಿ ಮತ್ತು 5 ಕೆ.ಜಿ ಬಾಕ್ಸ್‌ಗಳ ಆಕರ್ಷಕ ಪ್ಯಾಕಿಂಗ್‌ನಲ್ಲಿ ಆನ್‌ಲೈನ್‌ನಲ್ಲಿ ಖರೀದಿಸಲು ಲಭ್ಯವಿವೆ. ಗ್ರಾಹಕರು ಒಂದೇ ವೇದಿಕೆಯಲ್ಲಿ ಬಹು ಆಯ್ಕೆಯ ವಿವಿಧ ಹಣ್ಣು ಮತ್ತು ತರಕಾರಿಗಳನ್ನು ಆರಿಸಿಕೊಳ್ಳಬಹುದು. ಗ್ರಾಹಕರು ತಮಗೆ ಅನುಕೂಲಕರವಾದ ಸಮಯದಲ್ಲಿ ಎಲ್ಲಿದ್ದರೂ ಆರ್ಡರ್ ಮಾಡಬಹುದಾಗಿದ್ದು, ಸಮಯ ಉಳಿತಾಯವಾಗುತ್ತದೆ. ಜೊತೆಗೆ ಡಿಜಿಟಲ್ ಪಾವತಿ ಇರುವುದರಿಂದ ವ್ಯವಹಾರವು ಅತ್ಯಂತ ಪಾರದರ್ಶಕವಾಗಿರುತ್ತದೆ.

ಸಿನಿಮಾ ಪ್ರಿಯರಿಗೆ ಸುವರ್ಣಾವಕಾಶ: ಊಟ, ವಸತಿಯೊಂದಿಗೆ 6 ತಿಂಗಳ ಉಚಿತ ಫಿಲ್ಮ್ ಮೇಕಿಂಗ್ ಕೋರ್ಸ್‌ಗೆ ಅರ್ಜಿ ಆಹ್ವಾನ
ಸಿನಿಮಾ ಪ್ರಿಯರಿಗೆ ಸುವರ್ಣಾವಕಾಶ: ಊಟ, ವಸತಿಯೊಂದಿಗೆ 6 ತಿಂಗಳ ಉಚಿತ ಫಿಲ್ಮ್ ಮೇಕಿಂಗ್ ಕೋರ್ಸ್‌ಗೆ ಅರ್ಜಿ ಆಹ್ವಾನ

ಆನ್‌ಲೈನ್‌ನಲ್ಲಿ ಆರ್ಡರ್ ಮಾಡುವುದು ಹೇಗೆ?

ಗ್ರಾಹಕರು ಹಾಪ್‌ಕಾಮ್ಸ್‌ನ ಅಧಿಕೃತ ವೆಬ್‌ಸೈಟ್ https://hopcomsbengaluru.com ಗೆ ಭೇಟಿ ನೀಡಿ ಸರಳವಾದ 4 ಹಂತಗಳಲ್ಲಿ ತಮಗೆ ಬೇಕಾದ ವಸ್ತುಗಳನ್ನು ಆರ್ಡರ್ ಮಾಡಬಹುದು.

ಮೊದಲು ವೆಬ್‌ಸೈಟ್ ಲಿಂಕ್ ಓಪನ್ ಮಾಡಿ, ಹೊಸ ಬಳಕೆದಾರರಾಗಿದ್ದರೆ "Sign Up" ಆಯ್ಕೆ ಮಾಡಿಕೊಂಡು ನಿಮ್ಮ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ ನೋಂದಾಯಿಸಿಕೊಳ್ಳಬೇಕು. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ OTP ಅನ್ನು ಸ್ಕ್ರೀನ್ ಮೇಲೆ ನಮೂದಿಸಿ, ಖಾತೆಯನ್ನು ಖಚಿತಪಡಿಸಿಕೊಳ್ಳಬೇಕು. ಲಾಗಿನ್ ಪುಟಕ್ಕೆ ಹೋಗಿ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ "Login" ಬಟನ್ ಕ್ಲಿಕ್ ಮಾಡಬೇಕು.

ಲಾಗಿನ್ ಆದ ಬಳಿಕ ಹೋಮ್ ಪೇಜ್‌ನಲ್ಲಿ ನಿಮ್ಮ ನಗರ ಮತ್ತು ಪಿನ್‌ಕೋಡ್ ಅನ್ನು ನಮೂದಿಸಬೇಕು. ನಂತರ ನಿಮಗೆ ಬೇಕಾದ ತಾಜಾ ಉತ್ಪನ್ನಗಳನ್ನು ಆಯ್ದುಕೊಂಡು ಕಾರ್ಟ್‌ಗೆ (Cart) ಸೇರಿಸಿ, ಆನ್‌ಲೈನ್ ಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ರೈತರಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ಹಾಗೂ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುವ ಈ ವಿನೂತನ "ರೈತರ ಅಂಚೆ" ಡಿಜಿಟಲ್ ವ್ಯವಸ್ಥೆಯನ್ನು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕಾಗಿ ಹಾಪ್‌ಕಾಮ್ಸ್ ಸಂಸ್ಥೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+